ಹೋಲಿಕೆ ಮಾಡುತ್ತಾ ರಾಜ್ಯದಲ್ಲಿ ಇಂದು ರಜೆ ನೀಡದಿರುವುದನ್ನ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ರಜೆ ನೀಡದ ವಿಚಾರಕ್ಕೆ ಬಿಜೆಪಿ‌ ಆಕ್ಷೇಪ ವಿಚಾರಕ್ಕೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವಾಗ ಕರ್ನಾಟಕದಲ್ಲಿ ತಾವು ಸರ್ಕಾರಿ ರಜೆ ನೀಡದಿರುವುದನ್ನ ಸಮರ್ಥಿಸಿಕೊಂಡರು.

ಹೋಲಿಕೆ ಮಾಡುತ್ತಾ ರಾಜ್ಯದಲ್ಲಿ ಇಂದು ರಜೆ ನೀಡದಿರುವುದನ್ನ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ
ಹೋಲಿಕೆ ಮಾಡುತ್ತಾ ಇಂದು ರಜೆ ನೀಡದಿರುವುದನ್ನ ಸಮರ್ಥಿಸಿಕೊಂಡ ಸಿದ್ದರಾಮಯ್ಯ
Follow us
Anil Kalkere
| Updated By: ಸಾಧು ಶ್ರೀನಾಥ್​

Updated on:Jan 22, 2024 | 4:45 PM

ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಗಳ್ಳಿ ಹೋಬಳಿಯಲ್ಲಿರುವ ಹಿರಂಡಹಳ್ಳಿ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂದು ಮಂದಿರವನ್ನು ಉದ್ಘಾಟಿಸಿದ್ರು. ಶ್ರೀ ರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಸೀತಾ-ರಾಮ, ಲಕ್ಷ್ಮಣ ಹಾಗೂ 33 ಅಡಿ ಆಂಜನೇಯ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉಪಸ್ಥಿತಿಯಲ್ಲಿ ಕಳೆದ 3 ದಿನಗಳಿಂದ ಪೂಜೆ ಪುನಸ್ಕಾರಗಳನ್ನ ನಡೆಸಲಾಗಿದೆ.

ರಾಮ ಮಂದಿರ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವಾಗ ಕರ್ನಾಟಕದಲ್ಲಿ ತಾವು ಸರ್ಕಾರಿ ರಜೆ ನೀಡದಿರುವುದನ್ನ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ರಜೆ ನೀಡಿದ್ಯಾ? ಕಾರ್ಯಕ್ರಮ ನಡೆಯುತ್ತಿರುವುದು ಅಯೋಧ್ಯೆಯಲ್ಲಿ. ಆದರೆ ಕೇರಳ, ದೆಹಲಿ (ಜನವರಿ 22 ರಂದು ದೆಹಲಿ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ), ಪಶ್ಚಿಮ ಬಂಗಾಳದಲ್ಲಿ ರಜೆ ಇದ್ಯಾ? ಎಂದು ರಜೆ ನೀಡದ ವಿಚಾರಕ್ಕೆ ಬಿಜೆಪಿ‌ ಆಕ್ಷೇಪ ವಿಚಾರಕ್ಕೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಮಂತ್ರಾಲಯದಲ್ಲಿ ಕೇಸರಿ ಧ್ವಜ ಹಾರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ ಮುಸ್ಲಿಮರು

ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ಅವರು ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಇಲ್ಲಿರುವ ರಾಮನಲ್ಲಿಯೇ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು. ಎಲ್ಲರೂ ಒಂದೇ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು ಗಾಂಧೀಜಿ ಕೂಡ ರಾಮನ ಭಕ್ತ ಎಂದರು. ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಿಸಿರುವ ಶ್ರೀರಾಮ ಟ್ರಸ್ಟ್ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನ ಮಾಡಲಾಯಿತು. ಶ್ರೀರಾಮ ಟ್ರಸ್ಟ್ ವತಿಯಿಂದ ಸಿಎಂ ಸಿದ್ದರಾಮಯ್ಯಗೆ ರಾಮ, ಲಕ್ಷ್ಮಣ, ಸೀತೆ ವಿಗ್ರಹ ಹಾಗೂ ಬಿಲ್ಲು ಬಾಣ ನೀಡಲಾಯಿತು.

ನಾನು‌ ನಾಸ್ತಿಕನಲ್ಲ, ಯಾವತ್ತೂ ದೇವರ ಅಸ್ತಿತ್ವವನ್ನು ನಾನು ವಿರೋಧ ಮಾಡಿಲ್ಲ- ಸಿದ್ದರಾಮಯ್ಯ

ದೇಗುಲ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಶ್ರೀರಾಮ ಚಂದ್ರ, ಸೀತಾದೇವಿ, ಲಕ್ಷ್ಮಣ, ಆಂಜನೇಯ ಇವರು ಮೂರ್ತಿಗಳುಳ್ಳ ಮೂರ್ತಿ ಪ್ರತಿಷ್ಠಾನೆಯಲ್ಲಿ ಸಂತೋಷದಿಂದ ಭಾಗವಹಿಸಿದ್ದೀವಿ. ನಾನು‌ ನಾಸ್ತಿಕನಲ್ಲ, ನಾನು ಕೂಡ ಆಸ್ತಿಕನೇ. ಶ್ರೀರಾಮಚಂದ್ರನ್ನ ಇಡೀ‌ ದೇಶ ಪ್ರೀತಿಸುತ್ತಾರೆ. 143 ಕೋಟಿ ಜನ‌ ಪೂಜಿಸುತ್ತಾರೆ. ರಾಜ್ಯದ ಹಳ್ಳಿಹಳ್ಳಿಗಳಲ್ಲಿ‌ ರಾಮನ ದೇವಸ್ಥಾನ ಇದೆ. ನಮ್ಮೂರಿನಲ್ಲಿ ನಾನೂ ಶ್ರೀರಾಮ ದೇವಸ್ಥಾನ ಕಟ್ಟಿಸಿದ್ದೀನಿ. ನಾವು ರಾಮ, ಆಂಜನೇಯನ ಪರಮ ಭಕ್ತರು. ಯಾವತ್ತೂ ಕೂಡ ನಾನು ದೇವರ ಅಸ್ತಿತ್ವವನ್ನು ವಿರೋಧ ಮಾಡಿಲ್ಲ ಎಂದರು.

ದೇವನೊಬ್ಬ, ನಾಮ ಹಲವು ಅಂತ ಹೇಳ್ತಾರೆ. ಕೆಲವರು ಈಶ್ವರ, ಆಂಜನೇಯ, ಕೃಷ್ಣಾ, ಚಾಂಮುಂಡಿ, ತಿಮ್ಮಪ್ಪ ರಾಮನನ್ನ ಪೂಜಿಸುತ್ತಾರೆ. ಹೀಗೆ ಬೇರೆಬೇರೆ ಹೆಸರುಗಳನ್ನ ದೇವರನ್ನ ಕರೆದು ಪೂಜಿಸುತ್ತಿರುವುದು ಅನಾದಿ ಕಾಲದಿಂದಲೂ ಬಂದಿದೆ. ಹೊಸದಾಗಿ ಶ್ರೀರಾಮ ಟೆಂಪಲ್ ಕಟ್ತಿಲ್ಲ. ಹಿಂದೆಯೂ ಕಟ್ಟಿದ್ದಿವಿ, ಈಗಲೂ ಕಟ್ಟಿದ್ದೀವಿ, ಮುಂದೆಯೂ ಕಟ್ಟುತ್ತಲೇ ಇರುತ್ತೇವೆ. ಬದುಕಿರುವವರೆಗೂ ಕಟ್ಟುತ್ತಿರುತ್ತೇವೆ. ರಾಮಾಯಣ ಆದರ್ಶ ಕೊಟ್ಟಿದೆ. ಮರ್ಯಾದಾ ಪುರುಷ, ಆದರ್ಶ ಪುರುಷ ಅಂತ ರಾಮನನ್ನ ಕರೆಯುತ್ತೇವೆ. ರಾಮರಾಜ್ಯ ಆಗ್ಬೇಕು ಅಂತ ಗಾಂಧೀಜಿಯವರು ಸಹ ಆಶಿಸಿದ್ದರು. ರಾಮರಾಜ್ಯ ಅಂದ್ರೆ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗ್ಬೇಕು. ದೇಶದ ಇಡೀ ದೈವ ಎಲ್ಲರಿಗೂ ಸೇರಿದ್ದು. ಎಲ್ಲ ಧರ್ಮಗಳು ಮನುಷ್ಯನ ಒಳಿತನ್ನ ಬಯಸುತ್ತದೆ. ಸಹಿಷ್ಣತೆ, ಸಹಬಾಳ್ವೆ ಅಂತ ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆದುಕೊಂಡಿದ್ದೇವೆ. ಎಲ್ಲರೂ ಮನುಷ್ಯರಾಗಿ ಬಾಳಬೇಕು. ಪ್ರೀತಿ, ವಿಶ್ವಾಸದಿಂದ ಬದುಕಬೇಕು, ಯಾರನ್ನೂ ದ್ವೇಷಿಸಬಾರದು. ಇದೇ ಅಂಶಗಳನ್ನ‌ ರಾಮಾಯಣ ಮತ್ತು ಮಹಾಭಾರತದಲ್ಲಿ ಹೇಳಿರೋದು ಎಂದು ಸಿ ಎಂ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:33 pm, Mon, 22 January 24

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ