Chain Snatching: ಕೊರೊನಾ ಕಾಟದ ಮಧ್ಯೆ.. ಬೆಂಗಳೂರು ನಗರದಲ್ಲಿ ಮತ್ತೆ ಶುರುವಾಯ್ತು ಸರಗಳ್ಳರ ಹಾವಳಿ

| Updated By: ಸಾಧು ಶ್ರೀನಾಥ್​

Updated on: Jun 05, 2021 | 4:29 PM

ಕೊರೊನಾ ಕಾಟದ ಮಧ್ಯೆ ರಾಜಧಾನಿ ಬೆಂಗಳೂರು ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಶುರುವಾಗಿದೆ. ಕೊರೊನಾ ಭೀತಿಯಿಂದ ರಾಜಧಾನಿ ಸೇರಿದಂತೆ ಎಲ್ಲೆಡೆ ಅಪರಾಧ ಪ್ರಕರಣಗಳು ಒಂದಷ್ಟು ತಗ್ಗಿವೆ ಎಂದು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದರು. ಆದರೆ ಬೆಂಗಳೂರು ಪೊಲೀಸರಿಗೆ ಈಗ ಮತ್ತೆ ತಲೆ ಬಿಸಿ ಶುರುವಾಗಿದೆ.

Chain Snatching: ಕೊರೊನಾ ಕಾಟದ ಮಧ್ಯೆ.. ಬೆಂಗಳೂರು ನಗರದಲ್ಲಿ ಮತ್ತೆ ಶುರುವಾಯ್ತು ಸರಗಳ್ಳರ ಹಾವಳಿ
Chain Snatching: ಕೊರೊನಾ ಕಾಟದ ಮಧ್ಯೆ.. ಬೆಂಗಳೂರು ನಗರದಲ್ಲಿ ಮತ್ತೆ ಶುರುವಾಯ್ತು ಸರಗಳ್ಳರ ಹಾವಳಿ
Follow us on

ಬೆಂಗಳೂರು: ಕೊರೊನಾ ಕಾಟದ ಮಧ್ಯೆ ರಾಜಧಾನಿ ಬೆಂಗಳೂರು ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಶುರುವಾಗಿದೆ. ಕೊರೊನಾ ಭೀತಿಯಿಂದ ರಾಜಧಾನಿ ಸೇರಿದಂತೆ ಎಲ್ಲೆಡೆ ಅಪರಾಧ ಪ್ರಕರಣಗಳು ಒಂದಷ್ಟು ತಗ್ಗಿವೆ ಎಂದು ಕರ್ನಾಟಕ ಪೊಲೀಸರು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದರು. ಆದರೆ ಬೆಂಗಳೂರು ಪೊಲೀಸರಿಗೆ ಈಗ ಮತ್ತೆ ತಲೆ ಬಿಸಿ ಶುರುವಾಗಿದೆ.

ಬೆಂಗಳೂರು ನಗರದಲ್ಲಿ ಮನೆ ಮುಂದೆ ನಿಂತಿದ್ದ ಗೃಹಿಣಿಯ ಚಿನ್ನದ ಸರ ಕಸಿದು ಸರಗಳ್ಳರು ಎಸ್ಕೇಪ್ ಆಗಿದ್ದಾರೆ. ಮೋಹನ್ ಕುಮಾರಿ ಎಂಬಾಕೆಯ 40 ಗ್ರಾಂ ತೂಕದ ಚಿನ್ನದ ಸರ ಎಗರಿಸಿದ್ದಾರೆ. ವಿಜಯನಗರದ ಮೂಡಲಪಾಳ್ಯದ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಚಿನ್ನದ ಸರ ಕಸಿದು ಬೈಕ್‌ನಲ್ಲಿ ಬಂದಿದ್ದ ಇಬ್ಬರು ಎಸ್ಕೇಪ್ ಆಗಿದ್ದಾರೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಪರಾಧಗಳ ಪ್ರಮಾಣ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ 546 ಪ್ರಕರಣ ಮಾತ್ರ ದಾಖಲಾಗಿದೆ. ಸೈಬರ್ ಕ್ರೈಂ ಪ್ರಕರಣಗಳೇ ಈಗ ಹೆಚ್ಚಾಗಿ ದಾಖಲಾಗುತ್ತಿದೆ. ಉಳಿದಂತೆ ಕೊಲೆ, ದರೋಡೆ, ಕಳ್ಳತನ, ಸರಗಳ್ಳತನ, ಮನೆಗಳ್ಳತನ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಮೊದಲು ಜನವರಿ ತಿಂಗಳಿನಲ್ಲಿ 6,526 ಪ್ರಕರಣ ದಾಖಲಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ 5,642 ಅಪರಾಧ ಪ್ರಕರಣಗಳು ದಾಖಲಾಗಿದ್ದವು, ಮಾರ್ಚ್​ನಲ್ಲಿ 3,358 ಪ್ರಕರಣ ದಾಖಲಾಗಿತ್ತು ಹಾಗೂ ಏಪ್ರಿಲ್ ತಿಂಗಳಿನಲ್ಲಿ 2,028 ಪ್ರಕರಣಗಳು ದಾಖಲಾಗಿತ್ತು. ಜನವರಿಯಿಂದ ಈಚೆಗೆ ಪ್ರತೀ ತಿಂಗಳು ಅಪರಾಧ ಪ್ರಕರಣಗಳ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ. ಮೇ ತಿಂಗಳಿನಲ್ಲಿ ಇದುವರೆಗೆ ಕೇವಲ 546 ಪ್ರಕರಣಗಳು ಮಾತ್ರ ದಾಖಲಾಗಿವೆ.

(chain snatching in vijayanagar bangalore during corona times)

ಲಾಕ್​ಡೌನ್ ಬಳಿಕ ಬೆಂಗಳೂರಿನಲ್ಲಿ ಕ್ರೈಂ ರೇಟ್ ಇಳಿಕೆ; ದಾಖಲಾಗುತ್ತಿರುವ ಕೇಸ್​ಗಳಲ್ಲಿ ಸೈಬರ್ ಕ್ರೈಂ ಹೆಚ್ಚು

Published On - 4:28 pm, Sat, 5 June 21