BJ Puttaswamy: ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಬಿಜೆ ಪುಟ್ಟಸ್ವಾಮಿ ಭಾನುವಾರ ಸನ್ಯಾಸತ್ವ-ಪೀಠಾರೋಹಣ: ಯಾರೆಲ್ಲಾ ಉಪಸ್ಥಿತರು?
ಭಾನುವಾರ ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಇರುವ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀಗಳಿಂದ ಪೂಜೆ ನಡೆಯಲಿದೆ. ಪೂಜಾ ಕೈಂಕರ್ಯದ ವೇಳೆ ಹರಗುರು ಚರಣ ಮೂರ್ತಿಗಳು ಭಾಗಿಯಾಗಲಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಆಪ್ತರಾದ, ಬಿಜೆಪಿ ಪಕ್ಷದ ಮಾಜಿ ಮೇಲ್ಮನೆ ಸದಸ್ಯ ಬಿಜೆ ಪುಟ್ಟಸ್ವಾಮಿ ಅವರು (BJ Puttaswamy) ಪೂರ್ಣಾನಂದ ಪುರಿಯಾಗಿ ನಾಳೆ ಭಾನುವಾರ ಪೀಠಾರೋಹಣ ಮಾಡಲಿದ್ದಾರೆ. ಶ್ರೀಕ್ಷೇತ್ರ ತೈಲೇಶ್ವರ ಮಹಾಸಂಸ್ಥಾನ ಗಾಣಿಗ ಮಠದಲ್ಲಿ ಪೀಠಾರೋಹಣ ಮಾಡಲಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ನಗರೂರು ಗ್ರಾಮದಲ್ಲಿರುವ ಗಾಣಿಗ ಸಮುದಾಯಕ್ಕೆ ಸೇರಿದ ಶ್ರೀಮಠದ ಮೊದಲ ಪೀಠಾಧಿಪತಿಯಾಗಿ 83 ವರ್ಷದ ಬಿಜೆ ಪುಟ್ಟಸ್ವಾಮಿ ಪೀಠಾರೋಹಣ ಮಾಡಲಿದ್ದಾರೆ. ಲೌಖೀಕ ಜೀವನ ತ್ಯಜಿಸಿ, ಜೀವದ ಕೊನೆ ದಿನಗಳಲ್ಲಿ ಆಧ್ಯಾತ್ಮದತ್ತ ಹೆಜ್ಜೆಯಿಟ್ಟಿರುವ ಬಿಜೆ ಪುಟ್ಟಾಸ್ವಾಮಿ ಅವರು ಪೂರ್ಣಾನಂದ ಪುರಿಯಾಗಿ ಪೀಠಾರೋಹಣ ಮಾಡಲಿದ್ದಾರೆ (Shri Kshetra Thaleshwara Ganiga Mahasamsthana Matha in Madanaikana Halli in Bengaluru).
ಭಾನುವಾರ ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಇರುವ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀಗಳಿಂದ ಪೂಜೆ ನಡೆಯಲಿದೆ. ಪೂಜಾ ಕೈಂಕರ್ಯದ ವೇಳೆ ಹರಗುರು ಚರಣ ಮೂರ್ತಿಗಳು ಭಾಗಿಯಾಗಲಿದ್ದಾರೆ. ಮಾದರ ಚನ್ನಯ್ಯ ಗುರುಪೀಠದ ಮಾದರ ಚನ್ನಯ್ಯ ಶ್ರೀ, ಕನಕ ಪೀಠದ ನಿರಂಜನಾನಂದ ಶ್ರೀ, ಸಿದ್ದಗಂಗೆದ ಸಿದ್ದಲಿಂಗ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಾಗಲಿದ್ದಾರೆ. 11 ಗಂಟೆಗೆ ವೇದಿಕೆ ಕಾರ್ಯಕ್ರಮ ಶುರುವಾಗಲಿದೆ. 11:50 ರಿಂದ 12:15 ರ ನಡುವಿನ ಶುಭ ಗಳಿಗೆಯಲ್ಲಿ ಬಿಜೆ ಪುಟ್ಟಸ್ವಾಮಿ ಪೀಠಾರೋಹಣ ಮಾಡಲಿದ್ದಾರೆ. ತಿರುಚ್ಚಿ ಮಹಾಸ್ವಾಮಿಗಳು, ಜಯೇಂದ್ರ ಪುರಿ ಮಹಾಸ್ವಾಮಿಗಳಿಂದ ಕೃಪಾಶಿರ್ವಾದ ಹಾಗೂ ಪಟ್ಟಾಭಿಷೇಕ ನೆರವೇರಲಿದೆ.
ಹೆಚ್ಚಿನ ಆಧ್ಯಾತ್ಮ ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಂದ ವೇದಿಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪನವರಿಂದ ಮಠದ ಉದ್ಘಾಟನೆ ನಡೆಯಲಿದೆ. ಮಾಜಿ ಸಿಎಂ ಎಸ್‌ಎಂ ಕೃಷ್ಣರಿಂದ ಆಶೀರ್ವಾದ ನುಡಿ. ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಸಿ ಟಿ ರವಿ, ಆರ್ ಅಶೋಕ್, ಡಿವಿ ಸದಾನಂದಗೌಡ, ಬಸವರಾಜ ಹೊರಟ್ಟಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗಿಯಾಗಲಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 pm, Sat, 14 May 22