ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿಸಿಎಸ್ (TCS) ವಿಶ್ವ 10ಕೆ ಓಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕೊವಿಡ್ನಿಂದ ಕಳೆದ 2 ವರ್ಷಗಳಿಂದ ಸ್ಪರ್ಧೆ ನಡೆದಿರಲಿಲ್ಲ. ಮಾರ್ಚ್ 25ರಿಂದ 19 ಸಾವಿರಕ್ಕಿಂತ ಹೆಚ್ಚು ಅಥ್ಲೀಟ್ಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಯುವ ಸಬಲೀಕರಣ & ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಉಪಸ್ಥಿತರಿದ್ದರು. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಪ್ರಯೋಜಕತ್ವದಲ್ಲಿ ವಿಶ್ವ 10ಕೆ ಓಟ ನಡೆಯುತ್ತಿದ್ದು, ದೇಶದ ಪ್ರಮುಖ ಅಥ್ಲೆಟಿಕ್ಸ್ಗಳು ಭಾಗವಹಿಸಲಿದ್ದಾರೆ. ವಿಶ್ವ 10ಕೆ ಓಟ ಸ್ಪರ್ಧೆಯು ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.
2019ರಲ್ಲಿ ಕೊನೆಯ ಸ್ಪರ್ಧೆ ನಡೆದಿದ್ದು, ಕೋವಿಡ್ನಿಂದಾಗಿ ಎರಡು ವರ್ಷ ಸ್ಪರ್ಧೆ ನಡೆದಿರಲಿಲ್ಲ. ಈ ಭಾರಿಯ ಆವೃತ್ತಿಯಲ್ಲಿ ಓಟದ ಸ್ಪರ್ಧೆಯು ಎರಡು ವಿಧದಲ್ಲಿ ನಡೆಯಲಿದ್ದು, ಒಂದು ಮೈದಾನದಲ್ಲಿ ನಡೆದರೆ, ಮತ್ತೊಂದು ವರ್ಚುವಲ್ ಅಪ್ಲಿಕೇಷನ್ ಅಂದರೆ ಆನ್‌ಲೈನ್ ಮೂಲಕ ತಾವಿರುವ ಸ್ಥಳದಿಂದಲೇ ಭಾಗವಹಿಸಬಹುದಾಗಿದೆ ಎಂದು ಕ್ರೀಡಾಕೂಟದ ಆಯೋಜಕರುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. 10ಕೆ ಪುರುಷರ ವಿಭಾಗದಲ್ಲಿ ಇಥಿಯೋಪಿಯಾದ ಅಂಡಮಾಕ್ ಬೆಲಿಹು ಹಾಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಬಾರಿಯೂ ಕೂಡ ಅವರ ಮೇಲೆ ನಿರೀಕ್ಷೆಗಳಿವೆ. ಕೆನ್ಯಾದ ಹೆಲೆನ್ ಒಬಿರಿ ಮತ್ತು ಇರೇನ್ ಚೆಪ್ಪಾಯ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಶ್ರೀನು ಭುಗಾತಾ, ಕರ್ನಾಟಕದ ಎ.ಬಿ. ಬೆಳ್ಳಿಯಪ್ಪ ಮತ್ತು ಕಾರ್ತಿಕ್‌ಕುಮಾರ್ ಭಾರತದ ಎಲೀಟ್ ಪುರುಷರ ವಿಭಾಗದಲ್ಲಿ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್ ಸಂಜೀವನಿ ಜಾಧವ್, ಪಾರುಲ್ ಚೌಧರಿ ಮತ್ತು ಕವಿತಾ ಯಾದವ್ ಕೂಡ ಭಾಗವಹಿಸಲಿದ್ದು, ನಿರೀಕ್ಷೆಯ ಮಟ್ಟ ಹೆಚ್ಚಾಗಿ ಎಂದು ಹೇಳಬಹುದು.
ಸ್ಪರ್ಧೆಗಳ ವಿವರ ಮತ್ತು ಬಹುಮಾನ ಮೊತ್ತ:
ಆರಂಭ (ಬೆಳಿಗ್ಗೆ)
ಓಪನ್ 10ಕೆ: 5.30
ವಿಶ್ವ ಮಹಿಳಾ 10ಕೆ: 7.10
ವಿಶ್ವ ಪುರುಷರ 10ಕೆ: 8 ಗಂಟೆ
ಅಂಗವಿಕಲರು, ಹಿರಿಯ ನಾಗರಿಕರು (4.2 ಕಿ.ಮೀ): 8.05
ಮಜಾ ರನ್ (5 ಕೆ.ಮೀ.): 8.50
ಪುರುಷರ ಮತ್ತು ಮಹಿಳಾ ಚಾಂಪಿಯನ್, ತಲಾ 20 ಲಕ್ಷ
ಭಾರತೀಯ ಎಲೀಟ್ ವಿಜೇತರು: ತಲಾ 2.75 ಲಕ್ಷ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.