ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ (Hijab), ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದೆ. ಸದ್ಯ ಇಡೀ ರಾಜ್ಯ ಕೋರ್ಟ್ ತೀರ್ಮಾನಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹೊರಗಡೆಯವರು ಪ್ರಚೋದನೆ ನೀಡುತ್ತಿದ್ದಾರೆ. ಯಾರೂ ಪ್ರಚೋದನೆ ನೀಡದೆ ಶಾಂತಿಯಿಂದ ವರ್ತಿಸೋಣ. ಪ್ರಕರಣ ಕೋರ್ಟ್ನಲ್ಲಿರುವುದರಿಂದ ಎಲ್ಲರೂ ಕಾಯೋಣ. ಈ ವಿಷಯದಲ್ಲಿ ಈಗಾಗಲೇ ಹಲವರು ಹೇಳಿಕೆ ಕೊಟ್ಟಿದ್ದಾರೆ. ಇನ್ಮುಂದೆ ಯಾರೂ ಹೇಳಿಕೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಹಿಜಾಬ್ ಬಗ್ಗೆ ಇಂದು ಸಂಜೆ ಶಿಕ್ಷಣ ಸಚಿವರು, ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಈ ಬೆಳವಣಿಗೆಗಳ ಬಗ್ಗೆ ಗೃಹ ಸಚಿವರ ಜತೆಯೂ ಮಾತುಕತೆ ನಡೆಸುತ್ತೇನೆ. ಮೊದಲಿನಂತೆ ಸೌಹಾರ್ದತೆ, ಶಿಸ್ತು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಿಎಂ ಬೊಮ್ಮಾಯಿ, ರಜೆ ಮುಂದುವರಿಕೆ ಬಗ್ಗೆ ಸಂಜೆ ನಿರ್ಧಾರ ಮಾಡುತ್ತೇವೆ. ಮಕ್ಕಳ ವಿಚಾರದಲ್ಲಿ ನಾವು ಸಂವೇದನಾಶೀಲರಾಗಿರಬೇಕು ಅಂತ ಅಭಿಪ್ರಾಯಪಟ್ಟರು.
ಇಂಥ ಘಟನೆ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಬಳಿಕ ಲೋಕಲ್ಗೆ ಬರುತ್ತೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯ ಆಗಿದೆ. ಹೊರಗಿನಿಂದ ಕೆಲವರು ಪ್ರಚೋದಿಸುವ ಕೆಲಸ ಆಗಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಲು ಸ್ವಯಂ ನಿಯಂತ್ರಣ ಅಗತ್ಯ. ಕಾನೂನು ಸುವ್ಯವಸ್ಥೆಯನ್ನ ಎಲ್ಲರೂ ಪಾಲನೆ ಮಾಡಬೇಕು ಅಂತ ಸಿಎಂ ಹೇಳಿದರು.
ಕೆಂಪೇಗೌಡರ ಪ್ರತಿಮೆ ಕಾಮಗಾರಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗುತ್ತಿದೆ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ. ಅದಕ್ಕೆ ಯಾವುದೇ ಅನುದಾನದ ಕೊರತೆಯಾಗಲ್ಲ. ಯಡಿಯೂರಪ್ಪನವರು ಘೋಷಿಸಿದ ಕಾಲದ ಮಿತಿಯಲ್ಲೇ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
Teddy Day 2022: ಪ್ರೀತಿಯ ಸಂಕೇತವಾಗಿ ನೀವು ನೀಡುವ ಟೆಡ್ಡಿ ಬೇರ್ ಬಣ್ಣ ಯಾವ ಸಂದೇಶ ರವಾನಿಸುತ್ತದೆ ಗೊತ್ತಾ?
Published On - 11:32 am, Thu, 10 February 22