ಪೊಲೀಸ್ ಸೇವೆ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಎಸಿಪಿ ರಾಜೇಶ್‌ಗೆ ಡಿಜಿ ಪದಕ ಪ್ರದಾನ

ಕರ್ನಾಟಕದ ಪೊಲೀಸ್ ಅಧಿಕಾರಿ ಎಸಿಪಿ ಎಲ್.ವೈ ರಾಜೇಶ್ (LY Rajesh) ಅವರಿಗೆ ಡಿಜಿ ಪದಕವನ್ನು ಪ್ರದಾನ ಮಾಡಲಾಯಿತು. ಸದ್ಯ ರಾಜೇಶ್ ಅವರು ಸಿಸಿಬಿಯಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದು, ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಹೆಮ್ಮೆ ಅವರದ್ದು. ಪೊಲೀಸ್ ಸೇವೆಯ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಪೊಲೀಸ್ ಸೇವೆ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಎಸಿಪಿ ರಾಜೇಶ್‌ಗೆ ಡಿಜಿ ಪದಕ ಪ್ರದಾನ
LY Rajesh

Updated on: Jul 24, 2026 | 9:46 PM

ಬೆಂಗಳೂರು, (ಜುಲೈ 24): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸಿಸಿಬಿ ಎಸಿಪಿಯಾಗಿರುವ ಎಲ್.ವೈ. ರಾಜೇಶ್ (LY Rajesh) ಅವರಿಗೆ ಅತ್ಯುತ್ತಮ ಸೇವೆಗಾಗಿ ಪ್ರತಿಷ್ಠಿತ ಡಿಜಿ ಪದಕ ಪ್ರದಾನ ಮಾಡಲಾಗಿದೆ. ಡ್ರಗ್ಸ್​​ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ನೀಡಿದ ಕೊಡುಗೆ, ಸಮಾಜಮುಖಿ ಕಾರ್ಯಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪದಕ ನೀಡಿ ಗೌರವಿಸಲಾಗಿದೆ.

ಸದ್ಯ ರಾಜೇಶ್ ಅವರು ಸಿಸಿಬಿಯಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದು, ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಹೆಮ್ಮೆ ಅವರದ್ದು. ಪೊಲೀಸ್ ಸೇವೆಯ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಫೇಲ್ ಆಗಿರುವ ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ವಿಶೇಷ ಶಿಬಿರವನ್ನು ಆಯೋಜನೆ ಮಾಡಿ, ಅವರ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದಾರೆ.

ಪೊಲೀಸ್ ಕೆಲಸಕ್ಕೂ ಸೈ ಸಮಾಜಮುಖಿ ಕಾರ್ಯಕ್ಕೂ ಜೈ

ಓರ್ವ ಪೊಲೀಸ್ ಅಧಿಕಾರಿಗೆ ತನ್ನ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ತಡೆ, ಆರೋಪಿಗಳ ಬಂಧನವೇ ಆದ್ಯ ಕರ್ತವ್ಯವಾಗಿರುತ್ತದೆ. ಇದನ್ನಷ್ಟೇ ತಮ್ಮ ಕರ್ತವ್ಯವೆಂದು ಭಾವಿಸದೇ ತಮ್ಮ ವ್ಯಾಪ್ತಿಯನ್ನೂ ದಾಟಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ವಿವಿಧ ರೀತಿಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಬಹಳ ವಿರಳ. ಇಂತಹ ವಿರಳ ಅಧಿಕಾರಿಗಳ ಪೈಕಿ ಗುರುತಿಸಿಕೊಂಡಿರುವವರು ರಾಜೇಶ್ . ಹೌದು…ರಾಜೇಶ್ ಅವರು ಖಾಕಿ ತೊಟ್ಟು ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲದೇ, ಖಾಕಿ ಆಚೆಗೂ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವುದಕ್ಕೆ, ತನ್ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ.

CCB ACP LY Rajesh awarded dg medal for Excellent Service And Investigation

ಕನ್ನಡದ ಯುವ ನಟ ಭೀಮ ಚಿತ್ರ ಖ್ಯಾತಿಯ ಜಯಸೂರ್ಯ ಅವರ ತಂದೆಯೂ ಆಗಿರುವ ರಾಜೇಶ್ ಅವರು, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿರುವ ರಾಜೇಶ್, ಲೋಕಾಯುಕ್ತದಲ್ಲೂ (Lokayuktha) ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಇವರಿಗೆ, ಈಗಾಗಲೇ ಅನೇಕ ಪದಕಗಳು ಕೂಡಾ ಸಂದಿವೆ. ರಾಜೇಶ್ ಅವರ ಸೇವೆಗೆ ಅನೇಕ ಸಂಘ ಸಂಸ್ಥೆಗಳು ಕೂಡ ಗೌರವಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us