ಶಿರೂರು ಆ್ಯಂಬುಲೆನ್ಸ್ ದುರಂತ ಪ್ರಕರಣ; ಆ್ಯಂಬುಲೆನ್ಸ್ನಲ್ಲಿದ್ದ ವ್ಯಕ್ತಿ ಹೇಳಿದ್ದೇನು?
ನನಗೆ ಪೇಷಂಟ್ ಜೊತೆಗೆ ಕುಳಿಕೊ ಅಂದರು. ಅಷ್ಟರಲ್ಲಿ ಜ್ಯೋತಿ ನಾಯ್ಕ, ಮಂಜುನಾಥ್ ನಾಯ್ಕ ಸಂಬಂಧಿಕರು ಬಂದರು. ಹೀಗಾಗಿ ನಾನು ಮುಂದೆ ಕುಳಿತುಕೊಂಡೆ. ಹೊನ್ನಾವರದಿಂದ ಹೊರಟಾಗ ವಾಹನ ಸ್ಪೀಡ್ ಇತ್ತು.

ಕಾರವಾರ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ (Toll Gate ) ಬಳಿ ನಿನ್ನೆ (ಜುಲೈ 20) ನಡೆದಿದ್ದ ಆ್ಯಂಬುಲೆನ್ಸ್ ದುರಂತ (Ambulance Accident) ಪ್ರಕರಣಕ್ಕೆ ಸಂಬಂಧಿಸಿ ಬದಕುಳಿದಿರುವ ಗಣೇಶ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಗಜಾನನ ನಾಯ್ಕ ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಅವರ ಪತ್ನಿ ಗೀತಾ ನಾಯ್ಕ ಅವರನ್ನ ಆಸ್ಪತ್ರೆಗೆ ಕರಿದೊಂಡ ಹೋಗತ್ತಿದ್ದರು. ಒಬ್ಬರೆ ಇದ್ದಾರಲ್ಲ ಅಂತಾ ಆಟೋ ಮಾಡಿಕೊಂಡು ನಾನು ಅವರ ಜೊತೆ ಹೋದೆ. ಹೊನ್ನಾವರ ಖಾಸಗಿ ಆಸ್ಪತ್ರೆಗೆ ಹೋದ ತಕ್ಷಣ ಅವರು ಬೇಗ ಉಡುಪಿಗೆ ಆಸ್ಪತ್ರೆಗೆ ಹೋಗಿ ಅಂದರು. ತಕ್ಷಣ ನಾವು ಆ ಆಸ್ಪತ್ರೆಯ ಆ್ಯಂಬುಲೆನ್ಸ್ ತೆಗೆದುಕೊಂಡು ಹೊರಟೆವು ಎಂದು ತಿಳಿಸಿದರು.
ನನಗೆ ಪೇಷಂಟ್ ಜೊತೆಗೆ ಕುಳಿಕೊ ಅಂದರು. ಅಷ್ಟರಲ್ಲಿ ಜ್ಯೋತಿ ನಾಯ್ಕ, ಮಂಜುನಾಥ್ ನಾಯ್ಕ ಸಂಬಂಧಿಕರು ಬಂದರು. ಹೀಗಾಗಿ ನಾನು ಮುಂದೆ ಕುಳಿತುಕೊಂಡೆ. ಹೊನ್ನಾವರದಿಂದ ಹೊರಟಾಗ ವಾಹನ ಸ್ಪೀಡ್ ಇತ್ತು. ನಾನು ಪೇಷಂಟ್ನ ಸರಿಯಾಗಿ ಹಿಡಿದುಕೊಳ್ಳಿ ಅಂತಾ ತಿರುಗಿ ಅವರಿಗೆ ಹೇಳುತ್ತಿದ್ದೆ. ತಿರುಗಿ ನೋಡುವುದರೊಳಗೆ ನಮ್ಮ ಗಾಡಿ ಪಲ್ಟಿ ಹೊಡೆದು ಬಿತ್ತು. ಏನಾಯಿತು ಎಂತ ನೋಡುವಾಗಲೇ ಮೂರು ಜನ ಸಾವನ್ನಪ್ಪಿದ್ದರು. ಇನ್ನೊಬ್ಬ ಮಂಜುನಾಥ್ ನಾಯ್ಕ ಆಸ್ಪತ್ರೆಗೆ ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಹೇಳಿದರು.
ನಾನು ಬದಕುಳಿದಿದ್ದೆ ಅದೃಷ್ಟ. ಶಿರೂರು ಟೋಲ್ ಗೇಟ್ ಸಿಬ್ಬಂದಿಗಳದ್ದೇ ತಪ್ಪು. ದಾರಿ ಮದ್ಯೆ ಹಸು ಮಲಗಿದೆ. ಅದನ್ನ ಎಬ್ಬಿಸಿಲ್ಲ. ಗೇಟ್ ವಾಹನ ಬಂದ ಮೇಲೆ ತೆಗೆದರು. ಹೀಗಾಗಿ ಈ ಅನಾಹುತವಾಗಿದೆ ಎಂದು ಆ್ಯಂಬುಲೆನ್ಸ್ನಲ್ಲಿದ್ದ ಗಣೇಶ್ ಹೇಳಿದ್ದಾರೆ.
ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತರ ಸಂಬಂಧಿ ಗಾಯಾಳು ಶಶಾಂಕ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಮಧ್ಯಾಹ್ನ ಗಜಾನನ ನಾಯ್ಕ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಆಂಬ್ಯುಲೆನ್ಸ್ ಚಾಲಕ ಸೇರಿ ಒಟ್ಟು ಏಳು ಮಂದಿ ಬರುತ್ತಿದ್ದೆವು. ಆಂಬ್ಯುಲೆನ್ಸ್ ವೇಗವಾಗಿ ಉಡುಪಿ ಕಡೆ ಬರುತ್ತಿದ್ದು, ಹಿಂಬದಿಯಲ್ಲಿ ನಾನು ಸೇರಿ ಐದು ಇದ್ದೆವು. ಟೋಲ್‌ನಲ್ಲಿ ಚಾಲಕ ಸಡನ್ ಬ್ರೇಕ್ ಹಾಕಿದ್ದು, ಹೀಗಾಗಿ ಆಂಬ್ಯುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾನು ಹೊರಗೆ ಹೋಗಿ ಬಿದ್ದು ಮೂರ್ಛೆ ಹೋದೆ. ಬೆನ್ನಿನ ಭಾಗ, ಕಾಲಿಗೆ ಏಟಾಗಿದೆ ಎಂದು ಹೇಳಿದರು.
Published On - 12:50 pm, Thu, 21 July 22








