ಎತ್ತಿನಗಾಡಿ ಚಲೋ ಆಯ್ತು, ಸೈಕಲ್ ಜಾಥಾ ಆಯ್ತು, ಇದೀಗ ಕಾಂಗ್ರೆಸ್​ನಿಂದ ಟಾಂಗಾ ಜಾಥಾ!

ಟಾಂಗ ಜಾಥಾ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಕೆಪಿಸಿಸಿ ಕಛೇರಿ ಬಳಿ ಟಾಂಗಾಗಳು ಬಂದಿದ್ದು, ಟಾಂಗಾಗಳ ಮೂಲಕ‌ ಕೈ ನಾಯಕರು ವಿಧಾನಸೌಧ ತಲುಪಲಿದ್ದಾರೆ.

ಎತ್ತಿನಗಾಡಿ ಚಲೋ ಆಯ್ತು, ಸೈಕಲ್ ಜಾಥಾ ಆಯ್ತು, ಇದೀಗ ಕಾಂಗ್ರೆಸ್​ನಿಂದ ಟಾಂಗಾ ಜಾಥಾ!
ಕಾಂಗ್ರೆಸ್​ನಿಂದ ಟಾಂಗಾ ಜಾಥಾ


ಬೆಂಗಳೂರು: ಬೆಲೆ ಏರಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಕೈ ನಾಯಕರು, ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಎತ್ತಿನಗಾಡಿ ಚಲೋ, ಸೈಕಲ್ ಜಾಥಾ ಬಳಿಕ, ಇದೀಗ ಕಾಂಗ್ರೆಸ್​ನಿಂದ ಟಾಂಗಾ ಜಾಥಾ ನಡೆಯುತ್ತಿದೆ. ಮೂರನೇ ಬಾರಿ ವಿಧಾನಸೌಧಕ್ಕೆ ಟಾಂಗದಲ್ಲಿ ಬರುವ ಮೂಲಕ ವಿನೂತನ ಹೋರಾಟಕ್ಕೆ ಕೈ ನಾಯಕರು ಮುಂದಾಗಿದ್ದಾರೆ. ವಿಪಕ್ಷ ನಾಯಕ‌ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಾಥಾ ನಡೆಯುತ್ತಿದೆ.

ಟಾಂಗ ಜಾಥಾ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಕೆಪಿಸಿಸಿ ಕಛೇರಿ ಬಳಿ ಟಾಂಗಾಗಳು ಬಂದಿದ್ದು, ಕೆಪಿಸಿಸಿ ಕಚೇರಿಯಿಂದ ಟಾಂಗಾಗಳ ಮೂಲಕ‌ ಕೈ ನಾಯಕರು ವಿಧಾನಸೌಧ ತಲುಪಲಿದ್ದಾರೆ. ಕಾಂಗ್ರೆಸ್ ಜಾಥಾದಲ್ಲಿ 50ಕ್ಕೂ ಹೆಚ್ಚು ಟಾಂಗಾಗಳು ಭಾಗಿಯಾಗಲಿವೆ.

ಕೆಪಿಸಿಸಿ ಮುಂಬಾಗ ಸ್ಲೊ ಮೂವಿಂಗ್ ಟ್ರಾಫಿಕ್
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಹಿನ್ನೆಲೆ ಕೆಪಿಸಿಸಿ ಬಳಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಗಮಿಸಿದ್ದಾರೆ. ಇನ್ನು ಪ್ರತಿಭಟನೆಯಿಂದಾಗಿ ಕೆಪಿಸಿಸಿ ಮುಂಬಾಗ ಸ್ಲೊ ಮೂವಿಂಗ್ ಟ್ರಾಫಿಕ್ ಸೃಷ್ಟಿಯಾಗಿದೆ. ಸಂಚಾರಿ ಪೊಲೀಸರಿಂದ ಟ್ರಾಫಿಕ್ ಸಮಸ್ಯೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ವಿಧಾನಸೌಧ ತಲುಪಿದ ಕೈ ನಾಯಕರ ಟಾಂಗಾ ಜಾಥಾ
ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಟಂಗಾ ಱಲಿ ನಡೆಸುತ್ತಿದ್ದಾರೆ. ಕೈ ನಾಯಕರ ಟಾಂಗಾ ಱಲಿ ಸದ್ಯ ವಿಧಾನಸೌಧ ತಲುಪಿದೆ. ಟಾಂಗಾದಲ್ಲಿ ವಿಧಾನಸೌಧಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ ಆಗಮಿಸಿದ್ದಾರೆ.

ಇದನ್ನೂ ಓದಿ:
ಬೆಂಗಳೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ; ಟ್ರಾಫಿಕ್ ಸಮಸ್ಯೆ ಸಾಧ್ಯತೆ ಹೆಚ್ಚು

ವಿಧಾನಸೌಧದೊಳಗೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತೆ, ಆಕಾಶ ಬಿದ್ದು ಹೋಗುತ್ತಾ; ಸಿದ್ದರಾಮಯ್ಯ ಕಿಡಿ

Read Full Article

Click on your DTH Provider to Add TV9 Kannada