ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಭೀತಿ: ಇಂದು ರಾಜ್ಯ ಆರೋಗ್ಯ ಇಲಾಖೆ ಜೊತೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸಭೆ

|

Updated on: Mar 27, 2023 | 11:40 AM

ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರೋ ಬೆನ್ನಲ್ಲೆ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೊವೀಡ್‌ನ ಮುಂಜಾಗೃತ ಕ್ರಮವಾಗಿ ಮಾಕ್ ಡ್ರಿಲ್‌ಗೆ ಮುಂದಾಗಿದೆ.

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಭೀತಿ: ಇಂದು ರಾಜ್ಯ ಆರೋಗ್ಯ ಇಲಾಖೆ ಜೊತೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸಭೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ದೇಶದಲ್ಲಿ ಮತ್ತೆ ಕೊರೊನಾ(Coronavirus) ಭೀತಿ‌ ಎದುರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಿದೆ. ಶನಿವಾರ 1,890 ಹೊಸ ಪ್ರಕರಣಗಳು ವರದಿಯಾಗಿವೆ. ಹಿಂದಿನ ಏಳು ದಿನಗಳಿಗೆ ಹೋಲಿಸಿದರೆ ಕಳೆದ ಏಳು ದಿನಗಳಲ್ಲಿ ಪ್ರಕರಣಗಳು 78% ರಷ್ಟು ಏರಿಕೆಯಾಗಿದೆ. ಇನ್ನು ಮತ್ತೊಂದೆಡೆ ರಾಜ್ಯದಲ್ಲೂ ಕೊರೊನಾ ಹೆಚ್ಚಾಗುತ್ತಿದ್ದು ನಿನ್ನೆ(ಮಾರ್ಚ್ 26) ಒಂದೇ ದಿನ ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಇಂದು ರಾಜ್ಯ ಆರೋಗ್ಯ ಇಲಾಖೆಗಳ ಜೊತೆ ಕೇಂದ್ರ ಆರೋಗ್ಯ ಇಲಾಖೆ ಮತ್ತು ICMR ಮಹತ್ವದ ಸಭೆ ನಡೆಸಲಿದೆ.

ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರೋ ಬೆನ್ನಲ್ಲೆ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೊವೀಡ್‌ನ ಮುಂಜಾಗೃತ ಕ್ರಮವಾಗಿ ಮಾಕ್ ಡ್ರಿಲ್‌ಗೆ ಮುಂದಾಗಿದೆ. ದೇಶವ್ಯಾಪಿ ಆಸ್ಪತ್ರೆಗಳ ಸನ್ನದ್ದತೆ ಪರೀಕ್ಷೆಗಾಗಿ ಮಾಕ್ ಡ್ರೀಲ್‌ಗೆ ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಏಪ್ರಿಲ್ 10, 11 ರಂದು ದೇಶವ್ಯಾಪಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಣುಕು ಪ್ರದರ್ಶನ ನಡೆಯಲಿದೆ. ಈ ಸಂಬಂಧ ಇಂದು ರಾಜ್ಯಗಳ ಆರೋಗ್ಯಾಧಿಕಾರಿಗಳ ಸಭೆ ನಡೆಯಲಿದೆ. ದೇಶದ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆ ಮುಖ್ಯಸ್ಥರು ವರ್ಚುವಲ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಣಕು ಡ್ರಿಲ್‌ನಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ, ಹಾಸಿಗೆಗಳ ಸಾಮರ್ಥ್ಯದ ಕುರಿತು ಚರ್ಚೆ ನಡೆಯಲಿದೆ.

ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಕೊರೊನಾ; ಪ್ರತಿ ದಿನ ನೂರಕ್ಕೂ ಹೆಚ್ಚು ಕೇಸ್ ಪತ್ತೆ, ವಾರಕ್ಕೆ ನಾಲ್ಕು ಸಾವು

ಭಾರತದಲ್ಲಿ ಸೋಮವಾರ1,805 ಹೊಸ ಪ್ರಕರಣಗಳು ದಾಖಲಾಗಿವೆ. ಜೊತೆಗೆ, 134 ದಿನಗಳ ನಂತರ ಕೊರೊನಾ ಸಂಕ್ರಿಯ ಸಂಖ್ಯೆ 10,000 ಗಡಿ ದಾಟಿದೆ. ಇದರಿಂದ ಈಗ ಆತಂಕ ಹೆಚ್ಚಾಗಿದೆ. ದೈನಂದಿನದ ಸಕ್ರಿಯ ದರವು 3.19 ಪ್ರತಿಶತ ಮತ್ತು ವಾರದ ಪಾಸಿಟಿವಿಟಿ ದರವು 1.39 ಪ್ರತಿಶತದಷ್ಟು ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10,300 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ಆರೋಗ್ಯ ಇಲಾಖೆ ಡೇಟಾವನ್ನು ಬಿಡಿಗಡೆ ಮಾಡಿದೆ. ಭಾನುವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 9,433 ಇತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ