ಬೆಂಗಳೂರಿನ ರಾಯಲ್ ಅರ್ಚಿಡ್ ಹೋಟೆಲ್ ಮೇಲೆ ಸಿಸಿಬಿ ರೇಡ್​: 100 ಜನರನ್ನು ವಶಕ್ಕೆ ಪಡೆದು ವಿಚಾರಣೆ

ಎಸಿಪಿ ಎಂದು ಹೇಳಿಕೊಂಡು 20 ಲಕ್ಷ ರೂ. ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನವೀನ್ ಎಂಬಾತ ಶಂಕರಪ್ಪ ಎನ್ನುವವರಿಗೆ ವಂಚನೆ ಮಾಡಿದ್ದಾನೆ.

ಬೆಂಗಳೂರಿನ ರಾಯಲ್ ಅರ್ಚಿಡ್ ಹೋಟೆಲ್ ಮೇಲೆ ಸಿಸಿಬಿ ರೇಡ್​: 100 ಜನರನ್ನು ವಶಕ್ಕೆ ಪಡೆದು ವಿಚಾರಣೆ
ರಾಯಲ್ ಅರ್ಚಿಡ್ ಹೋಟೆಲ್
Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2022 | 9:04 AM

ಬೆಂಗಳೂರು: ನಗರದ ರಾಯಲ್ ಅರ್ಚಿಡ್ ಹೋಟೆಲ್ ಮೇಲೆ ಸಿಸಿಬಿ ರೇಡ್ ಮಾಡಿದೆ. ಅವಧಿ ಮೀರಿ ಪಾರ್ಟಿ ನಡೆಸುತ್ತಿದ್ದ ಹಿನ್ನೆಲೆ ಸಿಸಿಬಿ ರೇಡ್ ಮಾಡಿದೆ. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್​ನಲ್ಲಿ ನಸುಕಿನ ಜಾವ 3 ಗಂಟೆವರೆಗೂ ಪಾರ್ಟಿ ನಡೆಯುತ್ತಿತ್ತು. ಎಸಿಪಿ ರೀನಾ, ಇನ್ಸ್​ಪೆಕ್ಟರ್​ ಗೋವಿಂದರಾಜು ತಂಡದಿಂದ ದಾಳಿ ಮಾಡಿದ್ದು, ಪಾರ್ಟಿಯಲ್ಲಿದ್ದ 100 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ದಾಳಿ ವೇಳೆ ಪಾರ್ಟಿಯಲ್ಲಿ ಬಳಸುತ್ತಿದ್ದ ನಗದು, ಮದ್ಯ ಜಪ್ತಿ ಮಾಡಲಾಗಿದೆ. ಕಳೆದ ಎರಡು ವೀಕೆಂಡ್​ನಿಂದ ಒವರ್ ಟೈಮ್ ಪಾರ್ಟಿ ನಡೆಯುತ್ತಿದೆ ಎಂದು ಸಿಸಿಬಿಗೆ ಮಾಹಿತಿ ನೀಡಿದ್ದು, ಮಾಹಿತಿ ಅನ್ವಯ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳಿಂದ ದಾಳಿ ಮಾಡಿದೆ. ಹೋಟೆಲ್ ಹಾಗೂ ಪಾರ್ಟಿ ಆಯೋಜಕರ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಎಸಿಪಿ ಎಂದು ಹೇಳಿಕೊಂಡು 20 ಲಕ್ಷ ರೂ. ವಂಚನೆ:

ಬೆಂಗಳೂರು: ಎಸಿಪಿ ಎಂದು ಹೇಳಿಕೊಂಡು 20 ಲಕ್ಷ ರೂ. ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನವೀನ್ ಎಂಬಾತ ಶಂಕರಪ್ಪ ಎನ್ನುವವರಿಗೆ ವಂಚನೆ ಮಾಡಿದ್ದಾನೆ. ಹುಂಡೈ ಶೋರೂಮ್​ನಲ್ಲಿ ಕಾರ್ ಸರ್ವೀಸ್​ಗೆ ನವೀನ್ ಬಂದಿದ್ದು, ಈ ವೇಳೆ ಜಯನಗರ ಎಸಿಪಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಶಂಕರಪ್ಪರಿಂದ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿದ್ದಾನೆ. ವಂಚನೆಗೊಳಗಾದ ಶಂಕರಪ್ಪರಿಂದ ಕೆಂಗೇರಿ ಠಾಣೆಗೆ ದೂರು ನೀಡಿದ್ದು, ಆರೋಪಿ ನವೀನ್​ಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಯುತ್ತಿದೆ.