ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಭ್ರಮ: ಸ್ವಾರ್ಥವಿಲ್ಲದೆ ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ನಾಯಕ ಎಂದು ಶುಭಕೋರಿದ ಸಿಎಂ ಬೊಮ್ಮಾಯಿ

| Updated By: ಆಯೇಷಾ ಬಾನು

Updated on: Sep 17, 2022 | 8:27 AM

ಪ್ರಧಾನಿ ಮೋದಿ 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಶುಭಕೋರಿದ್ದಾರೆ.

ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಭ್ರಮ: ಸ್ವಾರ್ಥವಿಲ್ಲದೆ ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ನಾಯಕ ಎಂದು ಶುಭಕೋರಿದ ಸಿಎಂ ಬೊಮ್ಮಾಯಿ
ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಸಿಎಂ ಬೊಮ್ಮಾಯಿ
Follow us on

ಬೆಂಗಳೂರು: ಭಾರತ ದೇಶ ಕಂಡ ಅಪ್ರತಿಮ ನಾಯಕ, ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿ ಇಡೀ ಜಗತ್ತಿನಲ್ಲೆ ಭಾರತದ ಹೆಸರಿನ ಕೀತಿ ಹೆಚ್ಚಿಸಿದ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಅವರಿಗೆ ಇಂದು (ಸೆ.17) ಹುಟ್ಟುಹಬ್ಬದ ಸಂಭ್ರಮ(Narendra Modi). ಪ್ರಧಾನಿ ಮೋದಿ 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಶುಭಕೋರಿದ್ದಾರೆ.

ಸಮಸ್ತ ಕನ್ನಡಿಗರ ಪರವಾಗಿ ಸಿಎಂ ಬೊಮ್ಮಾಯಿ ಶುಭಾಶಯ ಕೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬಹಳ ವಿಶಿಷ್ಟ ವ್ಯಕ್ತಿ. ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ. ಸ್ವಾರ್ಥವಿಲ್ಲದೆ ದೇಶದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇಂದು ಬಹಳ ಸಂತೋಷವಾದ ದಿನವಾಗಿದೆ. ಮೋದಿ ಪಿಎಂ, ಸಿಎಂ ಆಗಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾರೆ. 4 ಬಾರಿ ಮುಖ್ಯಮಂತ್ರಿಗಳಾಗಿದ್ದೆ ಅವರ ಜನಪ್ರಿಯತೆಗೆ ಸಾಕ್ಷಿ. ಪ್ರಧಾನಿಯಾಗಿ ಭಾರತವನ್ನ ಅಭಿವೃದ್ಧಿ ಪಥದಲ್ಲಿ ನಡೆಸಿದ್ದಾರೆ. ಎಲ್ಲಾ ವರ್ಗದ ಜನರಿಗೆ ಪ್ರಧಾನಿ ಮೋದಿ ನ್ಯಾಯ ಒದಗಿಸಿದ್ದಾರೆ. ದೇಶದ ಸುರಕ್ಷತೆ, ದೇಶದ ಅಖಂಡತೆ ಕಾಪಾಡಲು ದಿಟ್ಟ ಅವಶ್ಯಕತೆ ಇತ್ತು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ತುಂಬಿದ್ದಾರೆ. ಭಾರತದಲ್ಲಿ ಎಲ್ಲ ಜನಾಂಗಕ್ಕೆ ಹೊಸ ವಿಶ್ವಾಸ ಮೂಡಿಸಿದ್ದಾರೆ. ಹಲವು ಯೋಜನೆಗಳ ಮೂಲಕ ಮನೆ ಮತ್ತು ಮನ ಮುಟ್ಟಿದ್ದಾರೆ. ಪ್ರಧಾನಿ ಮೋದಿ ಕೈಯಲ್ಲಿ ಭಾರತ ಸುರಕ್ಷಿತವಾಗಿದೆ. ಭಾರತವನ್ನು ವಿಶ್ವದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೊವಿಡ್​ ನಿರ್ವಹಣೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ. ಸೇವಾ ಸಪ್ತಾಹ ಕಾರ್ಯಕ್ರಮದ ಮೂಲಕ ಮುಂದಿನ ತಿಂಗಳು ಸಾರ್ವಜನಿಕ ಸೇವೆ ಕಾರ್ಯಕ್ರಮ ಮಾಡ್ತೇವೆ. ಪ್ರಧಾನಿ ಮೋದಿಯವರಿಗೆ ಬಲ ತುಂಬುವ ಕೆಲಸ ಮಾಡ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ಇದನ್ನೂ ಓದಿ: 8 Years of Modi Government: ನರೇಂದ್ರ ಮೋದಿ ಹುಟ್ಟಿನಿಂದ ಪ್ರಧಾನಿವರೆಗಿನ ಒಂದು ಸುಂದರ ಜರ್ನಿ ಇಲ್ಲಿದೆ..!

ಟಿಬಿ ಮುಕ್ತಭಾರತಕ್ಕೆ ಚಾಲನೆ ನೀಡುವ ಸಿಎಂ ಬೊಮ್ಮಾಯಿ

ಮೋದಿ ಹುಟ್ಟುಹಬ್ಬ ಹಿನ್ನೆಲೆ ಟಿಬಿ ಮುಕ್ತಭಾರತಕ್ಕೆ ಚಾಲನೆ ನೀಡಲು ಸಿದ್ದತೆ ನಡೆದಿದೆ. ಹಾಗೂ ಇದೇ ವೇಳೆ ರಕ್ತದಾನ ಅಮೃತ ಮಹೋತ್ಸವಕ್ಕೂ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ.ಕೆ.ಸುಧಾಕರ್ ವೈದ್ಯಕೀಯ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: Ram Dhun: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಗುಜರಾತ್​ನಲ್ಲಿ ವಿಶೇಷ ಕಾರ್ಯಕ್ರಮ; 7100 ಹಳ್ಳಿಗಳಲ್ಲಿ ನಡೆಯಲಿದೆ ರಾಮ್​ ಧುನ್​

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:17 am, Sat, 17 September 22