
ಬೆಂಗಳೂರು, (ಜುಲೈ 22): ಸಿಸಿಬಿ ಪೊಲೀಸರು (Bengaluru CCB) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ 9 ವಿದೇಶಿಗರನ್ನು ( foreign nationals) ಬಂಧಿಸಿದ್ದಾರೆ. ನೈಜೀರಿಯಾದ ನಾಲ್ವರು ಪ್ರಜೆಗಳು, ಘಾನಾದ ಇಬ್ಬರು ಪ್ರಜೆಗಳು, ಸುಡಾನ್ ದೇಶದ ಓರ್ವ ಪ್ರಜೆ ಸೇರಿದಂತೆ ಒಟ್ಟು ಒಂಬತ್ತು ವಿದೇಶಿಗರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಪಾಸ್ ಪೋರ್ಟ್, ವೀಸಾ ಅವಧಿ ಮುಗಿದಿದ್ದರೂ ಸಹ ಅಕ್ರಮವಾಗಿ ನಗರದಲ್ಲಿ ವಾಸಗಿದ್ದರು. ಇನ್ನು ಬಂಧಿತರನ್ನು ಡಿಟೆನ್ಷನ್ ಸೆಂಟರ್ ನಲ್ಲಿ ಇಡಲಾಗಿಗಿದ್ದು, ಸದ್ಯ ಬಂಧನ ಮಾಡಿರುವವರನ್ನು ಅವರವರ ದೇಶಕ್ಕೆ ವಾಪಸ್ ಕಳಿಸುವ ಪ್ರಕ್ರಿಯೆ ನಡೆದಿದೆ.
ವಿದ್ಯಾಭ್ಯಾಸ ಹಾಗೂ ಇನ್ನಿತರ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದು ವೀಸಾ ಅವಧಿ ಮುಗಿದರೂ ಇಲ್ಲೇ ನೆಲೆಸುತ್ತಿರುವ ವಿದೇಶಿಗರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ನಗರ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಹೀಗಿದ್ದರೂ ಸಹ ಪೊಲೀಸರು ಆಗಾಗ ವಿದೇಶಿಗರ ಪತ್ತೆ ಕಾರ್ಯಚರಣೆ ನಡೆಸುತ್ತಲೇ ಇದ್ದಾರೆ.
ಬೆಂಗಳೂರು ನಗರದಲ್ಲಿ ವೀಸಾ ಅವಧಿ ಮುಗಿದರೂ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರು ವಾಸವಾಗಿದ್ದಾರೆ. ಇಂತಹ ವಿದೇಶಿಗರು ಕಾನೂನು ಉಲ್ಲಂಘಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ಇಂತವರ ವಿರುದ್ಧ ಕಾನೂನು ಕಣ್ಣಿಟ್ಟಿದೆ. ಇಂತಹ ವಿದೇಶಿ ಪ್ರಜೆಗಳು ಪತ್ತೆಯಾದರೆ ಅಂತಹ ಆರೋಪಿಗಳ ವಿರುದ್ಧ ಅವರ ದೇಶದ ವಿದೇಶಿ ಮಂತ್ರಾಲಯದ ಮೂಲಕ ವಾಪಸ್ ಕಳಿಸಲಾಗುತ್ತದೆ.
ಇನ್ನು ಬೆಂಗಳೂರಿನಲ್ಲಿ ಅಕ್ರಮವಾಗಿ ನೈಜೀರಿಯಾ, ಸುಡಾನ್, ಯೆಮೆನ್ ಹಾಗೂ ಕಾಂಗೋ ದೇಶದ ಪ್ರಜೆಗಳು ಹೆಚ್ಚಾಗಿ ನೆಲೆಸಿದ್ದಾರೆ. ಇನ್ನು ನೈಜೀರಿಯನ್ ಪ್ರಜೆಗಳು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಯತ್ತಿದ್ದಾರೆ. ಅಂತಹ ಆರೋಪಿಗಳಿಗೆ ಯಾವ ಮೂಲಗಳಿಂದ ಮಾದಕ ವಸ್ತುಗಳು ಸರಬರಾಜು ಆಗುತ್ತಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ದಸ್ತಗಿರಿ ಮಾಡಿ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.