ಸೋನೆ ಮಳೆಯಲ್ಲೂ ಕಡಿಮೆಯಾಗದ ಬೆಲೆ‌; ರಾಜಧಾನಿ ಬೆಂಗಳೂರಿನಲ್ಲಿ ಎಳನೀರಿನ ಬೆಲೆ ಏರಿಕೆ

ಸಾಮನ್ಯವಾಗಿ ಮಳೆಗಾಲದಲ್ಲಿ ಎಳ ನೀರಿನ ಬೆಲೆ ತುಂಬ ಕಡಿಮೆ ಇರುತ್ತೆ. ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳ ನೀರಿನ ಬೆಲೆ ಹೆಚ್ಚಾಗಿಯೇ ಇದೆ. ಬಿಸಿಲಿನ ಬೇಗೆ ವೇಳೆ ದೇಹಕ್ಕೆ ತಂಪು ನೀಡುವ ಎಳ ನೀರು ಮಳೆಗಾಲದ ಸಂದರ್ಭದಲ್ಲೂ 50 ರಿಂದ 60 ರೂಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋನೆ ಮಳೆಯಲ್ಲೂ ಕಡಿಮೆಯಾಗದ ಬೆಲೆ‌; ರಾಜಧಾನಿ ಬೆಂಗಳೂರಿನಲ್ಲಿ ಎಳನೀರಿನ ಬೆಲೆ ಏರಿಕೆ
ಎಳನೀರು
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Aug 01, 2024 | 2:42 PM

ಬೆಂಗಳೂರು, ಆಗಸ್ಟ್.01: ಪ್ರತಿ ವರ್ಷ ಮಳೆಗಾಲ ಬಂದ್ರೆ ಸಾಕು ಎಳನೀರಿನ ಬೆಲೆ ತುಂಬ ಕಡಿಮೆ ಆಗುತ್ತಿತ್ತು.‌ ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳನೀರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಎಳನೀರು (Coconut Water) ಬೆಲೆ ಬೇಸಿಗೆಯಲ್ಲಿ 60 ರಿಂದ 70 ರೂಪಾಯಿ ದಾಟಿತ್ತು. ಆದಾದ ನಂತರ ಮಳೆಗಾಲ ಆರಂಭವಾದ ಮೇಲೆ 45 ರೂಪಾಯಿಗೆ ಇಳಿದಿತ್ತು. ಆದರೆ ಈಗ ಮಳೆಗಾಲವಿದ್ದರೂ 50 ರಿಂದ 60 ರೂಗೆ ಎಳನೀರು ಮಾರಾಟವಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ವರ್ಷದ ಬಿಸಿಲು ಕೊಟ್ಟಂತಹ ಎಫೆಕ್ಟ್ ಒಂದಲ್ಲ ಎರಡಲ್ಲ.‌ ಒಂದು ಕಡೆ ನೀರಿನಿಂದಾಗಿ ಜರನು ಓದ್ದಾಡಿದ್ರೆ, ಮತ್ತೊಂದೆಡೆ ಬೇಸಿಗೆಯಲ್ಲಿ ಬೆಳೆದ ಬೆಳೆಗಳು ನೀರಿಲ್ಲದೇ ಸೊರಗಿ ಹೋದ್ವು. ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ರು. ಇನ್ನು ಬೇಸಿಗೆಯಲ್ಲಿ ನೀರಿಲ್ಲದೆ ಈ ವರ್ಷದ ತೆಂಗಿನ ಫಸಲು ಸರಿಯಾಗಿ ಬಂದಿಲ್ಲ. ಹೀಗಾಗಿ ಸೋನೆ ಮಳೆ ಬಿದ್ರು, ಎಳ ನೀರಿಗೆ ಮಾತ್ರ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ 50, 60 ರೂಪಾಯಿಗೆ ಎಳನೀರು ಮಾರಾಟವಾಗುತ್ತಿದೆ. ಮಳೆಗಾಲದಲ್ಲಿಯೂ ಇಷ್ಟು ಬೆಲೆ ಇರುವುದನ್ನ ಕೇಳಿ ಗ್ರಾಹಕರು ಶಾಕ್ ಆಗ್ತಾ ಇದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ 30 ರಿಂದ‌ 40 ರೂಪಾಯಿ ಇರ್ತಿತ್ತು. ಆದರೆ ಈ ಬೇಸಿಗೆಯಿಂದ ಮಳೆಗಾಲದವರೆಗೂ ಒಂದೇ ಬೆಲೆ ಇದೆ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಎಳ ನೀರನ್ನ ಕುಡಿಯಲೇಬೇಕು. ಆದರೆ ಇಷ್ಟೊಂದು ಬೆಲೆ ಇದ್ದರೆ ಹೇಗೆ ಎಂದು ಗ್ರಾಹಕ ಗೀತಾರಾಮಚಂದ್ರ ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಕಡಲ್ಕೊರೆತದಿಂದ ಮಂಗಳೂರು, ಉಡುಪಿಗೆ ಕಾದಿದೆ ಗಂಡಾಂತರ: 2040ಕ್ಕೆ ಶೇ 5ರಷ್ಟು ಭೂಮಿ ಸಮುದ್ರಪಾಲು

ಇನ್ನು, ಮಳೆಗಾಲ‌ ಆರಂಭವಾಗಿರುವ ಹಿನ್ನೆಲೆ ಎಳ ನೀರು ಸರಿಯಾಗಿ ಬರ್ತಿಲ್ಲ. ಸಧ್ಯ ಮಳವಳ್ಳಿ, ಪಾಂಡವಪುರದಿಂದ ಮಾತ್ರ ಎಳ ನೀರು ಪೂರೈಕೆಯಾಗುತ್ತಿದೆ. ರಾಮನಗರ, ಮಂಡ್ಯ, ಮದ್ದೂರಿನಿಂದ ಬರುತ್ತಿದ್ದ ಎಳ ನೀರು ಸ್ಟಾಪ್ ಆಗಿದೆ.‌ ಈ ವರ್ಷದ ಬಿಸಿಲಿನ‌ ಎಫೆಕ್ಟ್ ನಿಂದಾಗಿ ಫಸಲು ಸರಿಯಾಗಿ ಬರ್ಲಿಲ್ಲ. ಹೀಗಾಗಿ ಫಸಲು ಕಡಿಮೆ ಬರುತ್ತಿದ್ದು, ಸಿಟಿಗೆ 30% ರಷ್ಡು ಎಳ ನೀರು ಮಾತ್ರ ಪೂರೈಕೆಯಾಗುತ್ತಿದೆ. ಎಳ ನೀರಿಗೆ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ‌ ಮತ್ತಷ್ಟು ಬೆಲೆ ದುಬಾರಿಯಾಗುವ ಸಾಧ್ಯತೆ‌ ಇದೆ ಅಂತ ವ್ಯಾಪಾರಸ್ಥರು ಹೇಳ್ತಿದ್ದಾರೆ.

ಒಟ್ನಲ್ಲಿ, ಈ ವರ್ಷದ ಬಿಸಿಲಿನ ಎಫೆಕ್ಟ್ ನಿಂದಾಗಿ ಎಳ ನೀರಿನ ಬೆಲೆ ಏರಿಕೆಯಾಗುತ್ತಲೇ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ