ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಸಿಬ್ಬಂದಿ ಬೆಂಗಳೂರಿಗೆ ವರ್ಗಾವಣೆ!

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​ಗೆ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಸಸ್ಪೆಂಡ್ ಆಗಿದ್ದ ಸಿಐಎಸ್​ಎಫ್ ಸಿಬ್ಬಂದಿ ಕುಲ್ವಿಂದರ್​ ಕೌರ್ ಅವರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ. ಆದ್ರೆ, ಚಂಡೀಗಢ ವಿಮಾನ ನಿಲ್ದಾಣ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಸಿಬ್ಬಂದಿ ಬೆಂಗಳೂರಿಗೆ ವರ್ಗಾವಣೆ!
ಕಂಗನಾ, ಕುಲ್ವಿಂದರ್ ಕೌರ್
ಬಿ ಮೂರ್ತಿ, ನೆಲಮಂಗಲ Edited By:

Updated on: Jul 03, 2024 | 9:49 PM

ಬೆಂಗಳೂರು, (ಜುಲೈ 03): ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್​ಗೆ ಕೆನ್ನೆಗೆ ಬಾರಿಸಿ ಅಮಾನತುಗೊಂಡಿದ್ದ ಸಿಐಎಸ್​ಎಫ್ ಸಿಬ್ಬಂದಿ ಕುಲ್ವಿಂದರ್​ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಹೌದು…ಶಿಸ್ತು ಉಲ್ಲಂಘನೆ ವಿಚಾರಣೆ ಬಾಕಿಯಿರುವಂತೆ  ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ CISF ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.

ನಟಿ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಂಬಂಧ ಸಸ್ಪೆಂಡ್ ಆಗಿದ್ದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೇ ಅವರನ್ನು ಚಂಡೀಗಢದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವರ್ಗಾವಣೆ ಮಾಡಲಾಗಿದೆ. ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರಿಗೆ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.

ಇದನ್ನೂ ಓದಿ: ಕಂಗನಾ ಕೆನ್ನೆಗೆ ಹೊಡೆದಿದ್ದು ಯಾಕೆ? ಕಾರಣ ತಿಳಿಸಿದ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿ

ಜೂನ್ 7 ರಂದು ಕಂಗನಾ ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು.  ಬಳಿಕ ಕುಲ್ವಿಂದರ್ ಕೌರ್  ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಅಲ್ಲದೇ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಕಂಗನಾ ಹೇಳಿಕೆಯಿಂದ ಕುಲ್ವಿಂದರ್ ಅವರಿಗೆ ನೋವಾಗಿದೆ. ಈ ಕಾರಣದಿಂದ ಅವರಿ ಕಂಗನಾ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Loading...
Unable to load recommendations.
Follow Us