- Kannada News Lifestyle Valentines Week 2022 Teddy know teddy bear colour significance before gifting your loved ones
Teddy Day 2022: ಪ್ರೀತಿಯ ಸಂಕೇತವಾಗಿ ನೀವು ನೀಡುವ ಟೆಡ್ಡಿ ಬೇರ್ ಬಣ್ಣ ಯಾವ ಸಂದೇಶ ರವಾನಿಸುತ್ತದೆ ಗೊತ್ತಾ?
Valentine’s Week 2022: ಟೆಡ್ಡಿ ಡೇ ಅನ್ನು ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೊದಲು, ನಿಮ್ಮ ಸಂಗಾತಿಗೆ ನೀವು ಯಾವ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಬೇಕು ಎಂದು ತಿಳಿದುಕೊಳ್ಳಿ.
Updated on: Feb 10, 2022 | 9:55 AM

ನೀಲಿ ಟೆಡ್ಡಿ ಬೇರ್: ನೀಲಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ನಿಮ್ಮ ಸಂಗಾತಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ ಎಂದರ್ಥ. ನಿಮ್ಮ ಸಂಗಾತಿಯ ಮೇಲಿನ ನಿಮ್ಮ ಪ್ರೀತಿ ತುಂಬಾ ಆಳವಾಗಿದೆ ಎಂದರೆ ನೀಲಿ ಬಣ್ಣದ ಟೆಡ್ಡಿ ಬೇರ್ ನೀಡಿ.

ಹಸಿರು ಟೆಡ್ಡಿ ಬೇರ್: ಹಸಿರು ಬಣ್ಣವನ್ನು ಉಡುಗೊರೆಯಾಗಿ ನೀಡುವುದು ಎಂದರೆ ನಿಮ್ಮ ಜೀವನದಲ್ಲಿ ಯಾರಾದರೂ ಬರುತ್ತಾರೆ ಎಂದು ನೀವು ಕಾಯುತ್ತಿದ್ದೀರಿ ಎಂದರ್ಥ. ಆದ್ದರಿಂದ ನಿಮ್ಮ ಜೀವನದಲ್ಲಿ ಯಾರ ಬರುವಿಕಾಗಿ ಕಾಯುತ್ತಿದ್ದೀರಿ ಅಂತವರಿಗೆ ಈ ಬಣ್ಣದ ಟೆಡ್ಡಿ ಉಡುಗೋರೆಯಾಗಿ ನೀಡಿ.

ಕೆಂಪು ಟೆಡ್ಡಿ ಬೇರ್: ಕೆಂಪು ಬಣ್ಣವು ಪ್ರೀತಿಗಾಗಿ ಮಾತ್ರ. ಆದ್ದರಿಂದ ನೀವು ನಿಮ್ಮ ಪ್ರೀತಿ ನಿವೇದನೆಗಾಗಿ ಕೆಂಪು ಟೆಡ್ಡಿ ಬೇರ್ ಉಡುಗೋರೆಯಾಗಿ ನೀಡಬಹುದು.

ಪಿಂಕ್ ಟೆಡ್ಡಿ ಬೇರ್: ಗುಲಾಬಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ನೀವು ಇಷ್ಟಪಡುವವರೊಂದಿಗೆ ನೀವು ಡೇಟ್ ಮಾಡಲು ಬಯಸುತ್ತೀರಿ ಎಂದರ್ಥ. ನೀವು ಯಾರನ್ನಾದರೂ ಪ್ರೀತಿಸಿದ್ದರೆ, ಅವರು ನಿಮಗಾಗಿ ಸ್ವಲ್ಪ ಸಮಯ ನೀಡಿ ಎಂದು ಕೇಳುವ ಸಂಕೇತವಾಗಿ ಗುಲಾಬಿ ಬಣ್ಣದ ಟೆಡ್ಡಿ ನೀಡಬಹುದು.

ಕಪ್ಪು ಟೆಡ್ಡಿ ಬೇರ್: ನಿಮ್ಮ ಸಂಗಾತಿಯಿಂದ ಕಪ್ಪು ಬಣ್ಣದ ಟೆಡ್ಡಿ ಬೇರ್ ಪಡೆದರೆ ಅವರು ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥ.

ಬಿಳಿ ಟೆಡ್ಡಿ ಬೇರ್: ಬಿಳಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ನೀವು ಈಗಾಗಲೇ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದೀರಿ ಎಂದರ್ಥವಾಗಿದ್ದು, ಸ್ನೇಹದ ಸಂಕೇತವಾಗಿ ಮಾತ್ರ ನಿಮಗೆ ಟೆಡ್ಡಿ ಉಡುಗೋರೆಯಾಗಿ ನೀಡಲಾಗುತ್ತಿದೆ ಎಂದು ಅರ್ಥ.




