ಹೆಚ್ಚಾದ ಟ್ರಾಫಿಕ್ ಕಿರಿಕಿರಿ; ಮಾಲ್ ಆಫ್ ಏಷ್ಯಾ ವಿರುದ್ಧ ಬ್ಯಾಟರಾಯನಪುರ ನಿವಾಸಿಗಳ ಆಕ್ರೋಶ
ಸದಾ ಸಾವಿರಾರು ವಾಹನಗಳಿಂದ ಟ್ರಾಫಿಕ್ ಕಿರಿಕಿರಿ ಅನುಭವಿಸ್ತಿರೋ ಬಳ್ಳಾರಿ ರಸ್ತೆಯಲ್ಲಿರೋ ಬ್ಯಾಟರಾಯನಪುರ ನಿವಾಸಿಗಳಿಗೆ ಇದೀಗ ಮತ್ತಷ್ಟು ಟ್ರಾಫಿಕ್ ಬಿಸಿ ತಟ್ಟಿದೆ. ಇತ್ತೀಚೆಗಷ್ಟೇ ತೆರೆಯಲಾಗಿರೋ ಮಾಲ್ ಆಫ್ ಏಷ್ಯಾದಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಜನರು ಮಾಲ್ ಆಫ್ ಏಷ್ಯಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು, ಡಿ.26: ಮೊದಲೇ ಟ್ರಾಫಿಕ್ ಜಾಮ್ (Bengaluru Traffic) ನಿಂದ ಹೈರಣಾಗಿದ್ದ ಬೆಂಗಳೂರಿನ ಬ್ಯಾಟರಾಯನಪುರ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ. ಮಾಲ್ ಆಫ್ ಏಷ್ಯಾಗೆ (Mall Of Asia) ಬರೋ ಜನರಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚಾಗ್ತಿದ್ದು, ಇದರಿಂದ ನಿವಾಸಿಗಳು ಬೇಸತ್ತುಹೋಗಿದ್ದಾರೆ. ಅವೈಜ್ಞಾನಿಕವಾಗಿ ಮಾಲ್ ಕಟ್ಟಿರೋದರಿಂದ ಸಮಸ್ಯೆಯಾಗ್ತಿದೆ ಅಂತಾ ಆರೋಪಿಸಿರೋ ಜನರು, ಮಾಲ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಖಾಸಗಿ ಮಾಲ್ ವಿರುದ್ಧ ರೊಚ್ಚಿಗೆದ್ದ ಸಿಲಿಕಾನ್ ಸಿಟಿ ಜನರು
ಸದಾ ಸಾವಿರಾರು ವಾಹನಗಳಿಂದ ಟ್ರಾಫಿಕ್ ಕಿರಿಕಿರಿ ಅನುಭವಿಸ್ತಿರೋ ಬಳ್ಳಾರಿ ರಸ್ತೆಯಲ್ಲಿರೋ ಬ್ಯಾಟರಾಯನಪುರ ನಿವಾಸಿಗಳಿಗೆ ಇದೀಗ ಮತ್ತಷ್ಟು ಟ್ರಾಫಿಕ್ ಬಿಸಿ ತಟ್ಟಿದೆ. ಇತ್ತೀಚೆಗಷ್ಟೇ ತೆರೆಯಲಾಗಿರೋ ಮಾಲ್ ಆಫ್ ಏಷ್ಯಾದಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಮಾಲ್ ಗೆ ಬರೋ ವಾಹನಗಳಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚಿದ್ದು, ಇದರಿಂದ ಪಕ್ಕದಲ್ಲೇ ಇರೋ ಅಪಾರ್ಟ್ ಮೆಂಟ್ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Indira Clinic: ಗಬ್ಬೆದ್ದು ನಾರುತ್ತಿದೆ ಪಾಲಿಕೆಯ ಇಂದಿರಾ ಕ್ಲಿನಿಕ್; ಕಿತ್ತುಬಂದ ಸೀಟ್, ಮರೀಚಿಕೆಯಾದ ಶುಚಿತ್ವ
ಇನ್ನು ಈ ಮಾಲ್ ನಿರ್ಮಾಣ ಅವೈಜ್ಞಾನಿಕವಾಗಿದೆ ಅಂತಾ ಆರೋಪಿಸಿರೋ ನಿವಾಸಿಗಳು, ಮಾಲ್ ನಿಂದಾಗಿ ಗಂಟೆಗಟ್ಟಲೇ ಟ್ರಾಫಿಕ್ ಆಗ್ತಿದೆ. ಮಾಲ್ ಗೆ ಬರುವವರು ಒಳಗೆ ಹೋಗಲು 200 ರೂಪಾಯಿ ಟಿಕೆಟ್ ಮಾಡಿ ಸುಲಿಗೆ ಮಾಡ್ತಿದ್ದಾರೆ ಅಂತಾ ಕಿಡಿಕಾರುತ್ತಿದ್ದಾರೆ. ಅತ್ತ ತುರ್ತು ಸಂದರ್ಭಗಳಲ್ಲಿ ಆಟೋ ಕೂಡ ಬರೋಕೆ ಆಗಲ್ಲ, ರೋಗಿಗಳು, ಗರ್ಭೀಣಿಯರು ಏನು ಮಾಡಬೇಕು ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ. ಮತ್ತೊಂದೆಡೆ ಮಾಲ್ ನವರನ್ನ ಕೇಳಿದ್ರೆ ನಾವು ಇವತ್ತು ಮಾತಾಡಲ್ಲ, ನಾಳೆ ಬನ್ನಿ ಎಂದು ಪ್ರತಿಕ್ರಿಯೆ ನೀಡಲು ತಿರಸ್ಕರಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಈಗಾಗಲೇ ಸಾಕಷ್ಟು ವಾಹನಗಳ ಸಂಚಾರದಿಂದ ಟ್ರಾಫಿಕ್ ಕಿರಿಕಿರಿ ಇತ್ತು. ಇದೀಗ ಈ ಮಾಲ್ ಕೂಡ ತಲೆ ಎತ್ತಿರೋದರಿಂದ ಮತ್ತಷ್ಟು ಟ್ರಾಫಿಕ್ ಹೆಚ್ಚಾಗಿರೋದಾಗಿ ಜನರು ಆರೋಪಿಸಿದ್ದಾರೆ. ತಮ್ಮ ಬ್ಯುಸಿನೆಸ್ ಗಾಗಿ ಜನರಿಗೆ ಕಾಟ ಕೊಡ್ತಿರೋ ಮಾಲ್ ವಿರುದ್ಧ ಗರಂ ಆಗಿರೋ ಸ್ಥಳೀಯರು ಈ ಸಮಸ್ಯೆಯಿಂದ ಮುಕ್ತಿ ಸಿಕ್ಕಿದ್ರೆ ಸಾಕು ಅಂತಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ