AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕೋರ್ಟ್​​ ಆದೇಶ ಪ್ರಶ್ನಿಸಿ ಮೇಲ್ಮನವಿಗೆ ಮುಂದಾದ ಕೆಇಎ: ಕೆಇಎ ನಡೆಗೆ ಸಿಇಟಿ ರಿಪೀಟರ್ಸ್ ವಿದ್ಯಾರ್ಥಿಗಳ ಪೋಷಕರು ಗರಂ

ಕೆಇಎ ಪ್ರೆಶರ್ಸ್ ಮತ್ತು ಪುನರಾವರ್ತಿ ಎಂದು ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪುನರಾವರ್ತಿ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

ಹೈಕೋರ್ಟ್​​ ಆದೇಶ ಪ್ರಶ್ನಿಸಿ ಮೇಲ್ಮನವಿಗೆ ಮುಂದಾದ ಕೆಇಎ: ಕೆಇಎ ನಡೆಗೆ ಸಿಇಟಿ ರಿಪೀಟರ್ಸ್ ವಿದ್ಯಾರ್ಥಿಗಳ ಪೋಷಕರು ಗರಂ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Sep 08, 2022 | 5:15 PM

Share

ಬೆಂಗಳೂರು: ಕೆಇಎ (KEA) ಪ್ರೆಶರ್ಸ್ ಮತ್ತು ಪುನರಾವರ್ತಿ ಎಂದು ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪುನರಾವರ್ತಿ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ. ಪುನರಾವರ್ತಿತ ಪಿಯುಸಿ ವಿದ್ಯಾರ್ಥಿಗಳ (PUC Students) ಅಂಕ ಪರಿಗಣನೆ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ (High Court) (ಸೆ. 3) ರಂದು ಹಿಂದಿನಂತೆ ಪಿಯುಸಿ ಅಂಕ ಪರಿಗಣಿಸಲು ಆದೇಶ ನೀಡಿತ್ತು. ಆದರೆ ಕೆಇಎ  ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಇದನ್ನು ವಿರೋಧಿಸಿ ಪುನರಾವರ್ತಿ ವಿದ್ಯಾರ್ಥಿಗಳ ಪೋಷಕರು ಸುದ್ದಿಗೋಷ್ಠಿ ನಡೆಸಿ ನೀವೇ ಕೊಟ್ಟ ಪಿಯು ಬೋರ್ಡ್ ಅಂಕಪಟ್ಟಿಯನ್ನೇ ಪರಿಗಣಿಸೊಲ್ಲ ಅಂದರೆ ಹೇಗೆ? ಒಂದು ವರ್ಷ ಮಕ್ಕಳಿಗೆ ಪ್ಲೇಸ್ಮೆಂಟ್ ಇಲ್ಲದಂತಾಗುತ್ತೆ. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನೇರ ಹೊಣೆಯಾಗುತ್ತೆ ಎಂದು ಹೇಳಿದರು.

ಒಂದು ವರ್ಷ ಮಕ್ಕಳ ಭವಿಷ್ಯ ಹಾಳಾಗುತ್ತೆ. ಕೋರ್ಟ್ ಆದೇಶವನ್ನ ಪಾಲಿಸದೆ ಮೇಲ್ಮನವಿ ಸಲ್ಲಿಸಿದರೆ ಕೋರ್ಟ್ ಆದೇಶಕ್ಕೂ ಬೆಲೆ ಇಲ್ವಾ ? ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ.  ನಾವೂ ಕಾನೂನಾತ್ಮಕವಾಗಿ ಹೋರಾಟಕ್ಕೆ ಮುಂದಾಗುತ್ತೇವೆ. ಯಾವ ಮಕ್ಕಳಿಗೂ ಅನ್ಯಾಯವಾಗದಂತೆ ಸಮಿತಿ ರಚಿಸಿ   ಎಂದು ಆಗ್ರಹಿಸಿದರು.

ಮಕ್ಕಳ ವಿರುದ್ಧವೇ ಕೆಇಎ ಹೋರಾಟಕ್ಕೆ ಮುಂದಾಗಿರೋದು ಸರಿಯಲ್ಲ. ಒಂದು ಕಮಿಟಿ ಮಾಡಿ ಮಕ್ಕಳಿಗೆ ಭವಿಷ್ಯಕ್ಕೆ ನ್ಯಾಯ ಒದಗಿಸಿ. ಇಲ್ಲಿ ಈ ರೀತಿ ಆದರೆ ಮಕ್ಕಳು ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಇದು ಸರ್ಕಾರ ಹಾಗೂ ಇಲಾಖೆಗೆ ದೊಡ್ಡ ಸಮಸ್ಯೆಯಾಗುತ್ತೆ. ಪದೇಪದೆ ಕೋರ್ಟ್​ಗೆ ಅಲೆದಾಡುತ್ತಿದ್ದರೆ ಮಕ್ಕಳು ವ್ಯಾಸಾಂಗ ಹೇಗೆ ಮಾಡಬೇಕು. ಸರ್ಕಾರ ಕೂಡಲೆ ಕೆಇಎ ನಿರ್ವಾಹಕ ನಿರ್ದೇಶಕಿ ರಮ್ಯಾರನ್ನು ಬದಲಿಸ ಬೇಕು ಎಂದು ಪೋಷಕರು ಒತ್ತಾಯಿಸಿದರು.

ಘಟನೆ ಹಿನ್ನೆಲೆ 

ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕ ಪರಿಗಣನೆ ವಿಚಾರಕ್ಕೆ ಸಂಬಂಧಿಸಿ ಹಿಂದಿನಂತೆ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂಬ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು.

ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂದು ರಾಜ್ಯ ಸರ್ಕಾರ ಜುಲೈ 30ರಂದು ಆದೇಶ ಹೊರಡಿಸಿತ್ತು. ಬಳಿಕ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು. ಕೊವಿಡ್‌ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೇ ಪಿಯು ಉತ್ತೀರ್ಣರಾಗಿದ್ರು. ಹೀಗಾಗಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕವನ್ನು ಕೆಇಎ ಪರಿಗಣಿಸಲಿಲ್ಲ. ಸದ್ಯ ಈಗ ಪಿಯುಸಿ ಅಂಕ ಪರಿಗಣಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್​ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್​ ಆದೇಶ ನೀಡಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ (2020-21ನೇ) ದ್ವಿತೀಯ ಪಿಯುಸಿಯಲ್ಲಿ ತಾವು ಗಳಿಸಿದ ಅಂಕಗಳನ್ನು ವತ್ತಿಪರ ಕೋರ್ಸ್​ಗಳ ಸಿಇಟಿ ಹಂಚಿಕೆಯ ರ‍್ಯಾಂಕಿಂಗ್​ಗೆ ಪರಿಗಣಿಸಬೇಕು ಎಂದು ಕೋರಿ ಹಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ. ರಿಪಿಟರ್ಸ್​ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50 ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್​ ಈ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಈಗಾಗಲೇ ಸಿಇಟಿ ಪ್ರಕಟಿಸಿದ ರ‍್ಯಾಂಕಿಂಗ್​​​ ಪಟ್ಟಿಯಲ್ಲಿ ಏರುಪೇರಾಗುವ ಎಲ್ಲ ಸಾಧ್ಯತೆಗಳಿವೆ.
ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ