ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ, ಮುಷ್ಕರದಲ್ಲಿ ಭಾಗಿಯಾಗಿ ವಜಾ ಗೊಂಡಿದ್ದವರನ್ನು ಮರುನೇಮಕ ಮಾಡಿಕೊಳ್ಳುತ್ತಿದ್ದೇವೆ – ಸಚಿವ ಬಿ.ಶ್ರೀರಾಮುಲು

ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರ ವಜಾಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ, ಮುಷ್ಕರದಲ್ಲಿ ಭಾಗಿಯಾಗಿ ವಜಾ ಗೊಂಡಿದ್ದವರನ್ನು ಮರುನೇಮಕ ಮಾಡಿಕೊಳ್ಳುತ್ತಿದ್ದೇವೆ - ಸಚಿವ ಬಿ.ಶ್ರೀರಾಮುಲು
ಬಿ. ಶ್ರೀರಾಮುಲು
Follow us
TV9 Web
| Updated By: ಆಯೇಷಾ ಬಾನು

Updated on: Feb 10, 2022 | 12:20 PM

ಬೆಂಗಳೂರು: ಸಾರಿಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್. ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ ಎಂದು ಬೆಂಗಳೂರಿನಲ್ಲಿ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು(B Sriramulu) ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವೋಲ್ವೋ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗಿದೆ ಎಂದಿದ್ದಾರೆ. ಹಾಗೂ ನಗರದಲ್ಲಿ 2 ಬಸ್ ಬೆಂಕಿಗೆ ಆಹುತಿಯಾದ ಪ್ರಕರಣ ಬಗ್ಗೆ ಅಧಿಕಾರಿಗಳು ವರದಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ, ಸಾರಿಗೆ ನೌಕರರ ಮುಷ್ಕರ, ಡೀಸೆಲ್ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ನೀಡಲೂ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಹೀಗಾಗಿ ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆಗಳು ಹೆಚ್ಚಿದ್ದವು. ಸದ್ಯ ಟಿಕೆಟ್ ದರ ಏರಿಕೆಗೆ ಸರ್ಕಾರ ಬ್ರೇಕ್ ಹಾಕಿದೆ. ಈ ಸಂಬಂಧ ಮಾತನಾಡಿದ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು, ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ. ವೋಲ್ವೋ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಜಾ ಮಾಡಿದ್ದವರ ಮರುನೇಮಕ ಇನ್ನು ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರ ವಜಾಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ನೌಕರರು, ನಾಳೆ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮುಷ್ಕರದಲ್ಲಿ 1,610 ಜನ ಭಾಗಿಯಾಗಿ ತೊಂದರೆಗೀಡಾಗಿದ್ದರು. ಮರು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಮ್ಮ ಕುಟುಂಬವನ್ನು ನೋಡಿ ಮರು ನೇಮಕ ಮಾಡುತ್ತಿದ್ದೇವೆ. ನಿಮ್ಮ ಜೊತೆ ಮುಷ್ಕರ ಮಾಡಿದವರು ಈಗ ಓಡಿ ಹೋದರು. ಆದರೆ, ಇಂದು‌ ನಿಮ್ಮ ಜೊತೆಗೆ ನಿಂತಿದ್ದು ನಮ್ಮ ಸರ್ಕಾರ. ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಬುದ್ದಿವಾದ ಹೇಳಿದ್ದಾರೆ.

ಸಿಎಂ ಅಣತಿಯಂತೆ ನೌಕರರ ಮರುನೇಮಕ ಮಾಡಿಕೊಳ್ತಿದ್ದೇವೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಅವಕಾಶ ಕೊಡಲಾಗಿದೆ. ಮತ್ತೆ ಆ ರೀತಿಯ ತಪ್ಪು ಮಾಡಲು ಹೋಗಬೇಡಿ. ಮತ್ತೆ ಮುಷ್ಕರ ಅಂದ್ರೆ ನಾವ್ಯಾರೂ ಜೊತೆಯಲ್ಲಿ ಇರೋದಿಲ್ಲ. ಮುಂದಿನ ತಿಂಗಳಿಂದ ಸರಿಯಾಗಿ ಸಂಬಳ ನೀಡುತ್ತೇವೆ. ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಸಾಕಷ್ಟು ಬಾರಿ ಈ ಬಗ್ಗೆ ನಾನು ಎಂಡಿಗಳನ್ನು ಕರೆದು ಮಾತಾಡಿದ್ದೆ. ಮುಷ್ಕರ ಪ್ರಾರಂಭ ಆಗೋದು ಸುಲಭ, ಆದರೆ ಪ್ರಾರಂಭದ ನಂತರ ಅದನ್ನು ನಿಲ್ಲಿಸಲು ಆಗಲ್ಲ ಎಂದರು.

ಇದನ್ನೂ ಓದಿ: ರಶ್ಮಿಕಾ ಹೊಸ ಚಿತ್ರದ ಒಟಿಟಿ ಹಾಗೂ ಸ್ಯಾಟಲೈಟ್​​ ಹಕ್ಕುಗಳಿಗೆ ಭರ್ಜರಿ ಆಫರ್; ಮೊತ್ತ ಕೇಳಿ ಹುಬ್ಬೇರಿಸಿದ ಫ್ಯಾನ್ಸ್