ಆನೇಕಲ್: ಬೆಂಗಳೂರಿನ ಕೆಮಿಕಲ್ ಕಂಪನಿ ಒಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಘಟನೆ ನಡೆದಿದೆ. ಅತ್ತಿಬೆಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟವಾಗಿದೆ. ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದಿಂದ ಗಾಳಿಯಲ್ಲಿ ವಾಸನೆ ಉಂಟಾಗಿದೆ. ಗಾಳಿಯಲ್ಲೆಲ್ಲಾ ಕೆಮಿಕಲ್ ತುಂಬಿ ಬಟ್ಟೆಗಳಲ್ಲಿಯೂ ವಾಸನೆ ಉಂಟಾಗಿದೆ. ಈ ಕೆಮಿಕಲ್ ವಾಸನೆಗೆ ಹೆದರಿ ಜನರು ಫ್ಯಾಕ್ಟರಿ ಸಮೀಪಕ್ಕೆ ತೆರಳುತ್ತಿಲ್ಲ.
ಬಾಯ್ಲರ್ ಬ್ಲಾಸ್ಟ್ಗೆ ಇಡೀ ಪ್ರದೇಶದಲ್ಲಿ ಕೆಮಿಕಲ್ ವಾಸನೆ ಹರಡಿದೆ. ಉಸಿರು ತೆಗೆದುಕೊಳ್ಳಲೂ ಸ್ಥಳೀಯರು ಯೋಚಿಸುವಂತಾಗಿದೆ. ಕೂಡಲೇ ಕಂಪನಿ ಸ್ಥಳಾಂತರಿಸಲು ಸ್ಥಳೀಯರು ಆಗ್ರಹಿಸಿದ್ದಾರೆ. ಲೇಕ್ ಕೆಮಿಕಲ್ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಬಾಯ್ಲರ್ ಬ್ಲಾಸ್ಟ್ನಿಂದ ಮೂರು ನಾಲ್ಕು ಕಿ.ಮಿ.ವರೆಗೂ ವಿಷಮಯ ವಾತಾವರಣ ಉಂಟಾಗಿದೆ.
ಅತ್ತಿಬೆಲೆ, ವಡ್ಡರಪಾಳ್ಯ ಮಾಯಸಂದ್ರ, ಮುಚ್ಚೆಂದ, ಕಂಬಳೀಪುರ, ಇಂಚಗೂರು, ಮಯಾಸಂದ್ರ, ಬಾಂಡೇಪುರ ವರೆಗೂ ಕೆಮಿಕಲ್ ಘಾಟು ಹಬ್ಬಿದೆ. ಅತ್ತಿಬೆಲೆ ಸಮೀಪದ ವಡ್ಡರಪಾಳ್ಯದಲ್ಲಿರುವ ಲೇಕ್ ಕೆಮಿಕಲ್ ಫ್ಯಾಕ್ಟರಿ ಬಾಯ್ಲರ್ ಸ್ಫೋಟ ಹಲವು ಪ್ರದೇಶಗಳಿಗೆ ತೊಂದರೆ ಉಂಟುಮಾಡಿದೆ.
ಲೇಕ್ ಕೆಮಿಕಲ್ ಕಂಪನಿಯಿಂದ ಫಾರ್ಮಾಸಿಟಿಕಲ್ ವಸ್ತುಗಳ ಉತ್ಪಾದನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಮಿಥೇನಾಲ್ ಹಾಗೂ ಬೇರೆ ಬೇರೆ ರಾಸಾಯನಿಕಗಳಿಂದ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತದೆ. ರಾಜಸ್ಥಾನಿ ಮೂಲದವರ ಒಡೆತನದ ಲೇಕ್ ಕೆಮಿಕಲ್ಸ್ ಕಂಪನಿ ಇದು ಎಂದು ಮಾಹಿತಿ ಲಭಿಸಿದೆ. ಬಾಯ್ಲರ್ ಸ್ಫೋಟದ ಕಾರಣ ತಿಳಿಯಲು ಅತ್ತಿಬೆಲೆ ಪೊಲೀಸರು ತಜ್ಞರ ಮೊರೆ ಹೋಗಿದ್ದಾರೆ.
ಕಳೆದ ದಿನಗಳಲ್ಲಿ ಬೆಂಗಳೂರಿನಲ್ಲಿ ಕೆಲವು ಸ್ಫೋಟ ಘಟನೆಗಳು ಘಟಿಸಿವೆ
ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ನಿನ್ನೆ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಾಹಿತಿಗಳು ಲಭ್ಯವಾಗಿತ್ತು. ಸ್ಫೋಟ ಸಂಭವಿಸಲು ರೀಲ್ ಪಟಾಕಿಯೇ ಕಾರಣ ಎಂದು ಪ್ರಾಥಮಿಕ ವಿವರಗಳು ಲಭಿಸಿತ್ತು. ರೀಲ್ ಪಟಾಕಿಯ ದೊಡ್ಡ ಡ್ರಮ್ ನೆಲಕ್ಕೆ ಬಿದ್ದು ಸ್ಫೋಟ ಆಗಿದೆ. ಎಫ್ಎಸ್ಎಲ್, ಬಾಂಬ್ ನಿಷ್ಕ್ರಿಯ ತಂಡದಿಂದ ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ರಿಂಗ್ ಕ್ಯಾಪ್ಸ್ ಗನ್ಗಳಲ್ಲಿ ಪಟಾಕಿ ಹಾಕಿ ಹೊಡೆಯಲಾಗುತ್ತೆ. ಹಿಂದೆ ಮಕ್ಕಳು ರೀಲ್ ಪಟಾಕಿಯಿಟ್ಟು ನೆಲಕ್ಕೆ ಹೊಡೀತಿದ್ದರು. ನಟ್ಟು ಬೋಲ್ಟ್ ನಡುವೆ ರೀಲ್ ಪಟಾಕಿಯಿಟ್ಟು ಹೊಡೀತಿದ್ರು. ಇಲ್ಲೂ ಕೂಡ ಬಾಕ್ಸ್ ಬಿದ್ದಾಗ ಅದೇ ರೀತಿಯ ಘಟನೆ ಆಗಿದೆ. ಪಟಾಕಿ ರೀಲ್ ದೊಡ್ಡದಿದ್ದು, ನೆಲಕ್ಕೆ ಬಿದ್ದಾಗ ಸ್ಫೋಟಿಸಿದೆ ಎಂದು ಹೇಳಲಾಗಿತ್ತು.
ವಿ.ವಿ. ಪುರಂ ಠಾಣೆಗೆ ಭಯೋತ್ಪಾದಕ ನಿಗ್ರಹ ದಳದ ತಂಡ ಭೇಟಿ ನೀಡಿತ್ತು. ಎಸಿಪಿ ವೇಣುಗೋಪಾಲ್ ನೇತೃತ್ವದ ಎಟಿಸಿ ತಂಡ ಭೇಟಿ ನೀಡಿ, ಸ್ಫೋಟದ ಹಿನ್ನೆಲೆ ಮಾಹಿತಿ ಕಲೆ ಹಾಕುಲಾಗಿತ್ತು. ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪಟಾಕಿ ಗೋದಾಮು ಮಾಲೀಕ ಗಣೇಶ್ ಬಾಬು ಬಂಧಿಸಲಾಗಿತ್ತು. ವಿ.ವಿ. ಪುರಂ ಠಾಣೆ ಪೊಲೀಸರಿಂದ ಗಣೇಶ್ ಬಾಬು ಅರೆಸ್ಟ್ ಮಾಡಲಾಗಿತ್ತು. ಗಾಯಾಳು ಗಣಪತಿ ದೂರಿನಂತೆ ಗಣೇಶ್ ಬಾಬು ಬಂಧನವಾಗಿತ್ತು. ಘಟನೆ ಸಂಭವಿಸಿದ ಕೂಡಲೇ ಬಾಬುರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ಬಳಿಕ ಅರೆಸ್ಟ್ ಮಾಡಿದ್ದರು.
ಇತ್ತೀಚೆಗಷ್ಟೇ ಬೆಂಗಳೂರಿನ ಫ್ಲಾಟ್ ಒಂದರಲ್ಲಿ ಸ್ಫೋಟ ಸಂಭವಿಸಿ ತಾಯಿ- ಮಗಳು ನಿಧನರಾಗಿದ್ದರು. ಆ ಬಳಿಕ, ನಿನ್ನೆ ಗೋದಾಮಿನಲ್ಲಿ ನಡೆದ ಸ್ಫೋಟದಲ್ಲಿಯೂ ಇಬ್ಬರು ಮೃತಪಟ್ಟಿದ್ದರು. ಇದೀಗ ನಗರದ ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿರುವ ಬಗ್ಗೆ ತಿಳಿದುಬಂದಿದೆ. ಗಾಳಿಯ ತುಂಬಾ ವಾಸನೆ ತುಂಬಿಕೊಂಡಿದೆ. ಬಟ್ಟೆಯೂ ವಾಸನೆ ಬರುತ್ತಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭಿಸಬೇಕಿದೆ.
ಇದನ್ನೂ ಓದಿ: ಬೆಂಗಳೂರು: ಪಟಾಕಿ ಸ್ಫೋಟದಿಂದ ಇಷ್ಟು ಪ್ರಮಾಣದ ಅವಘಡ ಆಗಲ್ಲ- ಎಫ್ಎಸ್ಎಲ್ ತಜ್ಞರ ಹೇಳಿಕೆ
ಇದನ್ನೂ ಓದಿ: ಬೆಂಗಳೂರು ಅಗ್ನಿ ಅವಘಡ: ತಾಯಿ- ಮಗಳು ಸಜೀವ ದಹನ; ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು ಕುಟುಂಬಸ್ಥರು
Published On - 2:57 pm, Fri, 24 September 21