Electric Bus: 921 ಎಲೆಕ್ಟ್ರಿಕ್ ಬಸ್ ಖರೀದಿಗೆ ಟಾಟಾ ಮೋಟರ್ಸ್ ಅಂಗಸಂಸ್ಥೆ ಟಿಎಂಎಲ್ ಜತೆ ಬಿಎಂಟಿಸಿ ಒಪ್ಪಂದ
ಟಾಟಾ ಸ್ಟಾರ್ಬಸ್ ಎಲೆಕ್ಟ್ರಿಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಸ್ ಆಗಿದ್ದು, ಉತ್ತಮ ವಿನ್ಯಾಸದೊಂದಿಗೆ 12 ಮೀಟರ್ ಉದ್ದವಿದೆ. ಅತ್ಯುತ್ತಮ ಗುಣಲಕ್ಷಣಗಳನ್ನು ಒಳಗೊಂಡಿದ್ದು, ಆರಾಮದಾಯಕ ಪ್ರಯಾಣಕ್ಕೆ ಪೂರಕವಾಗಿದೆ ಎಂದು ಟಾಟಾ ಮೋಟರ್ಸ್ ತಿಳಿಸಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಣೆಗಾಗಿ 921 ಎಲೆಕ್ಟ್ರಿಕ್ ಬಸ್ (Electric Bus) ಖರೀದಿಸಲು ಟಾಟಾ ಮೋಟರ್ಸ್ (Tata Motors) ಅಂಗಸಂಸ್ಥೆ ಟಿಎಂಎಲ್ (TML) ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಜತೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವಾಗಿ ಟಾಟಾ ಮೋಟರ್ಸ್ ಮತ್ತು ಬಿಎಂಟಿಸಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿವೆ. ಒಪ್ಪಂದದ ಪ್ರಕಾರ, 12 ವರ್ಷಗಳ ಕಾರ್ಯಾಚರಣೆಗಾಗಿ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿಗೆ ಪೂರೈಕೆ ಮಾಡಬೇಕಿದೆ.
ಟಾಟಾ ಸ್ಟಾರ್ಬಸ್ ಎಲೆಕ್ಟ್ರಿಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಸ್ ಆಗಿದ್ದು, ಉತ್ತಮ ವಿನ್ಯಾಸದೊಂದಿಗೆ 12 ಮೀಟರ್ ಉದ್ದವಿದೆ. ಅತ್ಯುತ್ತಮ ಗುಣಲಕ್ಷಣಗಳನ್ನು ಒಳಗೊಂಡಿದ್ದು, ಆರಾಮದಾಯಕ ಪ್ರಯಾಣಕ್ಕೆ ಪೂರಕವಾಗಿದೆ ಎಂದು ಟಾಟಾ ಮೋಟರ್ಸ್ ತಿಳಿಸಿದೆ.
ಇದನ್ನೂ ಓದಿ: ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ: ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಪ್ರಕಟಿಸಿದ ಸಚಿವ ಶ್ರೀರಾಮುಲು
ಒಪ್ಪಂದದ ಬಗ್ಗೆ ಬಿಎಂಟಿಸಿ ಕೂಡ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಬೆ೦ಗಳೂರಿನ ಸಾರ್ವಜನಿಕರಿಗೆ ಇನ್ನೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಬೆ೦ಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಟಾಟಾ ಮೋಟರ್ಸ್ ಅಂಗಸಂಸ್ಥೆ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ. ಪರಿಸರಸ್ನೇಹಿ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಬಸ್‌ಗಳನ್ನು ತನ್ನ ಪಡೆಗೆ ಸೇರಿಸುವುದರ ಮುಂದುವರಿದ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
FAME-II ಯೋಜನೆಯಲ್ಲಿ ಬೆಂ.ಮ.ಸಾ.ಸಂಸ್ಥೆಯು ಮತ್ತು M/s. ಟಿ. ಎಮ್.ಎಲ್ ಸ್ಮಾರ್ಟ್ ಸಿಟಿ ಮೋಬಿಲಿಟಿ ಸೊಲ್ಯೂಷನ್ ಲಿಮಿಟೆಡ್ ರವರೊಂದಿಗೆ 921 ವಿದ್ಯುತ್ ಚಾಲಿತ ವಾಹನಗಳ ಪೂರೈಸುವ ಒಪ್ಪಂದಕ್ಕೆ ಸಹಿ ಮಾಡಲಾಯಿತು. Signing Agreement,BMTC and M/s.TML Smart City Mobility Solutions Ltd for 921 Electric buses under FAME-II pic.twitter.com/VFmc5laZk6
— BMTC (@BMTC_BENGALURU) December 17, 2022
730 ಎಲೆಕ್ಟ್ರಿಕ್ ಬಸ್ ಪೂರೈಕೆ
ದೇಶದಾದ್ಯಂತ ಈವರೆಗೆ 730 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮಾಡಲಾಗಿದೆ. ಈ ಬಸ್ಗಳು ಈಗಾಗಲೇ 5.5 ಕೋಟಿ ಕಿಲೋಮೀಟರ್ ಸಂಚರಿಸಿವೆ ಎಂದೂ ಟಾಟಾ ಮೋಟರ್ಸ್ ತಿಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ