AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜಪೇಟೆಯಲ್ಲಿ ಮತ್ತೆ ತಾರಕಕ್ಕೇರಿದ ಗಣೇಶೋತ್ಸವ ಗದ್ದಲ: ಮೆರವಣಿಗೆ ವಿಚಾರವಾಗಿ ಸಮಿತಿ, ಪೊಲೀಸರ ನಡುವೆ ಸಮರ

ಇಂದು ಬೆಂಗಳೂರು ನಗರದ ಹಲವೆಡೆ ಗಣೇಶ ವಿಸರ್ಜನೆ ಹಿನ್ನೆಲೆ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರಿಂದ ಪಥಸಂಚಲನ ಮಾಡಲಾಗುತ್ತಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ನಾಗವಾರ ಸೇರಿ ಹಲವೆಡೆ ರೂಟ್​ ಮಾರ್ಚ್ ಮಾಡಲಿದ್ದಾರೆ.

ಚಾಮರಾಜಪೇಟೆಯಲ್ಲಿ ಮತ್ತೆ ತಾರಕಕ್ಕೇರಿದ ಗಣೇಶೋತ್ಸವ ಗದ್ದಲ: ಮೆರವಣಿಗೆ ವಿಚಾರವಾಗಿ ಸಮಿತಿ, ಪೊಲೀಸರ ನಡುವೆ ಸಮರ
ಗಣೇಶೋತ್ಸವ, ಚಾಮರಾಜಪೇಟೆ ಮೈದಾನ
TV9 Web
| Edited By: |

Updated on:Sep 04, 2022 | 1:09 PM

Share

ಬೆಂಗಳೂರು: ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಗದ್ದಲ ಮತ್ತೆ ತಾರಕಕ್ಕೇರಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ವಿಚಾರವಾಗಿ ಗಣೇಶೋತ್ಸವ ಸಮಿತಿ ಮತ್ತು ಪೊಲೀಸರ ನಡುವೆ ಸಮರ ಉಂಟಾಗಿದೆ. ನಿನ್ನೆ ಪೊಲೀಸರು, ಗಣೇಶೋತ್ಸವ ಸಮಿತಿ ನಡುವೆ ಭಾರಿ ಗಲಾಟೆಯಾಗಿದ್ದು, ವಿರೋಧದ ನಡುವೆಯೂ ಮೈದಾನದ ಎದುರು 2ನೇ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪ ದೇಗುಲ ಬಳಿ ಇಂದು ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದಿನಿಂದ 7 ದಿನಗಳ ಕಾಲ 4ನೇ ವರ್ಷದ ಗಣೇಶೋತ್ಸವ ನಡೆಯಲಿದ್ದು, ಗಣೇಶ ಮೆರವಣಿಗೆಯ ರೂಟ್ ಮ್ಯಾಪ್​ನ್ನು ಸಮಿತಿ ಸಿದ್ಧಪಡಿಸಿದೆ.

ಸೆ.10ರ ಮಧ್ಯಾಹ್ನ ಪಾದರಾಯನಪುರದಿಂದ ಗಣೇಶನ ಮೂರ್ತಿ ಮೆರವಣಿಗೆ ಆರಂಭವಾಗಲಿದ್ದು, ಜೆ.ಜೆ ಆರ್ ನಗರ, ಪಾದರಾಯನಪುರ, ಚಾಮರಾಜಪೇಟೆಯ ಮುಖ್ಯ ರಸ್ತೆಗಳ ಮುಖಾಂತರ ಮೆರವಣಿಗೆ ಸಾಗಿ, ಮೈಸೂರು ರಸ್ತೆಯ ಮೂಲಕ ಟೌನ್ ಹಾಲ್​ವರೆಗೆ ಅದ್ದೂರಿ ಮೆರವಣಿಗೆಗೆ ಸಿದ್ದತೆ ಮಾಡಲಾಗುತ್ತಿದೆ. ಆದರೆ ಮೆರವಣಿಗೆಗೆ ಸ್ಥಳೀಯ ಪೊಲೀಸರಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಗದಿದ್ದರೂ ಪಾದರಾಯನಪುರದಿಂದ ಮೆರವಣಿಗೆ ಮಾಡೇ ಮಾಡ್ತೀವಿ ಅಂತ ಸಮಿತಿ ಹೇಳುತ್ತಿದೆ.

ಗಣೇಶನ ಮೆರವಣಿಗೆ ರೂಟ್ ಮ್ಯಾಪ್ ನಾಳೆ ಫೈನಲ್: ಸಮಿತಿ ಕಾರ್ಯದರ್ಶಿ ಸುನೀಲ್ ವೆಂಕಟೇಶ್

ಈ ಕುರಿತಾಗಿ ಚಾಮರಾಜಪೇಟೆ ಗಣೇಶ ಉತ್ಸವ ಸಮಿತಿ ಕಾರ್ಯದರ್ಶಿ ಸುನೀಲ್ ವೆಂಕಟೇಶ್ ಹೇಳಿಕೆ ನೀಡಿದ್ದು, ನೆನ್ನೆ ಮೆರವಣಿಗೆ ರೂಟ್‌ಮ್ಯಾಪ್‌ ಬಗ್ಗೆ ಕೆಲವು ಗೊಂದಲಗಳಿತ್ತು. ಈ ಬಗ್ಗೆ ಪೊಲೀಸರಿಗೆ ಅನುಮತಿಗಾಗಿ ಮನವಿ ಮಾಡಿದ್ವಿ. ಆದರೆ ಅವರಿಂದ ಸರಿಯಾದ ಪ್ರತಿಕ್ರಿಯೆ ಬರ್ಲಿಲ್ಲ. ಗಣೇಶನ ಮೆರವಣಿಗೆ ರೂಟ್ ಮ್ಯಾಪ್ ಕೊಡಿ ಎಂದು ಕೇಳಿದ್ರು. ಅದರಂತೆ ನಾವು ರೂಟ್‌ ಮ್ಯಾಪ್ ಕೊಟ್ಟಿದ್ವಿ, ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ದೊಡ್ಡ ಗಣೇಶ ಕೂರಿಸೋದು ಬೇಡ ಕೇವಲ 2 ಅಡಿ ಅಥವಾ 4 ಅಡಿ ಗಣೇಶನನ್ನು ಕೂರಿಸಲು ಹೇಳಿದ್ರು. ಹೀಗಾಗಿ ನಿನ್ನೆ ಪೊಲೀಸ್‌ ಸ್ಟೇಷನ್ ಮುತ್ತಿಗೆಗೆ ಮುಂದಾಗಿದ್ದೇವು. ಕೋವಿಡ್ ವರ್ಷ ಬಿಟ್ಟು ಉಳಿದ ಎಲ್ಲಾ ವರ್ಷಗಳು ನಾವು ಗಣೇಶನನ್ನು ಕೂರಿಸಿದ್ದೇವೆ.

ಹೀಗಾಗಿ ಈ ಬಾರಿಯೂ ಗಣೇಶನನ್ನು ಕೂರಿಸಿದ್ದೇವೆ. ಎಲ್ಲಾ ಗೊಂದಲ ಕ್ಲಿಯರ್ ಆಗಿದೆ. ನಾಳೆ ನಾಡಿದ್ದು ಕಮೀಷನರ್‌ನ್ನು ಭೇಟಯಾಗಿ ರೂಟ್ ಮ್ಯಾಪ್ ವಿಚಾರವಾಗಿ ಫೈನಲ್ ಮಾಡ್ತೇವೆ. 7 ದಿನಗಳ ಕಾಲ ಗಣಪನನ್ನು ಕೂರಿಸಲಾಗುತ್ತೆ. ಪ್ರತಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡ್ತೆವೆ. ಗಣಪತಿ ವಿಸರ್ಜನೆಯ ದಿನ 100 ಕ್ಕೂ ಹೆಚ್ಚು ಸಮಿತಿಗಳು ಕೈ ಜೋಡಿಸಲಿವೆ. ಏಳನೇ ದಿನ ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮಾಡಿ, ವಿಸರ್ಜನೆ ಮಾಡ್ತೆವೆ ಎಂದು ಹೇಳಿದರು.

ಇಂದು ಗಣೇಶ ವಿಸರ್ಜನೆ: ಪೊಲೀಸರಿಂದ ಪಥಸಂಚಲನ

ಇಂದು ಬೆಂಗಳೂರು ನಗರದ ಹಲವೆಡೆ ಗಣೇಶ ವಿಸರ್ಜನೆ ಹಿನ್ನೆಲೆ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರಿಂದ ಪಥಸಂಚಲನ ಮಾಡಲಾಗುತ್ತಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ನಾಗವಾರ ಸೇರಿ ಹಲವೆಡೆ ರೂಟ್​ ಮಾರ್ಚ್ ಮಾಡಲಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಗೆ KSRP, ಸಿಎಆರ್​ ಸಿಬ್ಬಂದಿ ಸಾಥ್ ನೀಡಲಿದ್ದಾರೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಿಸಿಟಿವಿ, ಡ್ರೋನ್‌ ಮೂಲಕ ನಿಗಾವಹಿಸಲು ತಿಳಿಸಲಾಗಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಾರ್​ ಮತ್ತು ರೆಸ್ಟೋರೆಂಟ್​, ಪಬ್ ಬಂದ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:08 pm, Sun, 4 September 22

Follow Us
TV9 Web
TV9 Web

TV9 Kannada

Read More
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ