ಕಬ್ಬನ್ ಉದ್ಯಾನದಲ್ಲಿನ ಕ್ಲಬ್, ಕಟ್ಟಡಗಳನ್ನು ತೆರವುಗೊಳಿಸಬೇಕು: ಅಧ್ಯಕ್ಷ ಎಸ್ ಉಮೇಶ್ ಒತ್ತಾಯ
ಕಬ್ಬನ್ ಉದ್ಯಾನದಲ್ಲಿ ಕ್ಲಬ್‍ಗಳ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಕೊಡದೆ, ಉದ್ಯಾನವನ್ನು ರಕ್ಷಿಸಬೇಕು ಎಂದು ಕಬ್ಬನ್‍ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು, ಜು.23: ಕಬ್ಬನ್ ಉದ್ಯಾನ (Cubbon Park) ದಲ್ಲಿ ಕ್ಲಬ್‍ಗಳ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಕೊಡದೆ, ಉದ್ಯಾನವನ್ನು ರಕ್ಷಿಸಬೇಕು ಎಂದು ಕಬ್ಬನ್‍ಪಾರ್ಕ್ ನಡಿಗೆದಾರರ ಸಂಘ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ. ಕಬ್ಬನ್ ಉದ್ಯಾನವನದಲ್ಲಿನ ಸೆಂಚುರಿ ಕ್ಲಬ್ನ್ನು ಪಾರ್ಕ್ ವಲಯದಿಂದ ಕೈಬಿಡುವ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಆದಷ್ಟು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾನಾಯಕ, ಸಚಿವ ಎನ್.ಎಸ್.ಬೋಸರಾಜು ಸದನದಲ್ಲಿ ಉತ್ತರಿಸಿದ್ದಾರೆ.
ಕಬ್ಬನ್ ಉದ್ಯಾನದ ಜಾಗದಲ್ಲಿ ಕ್ಲಬ್ ಸೆಂಚುರಿ ಕ್ಲಬ್ ಅನ್ನು ನಿರ್ಮಿಸಿರುವುದೇ ಅಕ್ಷಮ್ಯ. ಇದನ್ನು ಕಬ್ಬನ್ ಉದ್ಯಾನದಿಂದ ಬೇರ್ಪಡಿಸಬೇಕು ಎಂಬ ಸದಸ್ಯೆ ತೇಜಸ್ವಿನಿಗೌಡ ಅವರ ವಿಚಾರವನ್ನು ಖಂಡಿಸುತ್ತೇವೆ. ಕಬ್ಬನ್ ಉದ್ಯಾನದ ಉಳಿವಿಗಾಗಿ ಸಾಕಷ್ಟು ಹೋರಾಟ ಕೈಗೊಂಡು, ಕ್ಲಬ್ ಹಾಗೂ ಇತರೆ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ನ್ಯಾಯಾಲಯದಲ್ಲಿ ದೂರು ದಾಖಲಿಸಿ ನಿರಂತರವಾಗಿ ಹೋರಾಡುತ್ತಿದ್ದೇವೆ.
ಇದನ್ನೂ ಓದಿ: ಜುಲೈ 1ರಿಂದ ಜು.22ರ ವರೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಜಲಾಶಯಗಳ ಒಳಹರಿವು ಹೆಚ್ಚಳ
ಹೀಗಿರುವಾಗಿ ಉದ್ಯಾನ ವ್ಯಾಪ್ತಿಯಿಂದ ಸೆಂಚುರಿ ಕ್ಲಬ್ ಅನ್ನು ಹೊರಗಿಡಬೇಕು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಕಟ್ಟಡವನ್ನು ತೆರವುಗೊಳಿಸಲಿ ಎಂದು ಕಬ್ಬನ್‍ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಒತ್ತಾಯಿಸಿದ್ದಾರೆ.
ಹೆಚ್ಚಿನ ಮಂದಿ ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳೇ ಸೆಂಚುರಿ ಕ್ಲಬ್‍ನ ಸದಸ್ಯರಾಗಿದ್ದಾರೆ. ಹೀಗಾಗಿ ಕ್ಲಬ್ ಅನ್ನು ಉದ್ಯಾನದ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಹಾಗೊಂದು ವೇಳೆ ಮಾಡಿದರೆ ಕಬ್ಬನ್ ಉದ್ಯಾನದ ಹಿತಕ್ಕೆ ಧಕ್ಕೆ ತಂದಂತಾಗುತ್ತದೆ.
ಇದನ್ನೂ ಓದಿ: Shakti Scheme: ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಬ್ಬನ್ ಉದ್ಯಾನದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು ಎಂಬುದನ್ನು ತಿರಸ್ಕರಿಸಿ, ಉದ್ಯಾನವನ್ನು ಉಳಿಸಿದವರು. ಈಗಲೂ ಕಬ್ಬನ್ ಉದ್ಯಾನದ ಉಳಿವು, ರಕ್ಷಣೆಗೆ ನೀವೇ ಮುಂದಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಎಸ್. ಉಮೇಶ್ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.