Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಡೇಟ್​ ಆಫ್ ಬರ್ತ್​ ವಿಚಾರಕ್ಕೆ ಸಿನಿಯರ್​, ಜೂನಿಯರ್ಸ್​ ನಡುವೆ ಗಲಾಟೆ; ದೂರು ದಾಖಲು ​

ಕ್ಷುಲ್ಲಕ ಕಾರಣಕ್ಕೆ ಸೀನಿಯರ್​ ಜೂನಿಯರ್​ಗಳ​ ನಡುವೆ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಜೆಪಿ ನಗರ ಠಾಣಾ ವ್ಯಾಪ್ತಿಯ ಪ್ರೆಸಿಡೆನ್ಸಿ ಕಾಂಪೋಸಿಟ್ ಪಿಯು ಕಾಲೇಜು ಬಳಿ ನಡೆದಿದೆ.

ಬೆಂಗಳೂರು: ಡೇಟ್​ ಆಫ್ ಬರ್ತ್​ ವಿಚಾರಕ್ಕೆ ಸಿನಿಯರ್​, ಜೂನಿಯರ್ಸ್​ ನಡುವೆ ಗಲಾಟೆ; ದೂರು ದಾಖಲು ​
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Aug 04, 2023 | 12:55 PM

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸೀನಿಯರ್ (Senior)​ ಜೂನಿಯರ್​ಗಳ (Junior)​ ನಡುವೆ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಜೆಪಿ ನಗರ ಠಾಣಾ ವ್ಯಾಪ್ತಿಯ ಪ್ರೆಸಿಡೆನ್ಸಿ ಕಾಂಪೋಸಿಟ್ ಪಿಯು ಕಾಲೇಜು ಬಳಿ ನಡೆದಿದೆ. ಮಹಮ್ಮದ್ ಅಜೀಮ್ ಪಾಷ ಹಲ್ಲೆಗೊಳಗಾದ ವ್ಯಕ್ತಿ. ಮಹಮ್ಮದ್ ಅಜೀಮ್ ಪಾಷ ಪ್ರೆಸಿಡೆನ್ಸಿ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (2nd Puc) ಓದುತ್ತಿದ್ದಾರೆ. ಇವರಿಗೆ ಪರಿಚಯವಿದ್ದ ಮಹಮ್ಮದ್ ಉಬೇದ್ ಉಲಾ ಎಂಬುವರು ಅದೇ ಕಾಲೇಜಿಗೆ ಪ್ರಥಮ ಪಿಯುಸಿಗೆ ದಾಖಲಾಗಿದ್ದಾರೆ.

ಈ ಹಿನ್ನೆಲೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸನಿಯರ್ಸ್​​​ ಜು.22 ರಂದು ವೆಲ್ ಕಮ್ ಡೇ ಏರ್ಪಡಿಸಿದ್ದರು. ಈ ದಿನ ಮಹಮ್ಮದ್ ಅಜೀಮ್ ಪಾಷ ಅವರಿಗೆ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಓರ್ವ ವಿದ್ಯಾರ್ಥಿನಿ ಪರಿಚಯವಾಗಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಕಸದಿಂದ ರಸ; ತ್ಯಾಜ್ಯದಿಂದ ವಿದ್ಯುತ್​ ಉತ್ಪಾದನೆ ಸ್ಥಾವರ ಅಕ್ಟೋಬರ್​ಗೆ ಕಾರ್ಯಾರಂಭ

ನಂತರ ಜು.24 ಆಕೆ ಮಹಮ್ಮದ್ ಅಜೀಮ್ ಪಾಷ ಅವರನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ, ನಿನಗೆ ಪರಿಚಯವಿರುವ ಮಹಮ್ಮದ್‌ ಉಬೇದ್ ಉಲಾ ಅವರ ಜನ್ಮ ದಿನಾಂಕವನ್ನು ಹೇಳು ಎಂದಿದ್ದಾಳೆ. ಆಗ ಮಹಮ್ಮದ್ ಅಜೀಮ್ ಪಾಷ ನನಗೆ ಗೊತ್ತಿಲ್ಲ ಎಂದು ಹೇಳಿ ಮನೆಗೆ ಹೋಗಿದ್ದಾರೆ. ಮರುದಿನ ಜು.25 ರಂದು ಮಧ್ಯಾಹ್ನ ವಿಶ್ರಾಂತಿ ಸಮಯದಲ್ಲಿ ವಿದ್ಯಾರ್ಥಿನಿ ನೀನು ಮಹಮ್ಮದ್ ಉಬೇದ್ ಉಲಾ ಜನ್ಮ ದಿನಾಂಕವನ್ನು ನೀಡಲಿಲ್ಲ ಅಲವೇ. ನಾನು ಯಾರೆಂದು ನಿನಗೆ ತೋರಿಸುತ್ತೇನೆಂದು ಮಹಮ್ಮದ್ ಅಜೀಮ್ ಪಾಷಗೆ ಎಚ್ಚರಿಕೆ ನೀಡಿದ್ದಾಳೆ.

ಬಳಿಕ ಝನ್ ಮತ್ತು ಶೇಕ್ ಎಂಬಾತನನ್ನು ಕರೆಸಿ ಮಹಮ್ಮದ್ ಅಜೀಮ್ ಪಾಷರನ್ನು ಕಾಲೇಜಿನಿಂದ ಬಲವಂತವಾಗಿ ಕಾಕ್ ಮ್ಯಾಜಿಕ್ ಬಳಿಗೆ ಕರೆದುಕೊಂಡು ಹೋಗಿ ಮೂರ್ನಾಲ್ಕು ಜನ ಸೇರಿ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಬಳಿಕ ಬಲವಂತವಾಗಿ ಜಯನಗರ 4ನೇ ಟಿ ಬಾಕಲಿರುವ ಬಿ.ಇ.ಎಸ್. ಕಾಲೇಜಿನ ಬಳಿಗೆ ಕರೆದುಕೊಂಡು ಹೋಗಿ ಮತ್ತಷ್ಟು ಥಳಿಸಿ ನಿನಗೆ ನಾವು ಹೊಡೆದಿರುವ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಮ್ಮದ್ ಅಜೀಮ್ ಪಾಷ ದೂರಿನಲ್ಲಿ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ