Basavaraj Bommai: ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಉದ್ಘಾಟಿಸಿದ ಮುಖ್ಯಮಂತ್ರಿ ಬೊಮ್ಮಾಯಿ
Puneeth Satellite Workstation: ಮಕ್ಕಳಿಗೆ ಪ್ರಶ್ನೆ ಮಾಡಲು ಅವಕಾಶ ಕೊಡಬೇಕು. ಮಕ್ಕಳ ಉತ್ಸಾಹ ಹೆಚ್ಚಿಸಬೇಕು. ಟೀಚರ್ಸ್ಗೆ ಎಲ್ಲವೂ ಗೊತ್ತಿದೆ ಎಂದು ಹೇಳಲು ಆಗಲ್ಲ. ಅದರಲ್ಲಿ ತಪ್ಪೇನು ಇಲ್ಲ, ಆದರೆ ಮಕ್ಕಳಿಗೆ ಪ್ರಶ್ನೆ ಕೇಳಲು ಬಿಡಿ ಎನ್ನುತ್ಥಾ ಸಿಎಂ ಬೊಮ್ಮಾಯಿ ಮಕ್ಕಳಿಗೆ ಪಾಠ ಮಾಡಿದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (CM Basavaraj Bommai) ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ವತಿಯಿಂದ ಸ್ಥಾಪಿಸಿರುವ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಅನ್ನು (Puneeth Satellite Workstation in Malleshwaram) ಉದ್ಘಾಟಿಸಿ ಮಾತನಾಡಿದರು. ಉದ್ಘಾಟನೆ ಬಳಿಕ ಅಪ್ಪು ಭಾವಚಿತ್ರಕ್ಕೆ ಸಚಿವ ಅಶ್ವಥ್ ನಾರಾಯಣ ಜೊತೆಗೂಡಿ ಪುಷ್ಪಾರ್ಪಣೆ ಮಾಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ‘ನಮ್ಮ ಮಲ್ಲೇಶ್ವರ’ ಎಂಬ ವೆಬ್ ಸೈಟ್ ಉದ್ಘಾಟಿಸಿದರು. ಮಲ್ಲೇಶ್ವರ ಸ್ಕೂಲ್ ಮಾಡೆಲ್ ಲೋಗೋ ಸಹ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಶಾಸಕ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಕೆಲಸ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದೆ. ಮಕ್ಕಳಿಗೆ ಲ್ಯಾಪ್ ಟ್ಯಾಪ್ ಕೊಡಲಾಗುತ್ತಿದೆ. ಮಕ್ಕಳ ಕಲಿಕೆಗೆ ಸ್ಮಾರ್ಟ್ ಕ್ಲಾಸ್ ಆಯೋಜನೆ ಮಾಡಲಾಗಿದೆ.
ಕಲಿಕೆಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಇಂದು ಮಾಡಿದ್ದೇವೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಈ ಶಿಕ್ಷಣ ಸಂಸ್ಥೆ ರೂಪಿಸುತ್ತದೆ. ಕೆವೈಸಿ ಕಾನ್ಸೆಪ್ಟ್ ಜಾರಿಗೆ ಮಾಡುತ್ತಿದ್ದೇವೆ. ಮಕ್ಕಳ ಶಿಕ್ಷಣದ ಬಗ್ಗೆ ಮಕ್ಕಳ ಪೋಷಕರಿಗೆ ತಿಳಿದುಕೊಳ್ಳುವ ಒಂದು ಅವಕಾಶ ಇದಾಗಿದೆ. ನಮ್ಮ ಸರ್ಕಾರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆ ಜಾರಿ ಮಾಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನು, ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಅಶ್ವಥ್ ನಾರಾಯಣ ಅವರನ್ನು ಮಂತ್ರಿ ಎಂದು ಕರೆಯಲ್ಲ. ಅವನು ಮಲ್ಲೇಶ್ವರಂ ಕುಟುಂಬದ ಯಜಮಾನ. ಯಾಕೆಂದರೆ ಯಜಮಾನ ಮಾತ್ರ ಮಕ್ಕಳ ಓದು, ಆರೋಗ್ಯದ ಬಗ್ಗೆ ಯೋಜನೆ/ಯೋಚನೆ ಮಾಡ್ತಾರೆ. ಆದ್ದರಿಂದ ಮಲ್ಲೇಶ್ವರಂ ಕುಟುಂಬದ ಮುಖ್ಯಸ್ಥ ಅಶ್ವಥ್ ನಾರಾಯಣ.
ಕೇವಲ ನಮಗೆ ಹುಟ್ಟಿದ ಮಕ್ಕಳ ಮಾತ್ರ ನಮ್ಮವರು ಎನ್ನುವುದು ಸಂಕುಚಿತ ಭಾವ. ಅಂತಃಕರಣ ಇರಬೇಕು. ಮಕ್ಕಳಲ್ಲಿ ಕಲಿಕೆಯಲಿ ಆಸಕ್ತಿ ಹುಟ್ಟಿಸಬೇಕು, ಕಲಿಕೆಯಲ್ಲಿ ಡಿಜಿಟಲ್ ಬಳಕೆ ಮಾಡಿಸಿ, ಅವರಲ್ಲಿರುವ ಪ್ರತಿಭೆಯನ್ನು ಹುಡುಕಿ, ಅದನ್ನು ಹೆಚ್ಚಿಸುವ ಕೆಲಸ ಆಗುತ್ತಿದೆ. ಮಲ್ಲೇಶ್ವರ ಮಾಡೆಲ್ ಸ್ಕೂಲ್ ಆ ಕೆಲಸವನ್ನು ಮಾಡ್ತಾ ಇದೆ. ಇದನ್ನು ರಾಜ್ಯವ್ಯಾಪಿ ಮಾಡ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದೇ ವೇಳೆ ಪುನೀತ್ ರಾಜಕುಮಾರ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಯೋಗ್ಯವಾದ ವ್ಯಕ್ತಿ ಪುನೀತ್. ಇವತ್ತು ಅವರ ಪುಣ್ಯ ಸ್ಮರಣೆಯ ದಿನ. ಪುನೀತ್ ಸದಾ ಪ್ರಯೋಗಾತ್ಮಕವಾಗಿದ್ದರು. ಸೃಜನಶೀಲವಾಗಿ ಹೊಸದನ್ನು ಹುಡುಕುತ್ತಿದ್ದರು. ಅವರ ಹೆಸರಿನಲ್ಲಿ ಸ್ಯಾಟಲೈಟ್ ಉದ್ಘಾಟನೆ ಮಾಡುವ ಮೂಲಕ ಅವರ ಕೀರ್ತಿಯನ್ನು ಆಕಾಶದ ಎತ್ತರಕೆ ತೆಗೆದುಕೊಂಡು ಹೋಗುವ ಕೆಲಸ ಮಲ್ಲೇಶ್ವರಂ ಸ್ಕೂಲ್ ಮಾಡ್ತಾ ಇದೆ ಎಂದರು.
ಮಕ್ಕಳಿಗೆ ಪ್ರಶ್ನೆ ಮಾಡಲು ಅವಕಾಶ ಕೊಡಬೇಕು. ಮಕ್ಕಳ ಉತ್ಸಾಹ ಹೆಚ್ಚಿಸಬೇಕು. ಟೀಚರ್ಸ್ಗೆ ಎಲ್ಲವೂ ಗೊತ್ತಿದೆ ಎಂದು ಹೇಳಲು ಆಗಲ್ಲ. ಅದರಲ್ಲಿ ತಪ್ಪೇನು ಇಲ್ಲ, ಆದರೆ ಮಕ್ಕಳಿಗೆ ಪ್ರಶ್ನೆ ಕೇಳಲು ಬಿಡಿ ಎನ್ನುತ್ಥಾ ಸಿಎಂ ಬೊಮ್ಮಾಯಿ ಮಕ್ಕಳಿಗೆ ಪಾಠ ಮಾಡಿದರು. ಮಕ್ಕಳು ತಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೆ ಹೇಳಬೇಕು. ಹಾಗೆ ಹೇಳಿದ್ರೆ ಮೆಮೊರಿಯಲ್ಲಿ ಉಳಿಯುತ್ತದೆ. ಇಲ್ಲ ಅಂದ್ರೆ ಮರೆತು ಹೋಗುತ್ತದೆ. ಹೇಳುವುದು ಬಹಳಷ್ಟು ಇದೆ. ಇನ್ನೂಂದು ಟೈಮ್ ಬರುತ್ತೇನೆ. ಬಂದು ಒನ್ ಅವರ್ ಪಾಠ ಮಾಡ್ತೇನೆ ಎಂದು ಸಿಎಂ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ತಿಳಿಸಿದರು.