ಮಸಾಲೆ ದೋಸೆ ಬೊಂಬಾಟ್ ಗುರು ಎಂದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್

Alex Ellis: ಪೋಲ್ ಪ್ರಶ್ನೆಯ ಥ್ರೆಡ್ ಜತೆ ಮಸಾಲೆ ದೋಸೆ ತಿನ್ನುತ್ತಿರುವ ವಿಡಿಯೊ ಪೋಸ್ಟ್ ಮಾಡಿದ ಎಲ್ಲಿಸ್ ಶೇ.92 ಟ್ವಿಟೀಗರು ಹೇಳಿದ್ದು ಸರಿ, ಕೈಯಿಂದ ತಿಂದರೆ ಹೆಚ್ಚು ರುಚಿ. ಮಸಾಲೆ ದೋಸೆ ಬೊಂಬಾಟ್ ಗುರು ಎಂದು ಕನ್ನಡದಲ್ಲಿ ಬರೆದು ಹಿಂದಿಯಲ್ಲಿ ಏಕ್ ಧಂ ಮಸ್ತ್ ಎಂದು ಬರೆದ್ದಿದ್ದಾರೆ.

ಮಸಾಲೆ ದೋಸೆ ಬೊಂಬಾಟ್ ಗುರು ಎಂದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್
ಅಲೆಕ್ಸ್ ಎಲ್ಲಿಸ್

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುವ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಸಾಲೆ ದೋಸೆ ಸವಿದಿದ್ದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮಸಾಲೆ ಬೊಂಬಾಟ್ ಗುರು ಎಂದು ಟ್ವೀಟ್ ಮಾಡಿದ್ದಾರೆ.

ಬುಧವಾರ ಟ್ವಿಟರ್​​ನಲ್ಲಿ ದಕ್ಷಿಣ ಭಾರತೀಯರೇ ನಾಳೆ ನಾನು ದೋಸೆ ಹೇಗೆ ತಿನ್ನಬೇಕು ಎಂಬ ಪ್ರಶ್ನೆಯೊಂದಿಗೆ ಟ್ವಿಟರ್ ಪೋಲ್ ಮಾಡಿದ್ದರು. ಕೈಯಿಂದ ಎಂಬ ಪೋಲ್ ಆಯ್ಕೆಗೆ ಶೇ92ರಷ್ಟು ಮಂದಿ ಪ್ರತಿಕ್ರಿಯಿಸಿದ್ದರು.


ಗುರುವಾರ ಇದೇ ಪೋಲ್ ಪ್ರಶ್ನೆಯ ಥ್ರೆಡ್ ಜತೆ ಮಸಾಲೆ ದೋಸೆ ತಿನ್ನುತ್ತಿರುವ ವಿಡಿಯೊ ಪೋಸ್ಟ್ ಮಾಡಿದ ಎಲ್ಲಿಸ್ ಶೇ.92 ಟ್ವಿಟೀಗರು ಹೇಳಿದ್ದು ಸರಿ, ಕೈಯಿಂದ ತಿಂದರೆ ಹೆಚ್ಚು ರುಚಿ. ಮಸಾಲೆ ದೋಸೆ ಬೊಂಬಾಟ್ ಗುರು ಎಂದು ಕನ್ನಡದಲ್ಲಿ ಬರೆದು ಹಿಂದಿಯಲ್ಲಿ ಏಕ್ ಧಂ ಮಸ್ತ್ ಎಂದು ಬರೆದ್ದಿದ್ದಾರೆ.

ಇನ್ನೊಂದು ಟ್ವೀಟ್​​ನಲ್ಲಿ ಸ್ವಾದಿಷ್ಟ ಮೈಸೂರು ಮಸಾಲೆ ದೋಸೆ  ಬೆಂಗಳೂರಿಗೆ ಮೊದಲ ಭೇಟಿ ಆರಂಭ ಹೀಗೆ  ಎಂದು  ಫೋಟೊವೊಂದನ್ನು ಶೇರ್ ಮಾಡಿ ‘ಸಾಕ್ಕ್ಕತ್ ಆಗಿದೆ’  ಎಂದು ಬರೆದಿದ್ದಾರೆ.

ಇದರ ನಂತರ ಸಿಎಂ ಬೊಮ್ಮಾಯಿ ಅವರ ಜತೆಗಿನ ಭೇಟಿಯ ಫೋಟೊ ಶೇರ್ ಮಾಡಿದ ಎಲ್ಲಿಸ್,  ನಮಸ್ಕಾರ ಮುಖ್ಯಮಂತ್ರಿ ಅವರೆ ಎಂದು  ಕನ್ನಡದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ  ಓದಿ:  ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು

ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರದ ಮೋದಿ ಸರ್ಕಾರ ತಮಿಳುನಾಡನ್ನೇ ಬೆಂಬಲಿಸಲಿದೆ: ಅಣ್ಣಾಮಲೈ

(British High Commissioner to India Alex Ellis tweets in kannada About masala dosa)

Click on your DTH Provider to Add TV9 Kannada