ಬೆಂಗಳೂರು: ಆ್ಯಂಬುಲೆನ್ಸ್ (ambulances) ಗಳಿಗೆ ಸಿಗ್ನಲ್ ಫ್ರೀ ವ್ಯವಸ್ಥೆ ಕಲ್ಪಿಸುವ ವಿಚಾರವಾಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆದಿದೆ. ಒಟ್ಟು 12107 ಆ್ಯಂಬುಲೆನ್ಸ್ ಪೈಕಿ 3368 ಆ್ಯಂಬುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಉಳಿದ ಆ್ಯಂಬುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಟ್ರಾಫಿಕ್ ಕಂಟ್ರೋಲ್ ರೂಂಗೆ ಆ್ಯಂಬುಲೆನ್ಸ್ ಮಾರ್ಗದ ಮಾಹಿತಿ ನೀಡುವಂತೆ ಆ್ಯಂಬುಲೆನ್ಸ್ಗಳಿಗೂ ಸೂಚಿಸಲಾಗಿದೆ. ಇದಕ್ಕಾಗಿ ವಿಶೇಷ ದೂರವಾಣಿ ನಂಬರ್ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್ಗೆ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದ್ದಾರೆ. ಸರ್ಕಾರ ಕ್ರಿಯಾಶೀಲವಾಗಿ ಸ್ಪಂದಿಸಿರುವುದನ್ನು ಸ್ವಾಗತಿಸುತ್ತೇವೆ. ಎಲ್ಲದಕ್ಕೂ ಸರ್ಕಾರವನ್ನೇ ಹೊಣೆ ಮಾಡಲಾಗುವುದಿಲ್ಲ. ನಾಗರಿಕರೂ ಆ್ಯಂಬುಲೆನ್ಸ್ಗಳಿಗೆ ದಾರಿ ಬಿಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ ಎಂದರು. ಸದ್ಯ ಈ ವಿಚಾರಣೆಯನ್ನು ಜ.11ಕ್ಕೆ ಹೈಕೋರ್ಟ್ ಮುಂದೂಡಿದೆ.
ವೇತನ ನೀಡಿಲ್ಲ ಎಂದು ಜಿವಿಕೆ ಸಂಸ್ಥೆ ವಿರುದ್ಧ ಬೀದಿಗಿಳಿದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು
ಬೆಂಗಳೂರು: ಕಳೆದು 2 ತಿಂಗಳಿಂದ ಜಿವಿಕೆ ಸಂಸ್ಥೆ ವೇತನ ನೀಡಿಲ್ಲ ಎಂದು ಬೀದಿಗಿಳಿದಿದ್ದ 108 ಆ್ಯಂಬುಲೆನ್ಸ್ ಸಿಬ್ಬಂದಿ ಈಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿ ಆಗಿದೆ. ಸಿಬ್ಬಂದಿಗೆ ಸಂಸ್ಥೆ ಸಂಬಳ ಪಾವತಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. ಆದ್ರೆ ಆರೋಗ್ಯ ಇಲಾಖೆ ಸೂಚನೆ ಬಳಿಕವೂ ಜಿವಿಕೆ ಸಂಸ್ಥೆ 108 ಌಂಬುಲೆನ್ಸ್ ಸಿಬ್ಬಂದಿಗೆ ವೇತನ ನೀಡಿಲ್ಲ. ಹೀಗಾಗಿ ವೇತನಕ್ಕೆ ಆಗ್ರಹಿಸಿ ಮತ್ತೆ 108 ಌಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಆರೋಗ್ಯಸೌಧದ ಎದುರು ಧರಣಿ ನಡೆಸಲಿದೆ. ಇದರ ನಡುವೆ ಈಗ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಜಿವಿಕೆಗೆ ಕೊನೆಯ ಗಡುವು ನೀಡಿದ್ದಾರೆ.
ಇದನ್ನೂ ಓದಿ: 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಂಬಳ ವಿಚಾರ: ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿಯಾಗಿದೆ ಎಂದ ಸಚಿವ ಡಾ.ಕೆ.ಸುಧಾಕರ್
ಆರೋಗ್ಯ ಇಲಾಖೆ ಆದೇಶಕ್ಕೂ ಜಿವಿಕೆ ಸಂಸ್ಥೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸಂಬಳವಿಲ್ಲದೆ ಆ್ಯಂಬುಲೆನ್ಸ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಸಭೆ ನಡೆಸಿ ಮೂರು ತಿಂಗಳ ವೇತನ ನೀಡುವಂತೆ ಜಿವಿಕೆ ಸಂಸ್ಥೆಗೆ ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ರು. ಆದ್ರೆ ಜಿವಿಕೆ ಕೇವಲ ಒಂದು ತಿಂಗಳ ವೇತನ ಮಾತ್ರ ನೀಡಿದ್ದು 2 ತಿಂಗಳ ವೇತನ ಬಾಕಿ ಉಳಿಸಿದೆ. ಹಾಗೂ ವೇತನ ಹೆಚ್ಚಳ ಮಾಡಿಲ್ಲ. ಈ ಹಿನ್ನೆಲೆ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ.
ಇದನ್ನೂ ಓದಿ: ಶಿರೂರು ಆ್ಯಂಬುಲೆನ್ಸ್ ದುರಂತ ಪ್ರಕರಣ; ಆ್ಯಂಬುಲೆನ್ಸ್ನಲ್ಲಿದ್ದ ವ್ಯಕ್ತಿ ಹೇಳಿದ್ದೇನು?
ಜಿವಿಕೆ ಸಂಸ್ಥೆಗೆ ಕೊನೆಯ ಗಡುವು ನೀಡಿದ ಆರೋಗ್ಯ ಇಲಾಖೆ
ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಜಿವಿಕೆ ಸಂಸ್ಥೆಗೆ 3 ದಿನಗಳ ಗಡುವು ನೀಡಿದ್ದಾರೆ. 3 ದಿನದಲ್ಲಿ ವೇತನ ನೀಡದಿದ್ದರೆ ಬ್ಲ್ಯಾಕ್ಲಿಸ್ಟ್ಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜಿವಿಕೆ ಮೇಲೆ ಈಗಾಗಲೇ ಅನೇಕ ಆರೋಪಗಳು ಕೇಳಿ ಬಂದಿವೆ. ನ.14ರೊಳಗೆ ಸಿಬ್ಬಂದಿಗೆ ಸಂಬಳ ನೀಡುವುದಾಗಿ ಸಂಸ್ಥೆ ಹೇಳಿತ್ತು. ನ.14 ಮುಗಿದರೂ 108 ಆ್ಯಂಬುಲೆನ್ಸ್ ನೌಕರರಿಗೆ ಸಂಬಳ ನೀಡಿಲ್ಲ. ವೇತನ ನೀಡದಿದ್ದರೆ ಸಂಸ್ಥೆ ವಿರುದ್ಧ ಸರ್ಕಾರಕ್ಕೆ ವರದಿ ನೀಡುತ್ತೇವೆ. ಕಂಪನಿಗೆ ನಾವು ಸ್ಯಾಟಿಸ್‌ಫ್ಯಾಕ್ಟರಿ ( satisfactory) ಸರ್ಟಿಫಿಕೇಟ್ ಕೊಡಲ್ಲ. ಸರ್ಟಿಫಿಕೇಟ್ ಬಂದಿಲ್ಲ ಅಂದ್ರೆ ಮುಂದಿನ ದಿನದಲ್ಲಿ ಟೆಂಡರ್ ನಲ್ಲಿ ಅವಕಾಶ ಸಿಗುವುದಿಲ್ಲ. 3 ದಿನದಲ್ಲಿ ಸಂಬಳ ನೀಡದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.