Viral Video: ಫೈನಲ್ ಪಂದ್ಯಕ್ಕೂ ಮುನ್ನವೇ ವಿಭಿನ್ನವಾಗಿ ಸಂಭ್ರಮಿಸಿದ ಜಿಂಬಾಬ್ವೆ ತಂಡ..!
T20 World Cup 2022: ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ಸೂಪರ್ 12 ಗೆ ಅರ್ಹತೆ ಪಡೆದಿವೆ.
ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಫೈನಲ್ ಪಂದ್ಯಕ್ಕೂ ಮುನ್ನ ಜಿಂಬಾಬ್ವೆ ತಂಡವು ಡ್ರೆಸ್ಸಿಂಗ್ ರೂಮ್ನಲ್ಲಿ ಸಖತ್ತಾಗೆ ಸಂಭ್ರಮಿಸಿದ ವಿಡಿಯೋವನ್ನು ಜಿಂಬಾಬ್ವೆ ಕ್ರಿಕೆಟ್ ಅಸೋಷಿಯೇಷನ್ ಹಂಚಿಕೊಂಡಿದೆ. ಹೀಗೆ ಸಂಭ್ರಮಿಸಲು ಕಾರಣ ಫೈನಲ್‌ಗೆ ಎಂಟ್ರಿ ಕೊಟ್ಟಿರುವುದು. ಅಂದರೆ ಅರ್ಹತಾ ಸುತ್ತಿನ ಫೈನಲ್ ಪ್ರವೇಶಿಸುವ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲಿದೆ. ಅದರಂತೆ ಇದೀಗ ಜಿಂಬಾಬ್ವೆ ಹಾಗೂ ನೆದರ್ಲೆಂಡ್ಸ್ ಕ್ರಿಕೆಟ್ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳನ್ನು ಅಂತಿಮಗೊಳಿಸಲಾಗಿದೆ.
ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿಶ್ವಕಪ್‌ನಲ್ಲಿ ಆಡುವ 15 ಮತ್ತು 16 ನೇ ತಂಡಗಳಾಗಿವೆ. T20 ವಿಶ್ವಕಪ್‌ಗೆ ಅರ್ಹತೆ ಪಡೆದ ನಂತರ, ಜಿಂಬಾಬ್ವೆ ಆಟಗಾರರು ಈ ಯಶಸ್ಸನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಇದರ ವಿಡಿಯೋವನ್ನು ಜಿಂಬಾಬ್ವೆ ಕ್ರಿಕೆಟ್ ಅಸೋಸಿಯೇಷನ್ ತನ್ನ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದೆ.
ಈ ವೀಡಿಯೊದಲ್ಲಿ, ಎಲ್ಲಾ ಆಟಗಾರರು ತಮ್ಮ ಬ್ಯಾಟ್‌ಗಳನ್ನು ನೆಲದ ಮೇಲೆ ಬಲವಾಗಿ ಟ್ಯಾಪ್ ಮಾಡುತ್ತಿದ್ದಾರೆ. ಇದು ಆಫ್ರಿಕನ್ ದೇಶಗಳ ಬುಡಕಟ್ಟು ಜನಾಂಗದವರ ಸಂತೋಷವನ್ನು ಆಚರಿಸುವ ಸಾಂಪ್ರದಾಯಿಕ ಶೈಲಿ ಎಂಬುದು ವಿಶೇಷ. ಕ್ರೇಗ್ ಎರ್ವಿನ್ ನೇತೃತ್ವದ ಜಿಂಬಾಬ್ವೆ ತಂಡಕ್ಕೆ ಇದು ದೊಡ್ಡ ಸಾಧನೆಯಾಗಿದೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ತಂಡ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಐಸಿಸಿಯ ಟಾಪ್ 10 ತಂಡಗಳ ನಿಯಮದಿಂದಾಗಿ ಜಿಂಬಾಬ್ವೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2019 ರ ವಿಶ್ವಕಪ್‌ಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.
#ICYMI: The lads celebrating after clinching a place at the ICC Men’s T20 World Cup ? pic.twitter.com/ZoRQe57cz3
— Zimbabwe Cricket (@ZimCricketv) July 16, 2022
ಮತ್ತೊಂದೆಡೆ, ನೆದರ್ಲೆಂಡ್ಸ್ ತನ್ನ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿ ಅರ್ಹತಾ ಸುತ್ತಿನ ಫೈನಲ್‌ಗೆ ಪ್ರವೇಶಿಸಿತು. ಇದೀಗ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯವು ನೆದರ್ಲೆಂಡ್ಸ್ ಮತ್ತು ಜಿಂಬಾಬ್ವೆ ನಡುವೆ ನಡೆಯಲಿದ್ದು, ಫೈನಲ್‌ನಲ್ಲಿ ಗೆದ್ದ ತಂಡ ವಿಶ್ವಕಪ್‌ನಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆಯಲಿದೆ. ಹಾಗೆಯೇ ರನ್ನರ್ ಅಪ್ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆಯಲಿದೆ.
ಗ್ರೂಪ್-ಬಿ ಯಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳಿದ್ದರೆ, ಗ್ರೂಪ್-ಎ ನಲ್ಲಿ ನಮೀಬಿಯಾ, ಯುಎಇ ಮತ್ತು 2014 ಚಾಂಪಿಯನ್ ತಂಡ ಶ್ರೀಲಂಕಾ ತಂಡವಿದೆ. ಇಲ್ಲಿ ಒಟ್ಟು 16 ತಂಡಗಳು ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದರೂ 8 ತಂಡಗಳ ನಡುವೆ ಸೂಪರ್ 12 ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ.
ಅಂದರೆ ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ಸೂಪರ್ 12 ಗೆ ಅರ್ಹತೆ ಪಡೆದಿವೆ. ಇನ್ನು ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ, ಸ್ಕಾಟ್ಲೆಂಡ್, ನಮೀಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್ ತಂಡಗಳು ಮೊದಲ ಸುತ್ತಿನ ಮೂಲಕ ಸೂಪರ್ 12 ಹಂತಕ್ಕೇರಲು ಅರ್ಹತಾ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಟಾಪ್-4 ಬರುವ ನಾಲ್ಕು ತಂಡಗಳು ಸೂಪರ್-12 ನಲ್ಲಿ ಆಡಲಿದೆ.