Crime Updates: 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ, ಮಾರಕಾಸ್ತ್ರ ತೋರಿಸಿ ಡೆಲಿವರಿ ಬಾಯ್ ಬೈಕ್ ಕಳ್ಳತನ
ಟೆಲಿಕಾಂ ಲೇಔಟ್ನಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದ್ದ ಅಪಾರ್ಟ್ಮೆಂಟ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು 9 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.
ಬೆಂಗಳೂರು: ಲಂಚ ಸ್ವೀಕರಿಸುವಾಗ ಬೆಸ್ಕಾಂ ಎಇಇ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ. ಅಪಾರ್ಟ್ಮೆಂಟ್ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು 5 ಲಕ್ಷ ರೂ. ಸ್ವೀಕರಿಸುವಾಗ ಬೆಸ್ಕಾಂ ಎಇಇ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಸ್ಕಾಂ ಎಇಇ ಸುಂದರೇಶ್ ನಾಯ್ಕ್ ಎಸಿಬಿ ಬಲೆಗೆ ಸಿಲುಕಿದ್ದಾರೆ. ಬೆಂಗಳೂರಿನ ನಾಗವಾರದ ಬೆಸ್ಕಾಂ ಕಚೇರಿಯಲ್ಲಿ ಘಟನೆ ನಡೆದಿದೆ. 9 ಲಕ್ಷ ಲಂಚ ನೀಡುವಂತೆ ಅಪಾರ್ಟ್ಮೆಂಟ್ ಮಾಲೀಕನಿಗೆ ಬೇಡಿಕೆ ಇಡಲಾಗಿತ್ತು. 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಎಇಇ ಸುಂದರೇಶ್ ನಾಯ್ಕ್ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಟೆಲಿಕಾಂ ಲೇಔಟ್ನಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದ್ದ ಅಪಾರ್ಟ್ಮೆಂಟ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು 9 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. 9 ಲಕ್ಷ ಲಂಚದ ಪೈಕಿ 5 ಲಕ್ಷ ರೂ. ಸ್ವೀಕರಿಸುವಾಗ ಎಸಿಬಿ ಬಲೆ ಬೀಸಿದೆ.
ವಿಜಯನಗರ: ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ನಾಟಕ ಪ್ರದರ್ಶನ; 9 ರಂಗ ಕಲಾವಿದರ ವಿರುದ್ಧ ಪ್ರಕರಣ ದಾಖಲು ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ನಾಟಕ ಪ್ರದರ್ಶನ ಮಾಡುತ್ತಿದ್ದ 9 ರಂಗ ಕಲಾವಿದರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕುಮತಿ ಗ್ರಾಮದಲ್ಲಿ ಅಣ್ಣನ ಅರಮನೆ ನಾಟಕ ಪ್ರದರ್ಶನ ಮಾಡಲಾಗುತ್ತಿತ್ತು. ಕೊರೊನಾ ನಿಯಮ ಉಲ್ಲಂಘಿಸಿ ನಾಟಕ ಪ್ರದರ್ಶನ ಮಾಡಿದ್ದರಿಂದ ಪ್ರಕರಣ ದಾಖಲು ಮಾಡಲಾಗಿದೆ.
ವಿಜಯನಗರ: ರೈಲ್ವೆ ನಿಲ್ದಾಣದಲ್ಲಿ ಬಿಟ್ಟುಹೋಗಿದ್ದ ಹಣ, ಆಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ರೈಲ್ವೇ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಮರೆತುಹೋಗಿದ್ದ ಹಣ, ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರೈಲ್ವೇ ಪೊಲೀಸರು ವಾರಸುದಾರರಿಗೆ ಹಿಂತಿರುಗಿಸಿದ ಘಟನೆ ವಿಜಯನಗರದಲ್ಲಿ ನಡೆದಿದೆ. ಹೊಸಪೇಟೆ ರೈಲ್ವೆ ಪೊಲೀಸರು ತಮಗೆ ಸಿಕ್ಕಿದ್ದ ಬ್ಯಾಗ್ನ್ನು ಮತ್ತೆ ವಾರಸುದಾರರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 35 ಗ್ರಾಂ ಬಂಗಾರದ ಸರ, 5 ಗ್ರಾಂ ಓಲೆ, 2,500 ನಗದು, 3 ರೇಷ್ಮೆ ಸೀರೆ, ಎರಡು ಫ್ಯಾನ್ಸಿ ಸೀರೆಗಳಿದ್ದ ಬ್ಯಾಗ್ ಹಿಂತಿರುಗಿಸಲಾಗಿದೆ. ಬಳ್ಳಾರಿ ಮೂಲದ ವಾಸವಿ ಮಂಜುನಾಥ ಎಂಬುವವರಿಗೆ ಪೊಲೀಸರು ಬ್ಯಾಗ್ ತಲುಪಿಸಿದ್ದಾರೆ.
ಬೆಂಗಳೂರು: ಮಾರಕಾಸ್ತ್ರ ತೋರಿಸಿ ಫುಡ್ ಡೆಲಿವರಿ ಬಾಯ್ ಬೈಕ್ ಕದ್ದ ಖದೀಮರು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿದ ಖದೀಮರು ಫುಡ್ ಡೆಲಿವರಿ ಬಾಯ್ ಬೈಕ್ ದೋಚಿದ ದುರ್ಘಟನೆ ನಡೆದಿದೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಗೋ ರಕ್ಷಣೆ ಮಾಡಲು ಹೋದವರ ಮೇಲೆ ಹಲ್ಲೆಗೆ ಯತ್ನ ಗೋ ರಕ್ಷಣೆ ಮಾಡಲು ಹೋದವರ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಗೌ ಗ್ಯಾನ್ ಫೌಂಡೇಷನ್ ಸದಸ್ಯರಿಂದ ಸರ್ಜಾಪುರ ಪೊಲೀಸರಿಗೆ ದೂರು ನೀಡಲಾಗಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಬಡಾವಣೆಯಲ್ಲಿ ಅಕ್ರಮವಾಗಿ ಕಟ್ಟಿಹಾಕಿದ್ದ ಹಸುಗಳನ್ನು ಬಿಡಿಸಿಕೊಂಡು ಬರಲು ಹೋದಾಗ ಕೆಲವರೊಂದಿಗೆ ವಾಗ್ವಾದ ಏರ್ಪಟ್ಟಿತ್ತು. ಬಳಿಕ, ಹಲ್ಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ.
ಹಾಸನ: ಸರ್ಕಾರಿ ಭೂಮಿ ಮಂಜೂರಾತಿ ವಿಚಾರದಲ್ಲಿ ಮಾರಾಮಾರಿ ಸರ್ಕಾರಿ ಭೂಮಿ ಮಂಜೂರಾತಿ ವಿಚಾರದಲ್ಲಿ ಸಾಣೇನಹಳ್ಳಿಯಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ಮಾಡಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೇಲೂರು ತಹಶೀಲ್ದಾರ್ ಕಚೇರಿ ಎದುರು ಬಿಎಸ್ಪಿ ನೇತೃತ್ವದಲ್ಲಿ ದಲಿತ ಕುಟುಂಬಗಳಿಂದ ಪ್ರತಿಭಟನೆ ನಡೆಸಲಾಗಿದೆ.
ಗದಗ: ಕಲ್ಲು ಗಣಿಗಾರಿಕೆಯಿಂದ ಬೇಸತ್ತು ದಿಢೀರ್ ಪ್ರತಿಭಟನೆ ಇಲ್ಲಿನ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯಿಂದ ಬೇಸತ್ತು ಟಿಪ್ಪರ್ಗಳನ್ನು ತಡೆದು ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ ನಡೆಸಲಾಗಿದೆ. ಗದಗ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಬಂದ್ ಮಾಡಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗಿದೆ. ಪಿಎಸ್ಐಗೆ ಮುತ್ತಿಗೆ ಹಾಕಿ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Crime Updates: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಅಯೂಬ್ ಖಾನ್ ಜಾಮೀನು ಅರ್ಜಿ ವಜಾ