BBMP Elections: ಬಿಬಿಎಂಪಿ ಚುನಾವಣೆಗೆ ಕ್ಷಣಗಣನೆ: ಕಾಂಗ್ರೆಸ್, ಜೆಡಿಎಸ್ನಿಂದ ಪೂರ್ವ ಸಿದ್ಧತೆ
ಸೆಪ್ಟೆಂಬರ್ 12 ರಂದು ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯಲಿರುವ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ. ಜನತಾ ಜಲಧಾರೆ ರೀತಿಯಲ್ಲಿ ಬೃಹತ್ ಕಾರ್ಯಕ್ರಮಕ್ಕೆ ದಳಪತಿಗಳು ಪ್ಲಾನ್ ಮಾಡಲಾಗಿದೆ.
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ನಿಂದ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬೊಬ್ಬ ಶಾಸಕರು, ಪರಿಷತ್ ಸದಸ್ಯರಿಗೆ ಜವಾಬ್ದಾರಿ ನೀಡಿದ್ದು, ವಾರ್ಡ್ ಮೀಟಿಂಗ್ ನಡೆಸಿ ಜವಾಬ್ದಾರಿ ಹಂಚಿಕೆಯಾದ ಶಾಸಕರು ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಸಜ್ಜು
ಜೆಡಿಎಸ್ ಕೂಡ ಸಜ್ಜಾಗಿದ್ದು, ಜನತಾ ಮಿತ್ರ ಕಾರ್ಯಕ್ರಮ ರೂಪಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜನತಾ ಮಿತ್ರ ವಾಹನ ಸಂಚಾರ ಮಾಡಲಿದ್ದು, ಕುಮಾರಸ್ವಾಮಿ ಕನಸಿನ ಪಂಚರತ್ನ ಯೋಜನೆಯ ಬಗ್ಗೆ ಎಲ್ಇ ಡಿ ವಾಹನಗಳ ಮೂಲಕ ಜನತಾ ಮಿತ್ರ ವಾಹನಗಳು ಪ್ರಚಾರ ಮಾಡಲಾಗುತ್ತಿದೆ. ಅಲ್ಲದೇ ಬೆಂಗಳೂರು ಅಭಿವೃದ್ಧಿಗೆ ಜೆಡಿಎಸ್ ರೂಟ್‌ಮ್ಯಾಪ್ ಹಾಕಿದೆ. ಈಗ ಜನತಾಮಿತ್ರ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ಪ್ಲಾನ್ ಮಾಡಿದ್ದು, ರಾಜ್ಯದಲ್ಲಿ ಮಳೆ ಮತ್ತು ಹೆಚ್.ಡಿ ದೇವೆಗೌಡರ ಅನಾರೋಗ್ಯ ಹಿನ್ನೆಲೆ ಜನತಾ ಮಿತ್ರ ಸಮಾವೇಶ ಮುಂದೂಡಿಕೆಯಾಗಿದೆ.
ಇದನ್ನೂ ಓದಿ: ಲಂಚದ ಅರೋಪ: ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ಗೆ ಜಾಮೀನು
ಸದ್ಯ ಜನತಾಮಿತ್ರ ಸಮಾರೋಪ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಸೆಪ್ಟೆಂಬರ್ 12 ರಂದು ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯಲಿರುವ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ. ಜನತಾ ಜಲಧಾರೆ ರೀತಿಯಲ್ಲಿ ಬೃಹತ್ ಕಾರ್ಯಕ್ರಮಕ್ಕೆ ದಳಪತಿಗಳು ಪ್ಲಾನ್ ಮಾಡಿದ್ದು, 1 ಲಕ್ಷ ಜನ ಸೇರಿಸಲು ಬೆಂಗಳೂರು ನಾಯಕರಿಗೆ ಕುಮಾರಸ್ವಾಮಿ ಟಾಸ್ಕ್ ನೀಡಿದ್ದಾರೆ. ಈ ಮೂಲಕ ಬಿಬಿಎಂಪಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Sun, 4 September 22