ಬೆಂಗಳೂರು ಅಗ್ನಿಶಾಮಕರಿಗೆ ಲ್ಯಾಡರ್ ಬಲ: ಬಂದಿದೆ 90 ಮೀಟರ್ ಎತ್ತರ ತಲುಪುವ ಹೊಸ ಏಣಿ
ರಾಜ್ಯ ಸರಕಾರ ಸುಮಾರು 30 ಕೋಟಿ ವೆಚ್ಚದ ಲ್ಯಾಡರ್ ವಾಹನವನ್ನು ಫಿನ್ಲೆಂಡ್ ದೇಶದಿಂದ ಖರೀದಿಸಿದೆ. ದೇಶದಲ್ಲಿ ಏರಿಯಲ್ ಲ್ಯಾಡರ್ ವಾಹನ ಹೊಂದಿರುವ ಎರಡನೇ ನಗರ ಬೆಂಗಳೂರು.
ಬೆಂಗಳೂರು: ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ನಂದಿಸುವ ಲ್ಯಾಡರ್ ವಾಹನ ಈಗ ಬೆಂಗಳೂರಿಗೆ ಬಂದಿದೆ. ಇದೇ ಮೊದಲ ಬರಿಗೆ ಬೆಂಗಳೂರಿಗೆ ಏರಿಯಲ್ ಲ್ಯಾಡರ್ ವಾಹನ ಪರಿಚರಿಸಲಾಗಿದ್ದು ಈ ವಾಹನದ ಸಹಾಯದಿಂದ 90 ಮೀಟರ್ ಎತ್ತರದ ವರೆಗೂ ತಲುಪಿ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಂದಿಸಬಹುದು. ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್ ಅನ್ನು ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯ ಸರಕಾರ ಸುಮಾರು 30 ಕೋಟಿ ವೆಚ್ಚದ ಲ್ಯಾಡರ್ ವಾಹನವನ್ನು ಫಿನ್ಲೆಂಡ್ ದೇಶದಿಂದ ಖರೀದಿಸಿದೆ. ಅಗ್ನಿಶಾಮಕ ಇಲಾಖೆ 2020ರಲ್ಲಿ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಮುಂದಾಗಿತ್ತು. ಸದ್ಯ ಈಗ ಖರೀದಿಸಲಾಗಿದ್ದು ನಾಳೆಯೇ ಸರ್ಕಾರ ಏರಿಯಲ್ ಲ್ಯಾಡರ್ ವಾಹನವನ್ನು ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಮುಖ್ಯಮಂತ್ರಿಗಳ ಮೂಲಕ ವಾಹನ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತೆ. ಇದನ್ನೂ ಓದಿ: ಮಳವಳ್ಳಿ ಬಾಲಕಿಯ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಭೇಟಿ, ಒಟ್ಟಿಗೆ ಹೋರಾಡೋಣ ಅಂತ ಕುಟುಂಬಕ್ಕೆ ಭರವಸೆ!
ದೇಶದಲ್ಲಿ ಏರಿಯಲ್ ಲ್ಯಾಡರ್ ವಾಹನ ಹೊಂದಿರುವ ಎರಡನೇ ನಗರ ಬೆಂಗಳೂರು. ಈ ಮೊದಲು ಮುಂಬೈ ನಗರದಲ್ಲಿ 90 ಮೀಟರ್ ಎತ್ತರದ ಲ್ಯಾಡರ್ ವಾಹನ ಬಳಕೆ ಮಾಡಲಾಗಿದೆ. ಸದ್ಯ ಇನ್ನುಮುಂದೆ ಬೆಂಗಳೂರಿನಲ್ಲೂ ಈ ವಾಹನ ಬಳಸಲಾಗುತ್ತೆ. ನಗರದಲ್ಲಿ ಹೆಚ್ಚುತ್ತಿರುವ ಬಹುಮಹಡಿ ಕಟ್ಟಡಗಳ ಸಂಖ್ಯೆ ಹಿನ್ನೆಲೆ ಅವಘಡಗಳ ಸಂದರ್ಭದಲ್ಲಿ ಬಳಸಿಕೊಳ್ಳಲು ಅತ್ಯಾಧುನಿಕ ಲ್ಯಾಡರ್ ವಾಹನ ಖರೀದಿಸಲಾಗಿದೆ.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಬಲಪಡಿಸಲು ಹತ್ತು ಹಲವು ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಸುಮಾರು ಎರಡು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಅಗ್ನಶಾಮಕದಳದ ಸೇವಾ ಘಟಕಗಳನ್ನು ಹೊಂದಿದ್ದು ಇಲಾಖೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
Published On - 1:24 pm, Wed, 19 October 22