ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಜೋರಾದ ಪೈಪೋಟಿ, ವಿಪಕ್ಷ ನಾಯಕ ಸ್ಥಾನ ನೀಡುವಂತೆ ಸಿದ್ದರಾಮಯ್ಯಗೆ ಸಿ.ಎಂ. ಇಬ್ರಾಹಿಂ ಮನವಿ

| Updated By: ಆಯೇಷಾ ಬಾನು

Updated on: Dec 12, 2021 | 1:05 PM

ಈ ಹಿಂದೆಯೇ ಸಿ.ಎಂ. ಇಬ್ರಾಹಿಂ, ತನಗೆ ವಿಪಕ್ಷ ನಾಯಕನ ಸ್ಥಾನ ನೀಡುವಂತೆ CLP ನಾಯಕ ಸಿದ್ದರಾಮಯ್ಯ ಬಳಿ ಬೇಡಿಕೆ ಇಟ್ಟಿದ್ದರು. ಕಾಂಗ್ರೆಸ್ ಪಕ್ಷ ಬಿಡುವ ಬಗ್ಗೆಯೂ ಚಿಂತಿಸಿದ್ದಾರೆ. ಸದ್ಯ ಈಗ ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಜೋರಾದ ಪೈಪೋಟಿ, ವಿಪಕ್ಷ ನಾಯಕ ಸ್ಥಾನ ನೀಡುವಂತೆ ಸಿದ್ದರಾಮಯ್ಯಗೆ ಸಿ.ಎಂ. ಇಬ್ರಾಹಿಂ ಮನವಿ
ಸಿ.ಎಂ. ಇಬ್ರಾಹಿಂ
Follow us on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಜಿದ್ದಾಜಿದ್ದು ಮತ್ತಷ್ಟು ಜೋರಾಗಿದೆ. ಕಾಂಗ್ರೆಸ್ನಲ್ಲಿ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ವಿಪಕ್ಷ ನಾಯಕನ ಸ್ಥಾನ ನೀಡುವಂತೆ ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ.

ಈ ಹಿಂದೆಯೇ ಸಿ.ಎಂ. ಇಬ್ರಾಹಿಂ, ತನಗೆ ವಿಪಕ್ಷ ನಾಯಕನ ಸ್ಥಾನ ನೀಡುವಂತೆ CLP ನಾಯಕ ಸಿದ್ದರಾಮಯ್ಯ ಬಳಿ ಬೇಡಿಕೆ ಇಟ್ಟಿದ್ದರು. ಕಾಂಗ್ರೆಸ್ ಪಕ್ಷ ಬಿಡುವ ಬಗ್ಗೆಯೂ ಚಿಂತಿಸಿದ್ದಾರೆ. ಸದ್ಯ ಈಗ ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಇನ್ನೊಂದೆಡೆ ಇಬ್ರಾಹಿಂಗೆ ವಿಪಕ್ಷ ಸ್ಥಾನ ನೀಡಲು ಮೂಲ ಕಾಂಗ್ರೆಸ್ಸಿಗರ ಆಕ್ಷೇಪವಿದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ ಎರಡೂ ಸ್ಥಾನ ಜನತಾ ಪರಿವಾರದ ಮೂಲದವರಿಗೆ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಹಿನ್ನಲೆಯಲ್ಲಿ ಇಬ್ರಾಹಿಂಗೆ ಪರಿಷತ್ ವಿಪಕ್ಷ ನಾಯಕನ ಸ್ಥಾನ ನೀಡಬೇಡಿ ಎಂದು ಮೂಲ ಕಾಂಗ್ರೆಸ್ಸಿಗರು ನಿರಾಕರಿಸುತ್ತಿದ್ದಾರೆ.

ಸದ್ಯ ಈ ಜಟಾಪಟಿ ಬಗ್ಗೆ ಮಾತನಾಡಿರುವ ಸಿ.ಎಂ. ಇಬ್ರಾಹಿಂ, ಯೌವನ ತುಂಬಿದಾಗ ಮದುವೆ ಯಾರು ಯಾಕೆ ಬೇಡ ಅಂತಾರೆ? ವಿಧಾನ ಪರಿಷತ್ನಲ್ಲಿ ಈಗ ನನಗೆ ಯೌವನ ತುಂಬಿದೆ, ಹೈಕಮಾಂಡ್ ಏನು ಮಾಡತ್ತೆ ನೋಡೋಣ. ಕುಮಾರಸ್ವಾಮಿ, ದೇವೇಗೌಡರ ಹತ್ತಿರ ಈಗಲೂ ವಿಶ್ವಾಸವಿದೆ. ಅಡ್ವಾಣಿ ಹತ್ರವೂ ವಿಶ್ವಾಸವಿದೆ, ಈಗಲೂ ಅವರ ಮನೆಗೆ ಹೋಗ್ತೇನೆ. ಬಿಜೆಪಿ ಸಮಾನ ಮನಸ್ಕರಿಗೂ ನಾನು ಮನವಿ ಮಾಡ್ತೇನೆ ದೇಶ ಉಳಿಸಿ ಅಂತ ಎಂದರು.

ಇನ್ನು ವಿಧಾನ ಪರಿಷತ್​ನ ವಿರೋಧ ಪಕ್ಷ ನಾಯಕನ ಸ್ಥಾನ ವಿಚಾರಕ್ಕೆ ಸಂಬಂಧಿಸಿ CLP ನಾಯಕ ಸಿದ್ದರಾಮಯ್ಯರನ್ನು ಆಕಾಂಕ್ಷಿಗಳು ಭೇಟಿ ಮಾಡುತ್ತಿದ್ದಾರೆ. ಇಬ್ರಾಹಿಂ ಭೇಟಿ ಬೆನ್ನಲ್ಲೇ ಕೆಪಿಸಿಸಿ ಕಾಱಧ್ಯಕ್ಷ ಸಲೀಂ ಅಹ್ಮದ್, ಪರಿಷತ್​ನ ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಕೂಡ ಭೇಟಿ ನೀಡಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ ಪ್ರವೇಶಿಸುವ ವಿಶ್ವಾಸದಲ್ಲಿದ್ದಾರೆ. ಹಾಗೂ ಸಿ.ಎಂ. ಇಬ್ರಾಹಿಂ ವಿಪಕ್ಷ ನಾಯಕನ ಸ್ಥಾನ ನೀಡಿದರೆ ಪಕ್ಷದಲ್ಲೇ ಮುಂದುವರೆಯುವ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಭುವಿಯಲ್ಲಿರುವ ಸಾಗರಗಳಿಗೆ ನೀರು ಬಂದಿದ್ದು ಎಲ್ಲಿಂದ?; ಇಲ್ಲಿದೆ ಕುತೂಹಲಕರ ಮಾಹಿತಿ

Published On - 12:07 pm, Sun, 12 December 21