ಮದುವೆ, ಪ್ರವಾಸಕ್ಕೂ ಬಿಎಂಟಿಸಿ ಬಸ್: ಯಾವ ಬಸ್​​​ಗೆ ಎಷ್ಟು ಬಾಡಿಗೆ? ಇಲ್ಲಿದೆ ವಿವರ

ಇನ್ಮುಂದೆ ಮದುವೆ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಬಿಎಂಟಿಸಿ ಬಸ್​ಗಳು ಬಾಡಿಗೆಗೆ ದೊರೆಯಲಿವೆ. ವಿವಿಧ ಮಾದರಿಯ ಬಸ್​ಗಳಿಗೆ ವಿವಿಧ ರೀತಿಯ ಬಾಡಿಗೆ ನಿಗದಿಪಡಿಸಿ ಬಿಎಂಟಿಸಿ ವಿವರ ಬಿಡುಗಡೆ ಮಾಡಿದೆ. ಯಾವ ಬಸ್​ಗೆ ಎಷ್ಟಾಗುತ್ತದೆ ಬಾಡಿಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಮದುವೆ, ಪ್ರವಾಸಕ್ಕೂ ಬಿಎಂಟಿಸಿ ಬಸ್: ಯಾವ ಬಸ್​​​ಗೆ ಎಷ್ಟು ಬಾಡಿಗೆ? ಇಲ್ಲಿದೆ ವಿವರ
ಬಿಎಂಟಿಸಿ
Follow us
Kiran Surya
| Updated By: Ganapathi Sharma

Updated on: Jan 08, 2024 | 10:55 AM

ಬೆಂಗಳೂರು, ಜನವರಿ 8: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್​ಗಳು ಇನ್ನು ಮುಂದೆ ಮದುವೆ ಸಮಾರಂಭ, ಪ್ರವಾಸ ಇತ್ಯಾದಿಗಳ ಬಾಡಿಗೆಗೂ ದೊರೆಯಲಿವೆ. ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ವಿವಾಹ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಬಸ್ ಒದಗಿಸಲು ಸಂಸ್ಥೆ ಮುಂದಾಗಿದೆ. ವಿವಿಧ ಮಾದರಿಯ ಬಸ್​ಗಳ ವಿವಿಧ ರೀತಿಯ ಬಾಡಿಗೆ ನಿಗದಿಪಡಿಸಿ ಬಿಎಂಟಿಸಿ ವಿವರ ಬಿಡುಗಡೆ ಮಾಡಿದೆ.

  1. ಬಿಬಿಎಂಟಿಸಿ ಪುಷ್ಪಕ್ (47 ಆಸನ) ಬಸ್ಸಿಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 55 ರೂಪಾಯಿ‌ ನಿಗದಿ ಮಾಡಲಾಗಿದ್ದು, ಒಟ್ಟು 8,250 ದರ ನಿಗದಿ ಮಾಡಲಾಗಿದೆ.
  2. 12 ಗಂಟೆ ಅವಧಿಗೆ ಕಿಲೋ ಮೀಟರ್​ಗೆ 50 ರೂಪಾಯಿಯಂತೆ ಬಾಡಿಗೆ ದರ 10 ಸಾವಿರ ನಿಗದಿ ಮಾಡಲಾಗಿದೆ.
  3. 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 45 ರೂಪಾಯಿಯಂತೆ 11,250 ರೂ. ಬಾಡಿಗೆ ನಿಗದಿಯಾಗಿದೆ.
  4. 24 ಗಂಟೆಗೆ ನಗರದ ಹೊರಗಡೆ ಪ್ರಯಾಣಕ್ಕೆ ಕಿ.ಮೀಗೆ 45 ರೂಪಾಯಿಯಂತೆ 11,250 ರೂ. ಬಾಡಿಗೆ ನಿಗದಿಯಾಗಿದೆ.
  5. ಸಾಮಾನ್ಯ ಬಸ್ (44 ಆಸನ) ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್​​ಗೆ 50 ರೂಪಾಯಿಯಂತೆ‌ ಒಟ್ಟು 7,500 ರೂ. ದರ ನಿಗದಿ ಮಾಡಲಾಗಿದೆ.
  6. 12 ಗಂಟೆ ಅವಧಿಗೆ ಕಿಲೋ ಮೀಟರ್​​​ಗೆ 48 ರೂಪಾಯಿಯಂತೆ 9600 ರೂ. ಬಾಡಿಗೆ ದರ ನಿಗದಿಪಡಿಸಲಾಗಿದೆ.
  7. 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 44 ರೂಪಾಯಿಯಂತೆ 11,000 ರೂ. ಬಾಡಿಗೆ ನಿಗದಿಪಡಿಸಲಾಗಿದೆ.
  8. 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 45 ರೂಪಾಯಿಯಂತೆ 11,250 ರೂ. ಬಾಡಿಗೆ ನಿಗದಿಪಡಿಸಲಾಗಿದೆ.
  9. ಬಿಎಂಟಿಸಿ ಮಿಡಿ (31 ಆಸನ) ಬಸ್​​​ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 47 ರೂಪಾಯಿ‌ಯಂತೆ ಒಟ್ಟು 7,050 ರೂ. ದರ ನಿಗದಿ ಮಾಡಲಾಗಿದೆ.
  10. 12 ಗಂಟೆ ಅವಧಿಗೆ ಕಿಲೋ ಮೀಟರ್ ಗೆ 45 ರೂಪಾಯಿಯಂತೆ 9000 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
  11. 24 ಗಂಟೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 42 ರೂಪಾಯಿಯಂತೆ 10,500 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
  12. 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 42 ರೂಪಾಯಿಯಂತೆ 12,600 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
  13. ಬಿಎಂಟಿಸಿ ಬಿಎಸ್ 6 (41 ಆಸನ) ಬಸ್​ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 60 ರೂಪಾಯಿ‌ ನಿಗದಿ ಮಾಡಲಾಗಿದ್ದು, ಒಟ್ಟು 9000 ರೂ. ದರ ನಿಗದಿಪಡಿಸಲಾಗಿದೆ.
  14. 12 ಗಂಟೆ ಅವಧಿಗೆ ಕಿಲೋ ಮೀಟರ್ ಗೆ 55 ರೂಪಾಯಿಯಂತೆ 11,000 ರೂ, 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 50 ರೂಪಾಯಿಯಂತೆ ಬಾಡಿಗೆ 11,500 ರೂ, 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 5 ರೂಪಾಯಿಯಂತೆ 15,000 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
  15. 40 ಆಸನದ ಎಲೆಕ್ಟ್ರಿಕ್ ಬಸ್​​ಗೆ 24 ಗಂಟೆ ಅವಧಿಗೆ 15,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. 33 ಆಸನದ ಬಸ್​​ಗೆ 24 ಗಂಟೆ ಅವಧಿಗೆ 13,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.
  16. ಎಸಿ ಬಸ್​ಗಳಿಗೆ 12 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯಂತೆ 14,000 ರೂ, 24 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯಂತೆ 20 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್