ಚಾಮರಾಜಪೇಟೆ ಈದ್ಗಾ ಮೈದಾನ ಸರ್ಕಾರದ ಸ್ವತ್ತು ಎಂಬುದಕ್ಕೆ ಮತ್ತೊಂದು ದಾಖಲೆ ಬಿಡುಗಡೆ; ಸಹಿ ಸಂಗ್ರಹ ಅಭಿಯಾನ ಆರಂಭ

| Updated By: sandhya thejappa

Updated on: Jul 17, 2022 | 12:54 PM

ಬೆಂಗಳೂರಿಗೆ ಮೊಟ್ಟ ಮೊದಲ ಲೇಔಟ್ ಆಗಿದ್ದೇ ಚಾಮರಾಜಪೇಟೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಆದ ಲೇಔಟ್. ತನ್ನ ತಂದೆಯ ನೆನಪಿನಲ್ಲಿ ಲೇಔಟ್ ನಿರ್ಮಿಸಲಾಗುತ್ತದೆ.

ಚಾಮರಾಜಪೇಟೆ ಈದ್ಗಾ ಮೈದಾನ ಸರ್ಕಾರದ ಸ್ವತ್ತು ಎಂಬುದಕ್ಕೆ ಮತ್ತೊಂದು ದಾಖಲೆ ಬಿಡುಗಡೆ; ಸಹಿ ಸಂಗ್ರಹ ಅಭಿಯಾನ ಆರಂಭ
ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ (Idgah Maidan) ಸರ್ಕಾರದ ಸ್ವತ್ತು ಎಂಬುದಕ್ಕೆ ನಾಗರಿಕ ಒಕ್ಕೂಟ ಮತ್ತೊಂದು ದಾಖಲೆ (Document) ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಡುವ ಸ್ವತ್ತು ಎಂದು ಉಲ್ಲೇಖವಾಗಿದೆ. 1950ರಲ್ಲೇ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಮೈದಾನ ಯಾವುದೇ ದರ್ಗಾಕ್ಕೆ ನೀಡಿಲ್ಲ. ಇದು ಸರ್ಕಾರಿ ಸ್ವತ್ತು ಎಂದು ಗಡಿ ಸಮೇತ ಉಲ್ಲೇಖವಾಗಿರುವ ದಾಖಲೆಯನ್ನು ಒಕ್ಕೂಟ ಬಿಡುಗಡೆ ಮಾಡಿದೆ.

ಬೆಂಗಳೂರಿಗೆ ಮೊಟ್ಟ ಮೊದಲ ಲೇಔಟ್ ಆಗಿದ್ದೇ ಚಾಮರಾಜಪೇಟೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಆದ ಲೇಔಟ್. ತನ್ನ ತಂದೆಯ ನೆನಪಿನಲ್ಲಿ ಲೇಔಟ್ ನಿರ್ಮಿಸಲಾಗುತ್ತದೆ. ಯೋಜಿತ ಮೊದಲ ಲೇಔಟ್ ಚಾಮರಾಜಪೇಟೆಯಲ್ಲಿ ಸಂತೆಗೆ ಎಂದು ಮೀಸಲಿರಿಸಲಾಗುತ್ತೆ. ಆನಂತರ ಇದು ಆಟದ ಮೈದಾನವಾಗಿ ಬಳಕೆಯಾಗುತ್ತದೆ ಎಂದು ನಾಗರಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಹೇಳಿದ್ದಾರೆ.

ಇದನ್ನೂ ಓದಿ: Oppo Reno 8: ಬಿಡುಗಡೆಗೆ ಒಂದು ದಿನ ಇರುವಾಗ ಸೋರಿಕೆ ಆಯ್ತು ಒಪ್ಪೋ ರೆನೊ 8 ಸರಣಿ ಸ್ಮಾರ್ಟ್​​ಫೋನ್ ಬೆಲೆ

ಇದನ್ನೂ ಓದಿ
Sanchari Vijay: ಸಂಚಾರಿ ವಿಜಯ್​ ಹುಟ್ಟುಹಬ್ಬ: ಪ್ರತಿಭಾನ್ವಿತ ನಟನ ನೆನೆದು ‘ಮಿಸ್​ ಯೂ’ ಎನ್ನುತ್ತಿದೆ ಸ್ಯಾಂಡಲ್​ವುಡ್​
Karnataka Rain: ಕರ್ನಾಟಕದ ವಿವಿಧೆಡೆ ಇನ್ನೆರಡು ದಿನ ಮಳೆ: 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
IND vs ENG: ತೃತೀಯ ಏಕದಿನಕ್ಕೆ ಟೀಮ್ ಇಂಡಿಯಾ ಸಜ್ಜು: ಮೈದಾನದಲ್ಲಿ ಕೊಹ್ಲಿ ಭರ್ಜರಿ ಅಭ್ಯಾಸ
Viral Video: 8ಲಕ್ಷಕ್ಕೆ ಮಾರಾಟವಾದ ಮೇಕೆ ಮಾಲೀಕನನ್ನು ತಬ್ಬಿಕೊಂಡು ಮನುಷ್ಯರಂತೆ ಕೂಗಿದ ವಿಡಿಯೋ ವೈರಲ್

ಮೈದಾನದ ದಾಖಲೆಗಳು

ಮೈದಾನಕ್ಕೆ 10ನೇ ಚಾಮರಾಜೇಂದ್ರ ಒಡೆಯರ್ ಹೆಸರಿಡಬೇಕು ಎಂದು ಆಗ್ರಹಿಸಿರುವ ರುಕ್ಮಾಂಗದ, ಚಾಮರಾಜಪೇಟೆ ಬಂದ್ ಮಾಡಿದ್ದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವಾಗಿದೆ. ಚಾಮರಾಜಪೇಟೆ ಜನತಾ ಹೋಟೆಲ್ ಮುಂಭಾಗ, ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ, ಟಿ.ಆರ್. ಮಿಲ್ ಸರ್ಕಲ್, ಮಕ್ಕಳ ಕೂಟ, ಜಿಂಕೆ ಪಾರ್ಕ್ ಸೇರಿದಂತೆ ಚಾಮರಾಜಪೇಟೆಯ ಒಟ್ಟು 6 ಭಾಗಗಳಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ. ಸಹಿ ಸಂಗ್ರಹಿಸಿ ಪ್ರಧಾನ ಮಂತ್ರಿಗೆ ಒಂದು ಪ್ರತಿ ಕಳಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿಗೂ ಇದನ್ನ ತಲುಪಿಸುತ್ತೇವೆ. ಸದ್ಯದಲ್ಲೇ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಮಾಡ್ತೀವಿ. ಇದು ಆಟದ ಮೈದಾನವಾಗಿಯೇ ಉಳಿಯಬೇಕು ಎಂದರು.

ಸಹಿ ಸಂಗ್ರಹ ಅಭಿಯಾನ ಆರಂಭ:
ಮೈದಾನದ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಗರಿಕರ ಒಕ್ಕೂಟ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಮೈದಾನ ರಕ್ಷಿಸಿ, ಸರ್ಕಾರಿ ಸ್ವತ್ತು ಎಂದು ಘೋಷಿಸಲು ಒತ್ತಾಯಿಸಿರುವ ನಾಗರಿಕರ ಒಕ್ಕೂಟ, ಬಿಬಿಎಂಪಿಗೆ 15 ದಿನಗಳ ಕಾಲ ಡೆಡ್​ಲೈನ್ ನೀಡಿದೆ.

ಬಿಬಿಎಂಪಿಗೆ ಡೆಡ್​ಲೈನ್:
ಈದ್ಗಾ ಮೈದಾನವನ್ನು ಸರ್ಕಾರದ ಸ್ವತ್ತೆಂದು ಘೋಷಿಸಬೇಕು ಅಂತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಡೆಡ್​ಲೈನ್​ ನೀಡಿದೆ. ಜು.31ರೊಳಗೆ ಈದ್ಗಾ ಮೈದಾನ ಸರ್ಕಾರದ ಸ್ವತ್ತೆಂದು ಘೋಷಿಸಬೇಕು. ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡಬೇಕು. ಇಲ್ಲದಿದ್ದರೆ ನಾವೇ ಮರುನಾಮಕರಣ ಮಾಡುತ್ತೇವೆ ಎಂದು ನಾಗರಿಕರ ಒಕ್ಕೂಟ ಎಚ್ಚರಿಕೆ ನೀಡಿದೆ. ಈಗಾಗಲೇ ನಾಗರಿಕರ ಒಕ್ಕೂಟ ಸಂಸದ ಪಿ.ಸಿ ಮೋಹನ್ ಜೊತೆ ತೆರಳಿ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Viral Video: ಫೈನಲ್​ ಪಂದ್ಯಕ್ಕೂ ಮುನ್ನವೇ ವಿಭಿನ್ನವಾಗಿ ಸಂಭ್ರಮಿಸಿದ ಜಿಂಬಾಬ್ವೆ ತಂಡ..!

Published On - 12:42 pm, Sun, 17 July 22