ಬೆಂಗಳೂರಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಆಸ್ಪತ್ರೆಯಲ್ಲಿ ಸಾವು; ಗದಗದಲ್ಲಿ ಚಾಕುವಿನಿಂದ ಇರಿದು ತಂದೆಯ ಬರ್ಬರ ಹತ್ಯೆ

ಬೆಂಗಳೂರಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಆಸ್ಪತ್ರೆಯಲ್ಲಿ ಸಾವು; ಗದಗದಲ್ಲಿ ಚಾಕುವಿನಿಂದ ಇರಿದು ತಂದೆಯ ಬರ್ಬರ ಹತ್ಯೆ
ಮೃತಪಟ್ಟಿರುವ ಸಂಜನಾ

ಕಾಟನ್​ಪೇಟೆಯ ಶಿವಾಸ್ ಲಾಡ್ಜ್​ನಲ್ಲಿ ಅರ್ಚನಾ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ನಡೆಸಿ ಐದಾರು ಕಡೆ ಚಾಕು ಇರಿಯಲಾಗಿತ್ತು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಮಂಗಳಮುಖಿ ಸಂಜನಾ(30)ಗೆ ಚಿಕಿತ್ಸೆ ಮುಂದುವರಿದಿದೆ.

TV9kannada Web Team

| Edited By: sandhya thejappa

May 15, 2022 | 8:54 AM

ಬೆಂಗಳೂರು: ನಗರದಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ (Transgender) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಫಲಿಸದೆ 25 ವರ್ಷದ ಅರ್ಚನಾ ಸಾವನ್ನಪ್ಪಿದ್ದಾರೆ. ಕಾಟನ್​ಪೇಟೆಯ ಶಿವಾಸ್ ಲಾಡ್ಜ್​ನಲ್ಲಿ ಅರ್ಚನಾ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ನಡೆಸಿ ಐದಾರು ಕಡೆ ಚಾಕು ಇರಿಯಲಾಗಿತ್ತು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಮಂಗಳಮುಖಿ ಸಂಜನಾ(30)ಗೆ ಚಿಕಿತ್ಸೆ ಮುಂದುವರಿದಿದೆ. ಕಾಟನ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಯ ಬರ್ಬರ ಹತ್ಯೆ: ಗದಗ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಹಾತಲಗೇರಿಯಲ್ಲಿ ನಡೆದಿದೆ. ಭರಮಪ್ಪ ದೊಡ್ಡಮನಿ ಹತ್ಯೆಯಾದ ವ್ಯಕ್ತಿ. ಪಾನಮತ್ತನಾಗಿ ಮಗ ತಂದೆಗೆ ಚಾಕು ಇರಿದಿದ್ದಾನೆ. ತಂದೆಯನ್ನು ಕೊಂದ ಮಗ ಸುರೇಶ್ ದೊಡ್ಡಮನಿ ಗ್ರಾಮದಿಂದ ಪರಾರಿಯಾಗಿದ್ದಾನೆ.

ಗಾಂಜಾ ಮತ್ತಿನಲ್ಲಿ ವ್ಯಕ್ತಿಯ ಪುಂಡಾಟಿಕೆ: ನೆಲಮಂಗಲ: ಹೆಸರಘಟ್ಟ ರಸ್ತೆ ಬಾಗಲಗುಂಟೆ ಬಳಿಯ ಸಿಲ್ವರ್ ಸ್ಪ್ರಿಂಗ್ ಅಪಾರ್ಟ್ಮೆಂಟ್ ಮುಂದೆ ವ್ಯಕ್ತಿಯೊಬ್ಬ ಗಾಂಜಾ ಮತ್ತಿನಲ್ಲಿ ಪುಂಡಾಟಿಕೆ ಮಾಡಿದ್ದಾನೆ. ಈ ಘಟನೆ ತಡರಾತ್ರಿ ನಡೆದಿದೆ. ಕೆಲಕಾಲ ನಿವಾಸಿಗಳಿಗೆ ಭಯದ ಅತಂಕ ಮೂಡಿಸಿದ್ದ. 35 ವರ್ಷದ ಅಪರಿಚಿತ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಮೀನಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ: ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಕೇಸಾಪುರ ಗ್ರಾಮದ ಬಳಿ ರಸ್ತೆ ಪಕ್ಕದ ಜಮೀನಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ಹೀಗಾಗಿ ಕೊಲೆಯಾ, ಸಹಜ ಸಾವಾ ಅನ್ನೋ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸದ್ಯ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆಮಾಡಲು ಮುಂದಾಗಿದ್ದಾರೆ. ಅಫಜಲಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಕತ್ತು ಹಿಸುಕಿ ಪತಿಯಿಂದ ಪತ್ನಿ ಹತ್ಯೆ: ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ಕತ್ತು ಹಿಸುಕಿ ಪತಿ ತನ್ನ ಪತ್ನಿ ಕೊಲೆ ಮಾಡಿದ್ದಾನೆ. ಪಾರ್ವತಿ(23) ಕತ್ತು ಹಿಸುಕಿ ಪತಿ ಭೀಮರಾವ್ ಭಂಗಿ ಹತ್ಯೆಗೈದಿದ್ದಾನೆ. ಒಂದು ವರ್ಷದ ಹಿಂದೆ ಪಾರ್ವತಿ, ಭೀಮರಾವ್​ ಮದುವೆಯಾಗಿದ್ದರು. ಪಾರ್ವತಿಗೆ ಅಡುಗೆ, ಮನೆಗೆಲಸ ಬರಲ್ಲವೆಂಬ ಕಾರಣಕ್ಕೆ ನಿತ್ಯ ಜಗಳವಾಗುತ್ತಿತ್ತು. ಪ್ರತಿದಿನ ಪತ್ನಿ ಪಾರ್ವತಿ ಜತೆ ಭೀಮರಾವ್ ಭಂಗಿ ಜಗಳವಾಡುತ್ತಿದ್ದ. ಜಗಳ ತಾರಕಕ್ಕೇರಿ ಹಗ್ಗದಿಂದ ಕತ್ತು ಹಿಸುಕಿ ಭೀಮರಾವ್ ಕೊಲೆ ಮಾಡಿದ್ದಾನೆ.

Follow us on

Related Stories

Most Read Stories

Click on your DTH Provider to Add TV9 Kannada