ಪವಿತ್ರಾ ಕುರ್ತಕೋಟಿಗೆ ಸೈಕಲ್ ಪ್ರದಾನ; ಟಿವಿ9 ಉತ್ತಮ ಕೆಲಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಗದಗ ಜಿಲ್ಲೆಯ ಕುಮಾರಿ ಪವಿತ್ರಾ ಕುರ್ತಕೋಟಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸೈಕಲ್ ಪ್ರದಾನ ಮಾಡಿದರು.

ಪವಿತ್ರಾ ಕುರ್ತಕೋಟಿಗೆ ಸೈಕಲ್ ಪ್ರದಾನ; ಟಿವಿ9 ಉತ್ತಮ ಕೆಲಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ
ಪವಿತ್ರಾ ಕುರ್ತಕೋಟಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸೈಕಲ್ ಪ್ರದಾನ ಮಾಡಿದರು
Follow us
| Updated By: ಆಯೇಷಾ ಬಾನು

Updated on: Sep 24, 2021 | 11:48 AM

ಬೆಂಗಳೂರು: ಟಿವಿ9 ಉತ್ತಮವಾದ ಕೆಲಸ ಮಾಡುತ್ತಿದೆ. ಟಿವಿ9 ವರದಿ ನೋಡಿ ಖೇಲೋ ಇಂಡಿಯಾಗೆ ಆಯ್ಕೆ ಆಗಿದ್ದ ಯುವತಿಗೆ ಸೈಕಲ್ ವಿತರಣೆ ಮಾಡಿದ್ದೇನೆ. ನನಗೆ ಸಂತೃಪ್ತಿ ಭಾವನೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಿವಿ9ಗೆ ಧನ್ಯವಾದ ತಿಳಿಸಿದ್ದಾರೆ.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಗದಗ ಜಿಲ್ಲೆಯ ಕುಮಾರಿ ಪವಿತ್ರಾ ಕುರ್ತಕೋಟಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸೈಕಲ್ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಪಟುವಾಗಿರುವ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ಟಿ.ವಿ.9 ಸಂದರ್ಶನದ ಸಂದರ್ಭದಲ್ಲಿ ತಿಳಿದು ಬಂದ ಹಿನ್ನೆಲೆಯಲ್ಲಿ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು. ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಯೋಜನಾ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಮಾಡಿದ್ದಾರೆ. ಸರ್ಕಾರದ ಅನುದಾನ ಪಡೆಯದೆ ದೇಣಿಗೆ ಪಡೆದು ಈ ಕಾರ್ಯವನ್ನು ಮಾಡಿರುವುದಕ್ಕಾಗಿ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಟ್ರಾಕ್ ಪವಿತ್ರಾ ಕುರ್ತಕೋಟಿ ಪಟಿಯಾಲದಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು. ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಟ್ರಾಕ್ ನ್ನು ವಿಜಯಪುರದ ಮೇಲೊಡ್ರೋಮ್ ಶೀರ್ಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಈ ಸೈಕಲ್ ನ್ನು ಕೆನಡಾ ದೇಶದಿಂದ ತರಿಸಲಾಗಿದೆ. ಇದರ ವೆಚ್ಚ 5 ಲಕ್ಷ ರೂಪಾಯಿ. ಈ ವೆಚ್ಚವನ್ನು ಎಂಬೆಸ್ಸೆ, ಬ್ಲಾಸಂ ಆಸ್ಪತ್ರೆ ಹಾಗೂ ಮಧುಸೂಧನ ಎಂಬುವರು ಸಿಎಸ್ ಆರ್ ನಿಧಿಯಿಂದ ಭರಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಪ್ರತಿಭಾವಂತ ಕ್ರೀಡಾಪಟುವನ್ನು ಗುರುತಿಸುವ ಕೆಲಸ ಟಿವಿ9 ಮಾಡಿದೆ. ಟಿವಿ9 ವರದಿ ನೋಡಿ ಸಿಎಂ ಸ್ಪೀಕಿಂಗ್ ಕಾರ್ಯಕ್ರಮದಲ್ಲಿ ಯುವತಿಗೆ ಸೈಕಲ್ ನೀಡುವ ಭರವಸೆಯನ್ನು ಸಿಎಂ ನೀಡಿದ್ದರು. ಅದರಂತೆ ಇಂದು ಯುವತಿಗೆ ಸೈಕಲ್ ವಿತರಣೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ನಾರಾಯಣಗೌಡ, ಸಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ , ಬಿ.ಶ್ರೀರಾಮುಲು, ಬಿ.ಡಿ.ಎ.ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಯೋಜನಾ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Tv9 Impact: ವಿಶ್ವ ಮಟ್ಟದಲ್ಲಿ ಮಿಂಚಲು ಸನ್ನದ್ಧಳಾದ ಪವಿತ್ರಾಗೆ ಸಿಎಂ ಬೊಮ್ಮಾಯಿರಿಂದ 5 ಲಕ್ಷ ರೂ ಮೌಲ್ಯದ ಸೈಕಲ್ ಉಡುಗೊರೆ!