ಕೆಂಪಣ್ಣ ಭ್ರಷ್ಟಾಚಾರದ ಆರೋಪಕ್ಕೆ ಮುನಿರತ್ನ ಸೆಡ್ಡು, ರಾಜಕೀಯ ಪ್ರೇರಿತ ಎಂದ ಸಿಎಂ ಬೊಮ್ಮಾಯಿ
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸಾಕ್ಷಿ ಕೊಡಲಿ. ನನ್ನ ಬಳಿ ಯಾರು ಬಂದಿದ್ದಾರೆ, ನಾನು ಏನು ಹೇಳಿದ್ದೇನೆ. ಎಲ್ಲವನ್ನೂ ನಾನೇ ತನಿಖೆ ಮಾಡಿಸುತ್ತೇನೆ, ಇದನ್ನ ಬಿಡಲ್ಲ ಎಂದು ಸಚಿವ ವಿ.ಮುನಿರತ್ನ ಹೇಳಿದರು.
ಬೆಂಗಳೂರು: ಏನೇ ಆರೋಪ ಮಾಡಿರಬಹುದು, ಆದರೆ ಸಾಕ್ಷಿ ಇದೆಯಾ? ಅವರು ದಾಖಲೆ ಕೊಡಬೇಕು, ಇಲ್ಲದಿದ್ರೆ ನಾನು ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ಟಿವಿ9ಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ ನೀಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಚಿವ ವಿ.ಮುನಿರತ್ನ ವಿರುದ್ಧ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸಾಕ್ಷಿ ಕೊಡಲಿ. ನನ್ನ ಬಳಿ ಯಾರು ಬಂದಿದ್ದಾರೆ, ನಾನು ಏನು ಹೇಳಿದ್ದೇನೆ. ಎಲ್ಲವನ್ನೂ ನಾನೇ ತನಿಖೆ ಮಾಡಿಸುತ್ತೇನೆ, ಇದನ್ನ ಬಿಡಲ್ಲ. ಸರ್ಕಾರ, ಸಚಿವರ ಬಗ್ಗೆ ಆರೋಪ ಮಾಡಿದ್ರೆ ಸುಮ್ಮನಿರಲ್ಲ. ಇದನ್ನ ಇಲ್ಲಿಗೆ ಬಿಡಲ್ಲ, ಕಾನೂನು ಹೋರಾಟ ಮಾಡ್ತೇನೆ. ನನ್ನ ತಪ್ಪಿದ್ದರೆ ಏನು ಶಿಕ್ಷೆ ಕೊಟ್ಟರೂ ನಾನು ಅನುಭವಿಸ್ತೇನೆ ಎಂದು ಹೇಳಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ನಿಜವಾದ ಗುತ್ತಿಗೆದಾರ ಯಾರನ್ನು ಭೇಟಿ ಮಾಡುತ್ತಾರೆ? ಗುತ್ತಿಗೆದಾರರು ಸರ್ಕಾರ, ಸಚಿವರನ್ನ ಭೇಟಿ ಮಾಡಬೇಕು. ಅದನ್ನ ಬಿಟ್ಟು ಸಿದ್ದರಾಮಯ್ಯರನ್ನ ಭೇಟಿಯಾದರೆ ಏನರ್ಥ? ವಿರೋಧ ಪಕ್ಷದವರ ನಿರ್ದೇಶನದಂತೆ ಇದು ನಡೆಯುತ್ತಿದೆ. ಇದು ಜಮೀರ್ ಕುತಂತ್ರ ಎಂದು ಸಚಿವ ವಿ.ಮುನಿರತ್ನ ಹೇಳಿದರು.
ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರ ಆರೋಪದಲ್ಲಿ ಹುರುಳಿಲ್ಲ: ಸಿಎಂ ಬೊಮ್ಮಾಯಿ
ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ನಾಯಕರ ಮನೆಯಿಂದ ಹೊರಗೆ ಬಂದು ಆರೋಪ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಇವರ ಬಳಿ ದಾಖಲೆಗಳಿದ್ದರೆ ಯಾವುದೇ ಶಾಸಕ, ಸಚಿವ, ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಡಲಿ. ಲೋಕಾಯುಕ್ತರು ತನಿಖೆ ಮಾಡಿ ಕ್ರಮ ತಗೊಳ್ತಾರೆ. ಆಧಾರ ರಹಿತ ಹೇಳಿಕೆಗಳು ನಿರ್ದಿಷ್ಟ ಉದ್ದೇಶದಿಂದ ಹೊರಗೆ ಬರುತ್ತವೆ. ಇವಕ್ಕೆ ನಾನು ಪ್ರತಿಕ್ರಿಯಿಸಬೇಕಿಲ್ಲ.
ಪ್ರಧಾನಿಗೆ ಪತ್ರ ಬರೆಯಲು ಸ್ವಾತಂತ್ರ್ಯವಿದೆ
ಪ್ರಧಾನಿಗೆ ಪತ್ರ ಬರೆಯಲು ಈ ದೇಶದ ಎಲ್ಲರಿಗೂ ಸ್ವಾತಂತ್ರ್ಯವಿದೆ. ಯಾರು ಬೇಕಾದರೂ ಪ್ರಧಾನಿಗೆ ಪತ್ರ ಬರೆಯಬೇಕು. ಅವರ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಗುತ್ತಿಗೆದಾರರ ಸಂಘ ಕೆಂಪಣ್ಣ ಅವರದ್ದು ಒಂದೇ ಇಲ್ಲ. ಹಲವಾರು ಗುತ್ತಿಗೆದಾರರ ಸಂಘಗಳು ಇವೆ ಎಂದು ಹೇಳಿದರು.
Published On - 1:38 pm, Wed, 24 August 22