ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯ

ಆ.25ರವರೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಡೆಡ್​​ಲೈನ್ ನೀಡಿದ್ದು, ಈ ಬಗ್ಗೆ ಕಂದಾಯ ಇಲಾಖೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಳೆ ಸಂಜೆಯವರೆಗೂ ಕಾದು ನೋಡಿ ಮತ್ತೊಮ್ಮೆ ಸಭೆ ಮಾಡಲಿದೆ.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯ
ಚಾಮರಾಜಪೇಟೆ ಮೈದಾನ ಮತ್ತು ಗಣೇಶ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 24, 2022 | 11:49 AM

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯವಾಗಲಿದೆ. ಆ.25ರವರೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಡೆಡ್​​ಲೈನ್ ನೀಡಿದ್ದು, ಈ ಬಗ್ಗೆ ಕಂದಾಯ ಇಲಾಖೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಳೆ ಸಂಜೆಯವರೆಗೂ ಕಾದು ನೋಡಿ ಮತ್ತೊಮ್ಮೆ ಸಭೆ ಮಾಡಲಿದ್ದು, ಸಭೆ ಬಳಿಕ ಗಣೇಶ ಪ್ರತಿಷ್ಠಾಪನೆ ಕುರಿತು ಒಕ್ಕೂಟ ಚರ್ಚೆ ನಡೆಸಲಿದೆ. ಆ.19ರಂದು ಬೆಂಗಳೂರು ನಗರ ಡಿಸಿ ಶ್ರೀನಿವಾಸ್​ರಿಗೆ  ಒಕ್ಕೂಟ ಮನವಿ ಸಲ್ಲಿಸಿತ್ತು. ಈಗಾಗ್ಲೇ ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿಸಿ ಮೋಹನ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಮನವಿ ಮಾಡಿದ್ದು, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ ನೀಡುತ್ತಾ ಕಂದಾಯ ಇಲ್ಲಾಖೆ ಎನ್ನುವ ಪ್ರಶ್ನೆ ಉಂಟಾಗಿದೆ.

ಇದನ್ನೂ ಓದಿ: Chamarajpet Ganeshotsav: ಗಣೇಶೋತ್ಸವ ವರದಿ ನೀಡಲು ಪೊಲೀಸರಿಗೆ ಕೊಟ್ಟಿದ್ದ ಗಡುವು ನಾಳೆಗೆ ಕೊನೆ

ಪೊಲೀಸ್ ಇಲಾಖೆಗೆ ಬಿಸಿತುಪ್ಪವಾದ ಗಣೇಶೋತ್ಸವ

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯ ನಿರ್ವಹಣೆಯು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಬಿಸಿತುಪ್ಪವಾಗಿದೆ. ಪೊಲೀಸ್ ಇಲಾಖೆಯು ಗಣೇಶೋತ್ಸವದ ಸಾಧಕ-ಬಾಧಕ ಕುರಿತಂತೆ ಚರ್ಚೆ ನಡೆಸುತ್ತಿದೆ. ಚಾಮರಾಜಪೇಟೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದರೆ ವಿವಾದದ ಪರಿಣಾಮಗಳು ಇಡೀ ರಾಜ್ಯಕ್ಕೆ ಹರಡುವ ಸಾಧ್ಯತೆಯಿದೆ. ಪ್ರತಿ ವಿವಾದಿತ ಜಾಗದಲ್ಲೂ ಉತ್ಸವಕ್ಕೆ ಅನುಮತಿ ಕೇಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ ಎಂದು ಪೊಲೀಸ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಗಣೇಶೋತ್ಸವ ಸಂಬಂಧ ಮಾಹಿತಿ ಕಲೆಹಾಕಲು ವಿವಿಧ ಠಾಣೆಗಳ ಸಬ್​ಇನ್​ಸ್ಪೆಕ್ಟರ್​ಗಳಿಗೆ ಉನ್ನತ ಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುತ್ತಿರುವವರು ಯಾರು? ಎಲ್ಲಿ ಆಚರಣೆ ಮಾಡುತ್ತಿದ್ದಾರೆ? ಬಿಬಿಎಂಪಿಯಿಂದ ಅನುಮತಿ ಸಿಕ್ಕಿದೆಯೇ? ಸ್ಥಳ ಖಾಸಗಿಯವರಿಗೆ ಸೇರಿದ್ದೆ ಅಥವಾ ಬಿಬಿಎಂಪಿ ಜಾಗನಾ? ರಸ್ತೆನಾ? ಏನೆಲ್ಲಾ ವ್ಯವಸ್ಥೆ ಮಾಡಿದ್ದಾರೆ? ಗಣೇಶನನ್ನು ಕೂರಿಸುವ ಸ್ಥಳದಲ್ಲಿ ಯಾವುದಾದರೂ ವಿವಾದಗಳಿವೆಯೇ? ಗಣೇಶೋತ್ಸವಕ್ಕೆ ಎಷ್ಟು ಜನ ಸೇರಬಹುದು? ಸ್ಥಳಾವಕಾಶ ಹೇಗಿದೆ? ಮೈಕ್ ಸೆಟ್, ಆರ್ಕೆಸ್ಟ್ರಾ ಬಳಕೆ ಮಾಡ್ತಾರಾ? ಹೀಗೆ ಹಲವು ಮಾಹಿತಿಗಳನನ್ನು ಕಲೆ ಹಾಕಲು ಠಾಣಾವಾರು ಇನ್ಸ್‌ಪೆಕ್ಟರ್ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ.

ಒಕ್ಕೂಟದಲ್ಲಿ ಬಿರುಕು

ಚಾಮರಾಜಪೇಟೆ ಗಣೇಶೋತ್ಸವ ಗದ್ದಲದಲ್ಲಿ ಶಾಸಕ ಜಮೀರ್ ಹೆಸರು ಮತ್ತೆಮತ್ತೆ ಪ್ರಸ್ತಾಪವಾಗುತ್ತಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಮಧ್ಯೆ ಇದೇ ಕಾರಣಕ್ಕೆ ಬಿರುಕು ಮೂಡಿದೆ. ಒಕ್ಕೂಟದ ಅಧ್ಯಕ್ಷ ರಾಮೇಗೌಡ ಮತ್ತು ಕಾರ್ಯದರ್ಶಿ ರುಕ್ಮಾಂಗದ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ. ಶಾಸಕ ಜಮೀರ್ ಹಾಗೂ ಅಲ್ತಾಫ್ ಕಡೆಯವರಾದ ರಾಮೇಗೌಡರು ನಮ್ಮ ಹೋರಾಟ ಆರಂಭವಾದ ಮೇಲೆ ಒಕ್ಕೂಟಕ್ಕೆ ಬಂದರು. ಈಗ ಒಂದಲ್ಲ ಒಂದು ರಾಜಕೀಯ ಮಾಡುತ್ತಿದ್ದಾರೆ. ಜಮೀರ್, ಅಲ್ತಾಪ್ ಮನೆಗೆಳಿಗೆ ಇವರು ಹೋಗಿದ್ದಾರೆ ಎಂದು ಒಕ್ಕೂಟದ ಕಾರ್ಯದರ್ಶಿ ರುಕ್ಮಾಂಗದ ಕಿಡಿಕಾರಿದ್ದಾರೆ.

ರುಕ್ಮಾಂಗದ ಮಾಡಿರುವ ಆರೋಪಗಳನ್ನು ಒಕ್ಕೂಟದ ಅಧ್ಯಕ್ಷ ರಾಮೇಗೌಡ ತಳ್ಳಿಹಾಕಿದ್ದಾರೆ. ನಾನು ಜಮೀರ್ ಜೊತೆ ಶಾಮೀಲಾಗಿಲ್ಲ. ಕಾಂಗ್ರೆಸ್​ ಪಕ್ಷದಿಂದ ನಾನು ಡೆಪ್ಯುಟಿ ಮೇಯರ್ ಆಗಿದ್ದವನು. ಜಮೀರ್ ಸಹ ಕಾಂಗ್ರೆಸ್​ನವರೇ. ಆದರೆ ಮೈದಾನದ ಹೋರಾಟಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದರು. ಯಾವ ಆಧಾರದ ಮೇಲೆ ರುಕ್ಮಾಂಗದ ನನ್ನ ವಿರುದ್ಧ ಆರೋಪ ಮಾಡ್ತಾರೆ? ರುಕ್ಮಾಂಗದ ಅವರೇ ನನ್ನ ಫೋನ್ ರಿಸೀವ್ ಮಾಡೊಲ್ಲ. ಅವರೇ ಜಮೀರ್ ಜೊತೆ ಶಾಮೀಲಾಗಿದ್ದಾರೆ. ಮೊದಲಿಂದಲೂ ನಾವು ಹೋರಾಟ ಮಾಡುತ್ತಿದ್ದವರು. ಈಗ ಬೇರೆಯವರ ಜೊತೆ ರುಕ್ಮಾಂಗದ ಸೇರಿಕೊಂಡಿದ್ದಾರೆ. ಒಕ್ಕೂಟದ ಸದಸ್ಯರ ಸಭೆ ನಡೆಸಿ ರುಕ್ಮಾಂಗದ ಅವರನ್ನು ಉಚ್ಚಾಟಿಸುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್