CCCC: ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್​ನ್ನು ಸದಾಶಿವನಗರದಲ್ಲಿ ಇಂದು (ಮಾ. 11) ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

CCCC: ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್​ ಸೆಂಟರ್ (ಸಂಗ್ರಹ ಚಿತ್ರ)
Image Credit source: thehindu.com

Updated on: Mar 11, 2023 | 5:07 PM

ಬೆಂಗಳೂರು: ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್​ನ್ನು (Central Clinical Command Centre) ಸದಾಶಿವನಗರದಲ್ಲಿ ಇಂದು (ಮಾ. 11) ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ಈ ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್​ನ್ನು ನಿರ್ಮಿಸಲಾಗಿದೆ. ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್ ಉದ್ಘಾಟಿಸಿ​ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರತಿಯೊಬ್ಬ ರೋಗಿಗೂ ಸಮಯಕ್ಕೆ‌ ಸರಿಯಾಗಿ ಚಿಕಿತ್ಸೆ ಸಿಗಬೇಕು. ಗೋಲ್ಡನ್ ಟೈಮ್​​ನಲ್ಲಿ ಚಿಕಿತ್ಸೆ ಸಿಕ್ಕರೆ ರೋಗಿ ಬೇಗನೇ ಗುಣಮುಖರಾಗುತ್ತಾರೆ. ಈ‌ ನಿಟ್ಟಿನಲ್ಲಿ ಈ ರೀತಿಯ ಸ್ಮಾರ್ಟ್ ಕ್ಲಿನಿಕ್​ಗಳನ್ನ ಓಪನ್ ಮಾಡಲಾಗಿದೆ. ಒಬ್ಬ ಮಂತ್ರಿ‌ ವೈದ್ಯಾಧಿಕಾರಿಯಾಗಿದ್ದರೆ ಜನರಿಗೆ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ. ಜೊತೆಗೆ ಅಶ್ವಥ್ ನಾರಾಯಣ ಅವರು ಲೇಟೆಸ್ಟ್ ಟೆಕ್ನಾಲಜಿ ಅಳವಡಿಸಿರುವುದು ಅವರ ಮತ್ತೊಂದು ವಿಶೇಷ ಎಂದರು.

ಔಷಧಿ‌ ಫ್ರೀ,‌ ಲ್ಯಾಬ್ ಫ್ರೀ ಇರಲಿದೆ. ಎಲ್ಲವೂ ಒಂದೇ ಕಡೆ ಸಿಗುವಂತೆ ಮಾಡಲಾಗಿದೆ. ಇದೆಲ್ಲದಕ್ಕೂ ಟೆಕ್ನಾಲಜಿ ಬಹಳ ಸಹಾಯಕವಾಗಿದೆ. ಇನ್ನು ಹೆಚ್ಚಿನ ಪಿಹೆಚ್​ಸಿ ಸೆಂಟರ್​ಗಳನ್ನ ಬೆಂಗಳೂರಿನಲ್ಲಿ ತೆರೆಯುತ್ತೇವೆ. ಈ ವಿನೂತನ ಕಾರ್ಯಕ್ರಮ ಖಂಡಿತ ಯಶಸ್ವಿಯಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನ ಕೆರೆಗಳ ಕಲ್ಮಶ ಸಂಖ್ಯೆ ಏರಿಕೆ: BWSSB ನಿರ್ಲಕ್ಷ್ಯವೇ ಕಾರಣ?

ಹಾಗಾದರೆ ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್​ ಎಂದರೆ ಏನು? 

ಬೆಂಗಳೂರಿನಲ್ಲಿ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವ ಉದ್ದೇಶದಿಂದ 243 ವಾರ್ಡ್​ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್​ಗಳನ್ನ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಅನುಮೋದಿಸಲಾಗಿತ್ತು. ಈ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಸ್ಮಾರ್ಟ್​ ಸಿಟಿ ಯೋಜನೆಯಡಿ ಡಿಜಿಟಲ್​​ ರೂಪದಲ್ಲಿ ವೈದ್ಯರ ಜೊತೆ ಸಂಪರ್ಕ ಸಾಧಿಸುವ ವ್ಯವಸ್ಥೆಯೇ ಈ ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳೊಂದಿಗೆ ಕಮ್ಯಾಂಡ್ ಸೆಂಟರ್​​ನಿಂದ ತಜ್ಞ ವೈದ್ಯರು ವರ್ಚುವಲ್ ಸಮಾಲೋಚನೆ‌ ನಡೆಸುತ್ತಾರೆ.

ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಸದೃಢಗೊಳಿಸಿ, ಸಮಾಜದ ಪ್ರತಿ ಸಮುದಾಯಕ್ಕೂ ಒದಗಿಸಬೇಕು ಎಂಬ ಉದ್ದೇಶವನ್ನು ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್​ ಹೊಂದಿದೆ. ಸಣ್ಣಪುಟ್ಟ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕಾದ ಅಗತ್ಯ ಇರುವುದಿಲ್ಲ. ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್​ಗೆ ಬರುವ ರೋಗಿಯ ಎಲ್ಲ ವಿವರಗಳನ್ನು ಮೊಬೈಲ್​ ಆ್ಯಪ್​ ಮೂಲಕ ದಾಖಲಿಸಲಾಗುತ್ತದೆ. ಇಲ್ಲಿರುವ ವೈದ್ಯ ಸಿಬ್ಬಂದಿ ಒಟ್ಟು 16 ಬಗೆಯ ತಪಾಸಣೆ ಮಾಡುವ ವ್ಯವಸ್ಥೆ ಹೊಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಅಭಿವೃದ್ಧಿಯ ಪಥಕ್ಕೆ ಕೊಡುಗೆ: ಪ್ರಧಾನಿ ಮೋದಿ

ಸ್ಮಾರ್ಟ್​ ವರ್ಚುವಲ್ ಕ್ಲಿನಿಕ್​ನಿಂದಲೇ ವಿಡಿಯೋ ಕಾನ್ಫರೆನ್ಸ್​​​ ಮೂಲಕ ಸೆಂಟ್ರಲ್ ಕ್ಲಿನಿಕಲ್ ಕಮ್ಯಾಂಡ್ ಸೆಂಟರ್​ಗೆ​ ಸಂಪರ್ಕಿಸಲಾಗುತ್ತದೆ. ಇಲ್ಲಿ 20 ತಜ್ಞ ವೈದ್ಯರಿರುತ್ತಾರೆ. ರೋಗಿಯ ಅಗತ್ಯಕ್ಕಸುಸಾರವಾಗಿ ತಪಾಸಣೆ ನಡೆಸಲು ವೈದ್ಯರು ಸಿಬ್ಬಂದಿಗೆ ಸೂಚಿಸುತ್ತಾರೆ. ಸಲಹೆ ಹಾಗೂ ಚಿಕಿತ್ಸೆಯನ್ನು ಸಹ ನೀಡಲಾಗುತ್ತದೆ. ಬಳಿಕ ರೋಗಿಯ ವಿವರಗಳನ್ನು ಸಿಬ್ಬಂದಿ ಡಿಜಟಲೀಕರಣವನ್ನು ಮಾಡುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:50 pm, Sat, 11 March 23