ನಾನು, ಅವನು ಮತ್ತು ಅವಳು. ಮಿಸ್ಡ್ ಕಾಲ್ ರಹಸ್ಯ -ಪೊಲೀಸ್ ಇನ್ಸ್ಪೆಕ್ಟರ್ ಕಾರ್ಯಾಚರಣೆಯ ಇಂಟ್ರೆಸ್ಟಿಂಗ್ ಸಂಗತಿಗಳು
ಸತತ 19 ದಿನಗಳ ಕಾಲ ಮೂವರ ಹುಡುಕಾಟ ನಡೆಸಿದ್ದ ಪೊಲೀಸರಿಗೆ ರೈಲ್ವೆ ನಿಲ್ದಾಣದ ಸಿಸಿಟಿವಿ ಕೈ ಕೊಟ್ರೆ, ಯಾವುದೇ ಮೊಬೈಲ್ ಸೇರಿದಂತೆ ಟೆಕ್ನಿಕಲ್ ಸಾಕ್ಷ್ಯ ಇಲ್ಲದೆ ಪೊಲೀಸರು ತಲೆಬಿಸಿ ಮಾಡಿಕೊಂಡಿದ್ದರು.. ಕೊನೆಗೆ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಮಿಸ್ಡ್ ಕಾಲ್ ಎಂಬುದು ಚೆನ್ನೈನ ಕಾಯಿನ್ ಬೂತ್ ಲ್ಯಾಡ್ ಲೈನ್ ನಿಂದ ಬಂದ ಮಾಹಿತಿ ಸಿಕ್ಕಿತ್ತು.
ಬೆಂಗಳೂರು: ಪುಲಕೇಶಿನಗರ ಠಾಣೆಯಲ್ಲಿ ದಾಖಲಾಗಿದ್ದ ಮೂವರು ಬಾಲಕಿಯರ ನಾಪತ್ತೆ ಪ್ರಕರಣ ರೋಚಕ ತಿರುವುಗಳ ಬಳಿಕ ಸುಖಾಂತ್ಯ ಕಂಡಿದೆ. ಪ್ರಕರಣ ದಾಖಲಾದ ದಿನದಿಂದ ಸತತ 17 ದಿನಗಳ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೊನೆಗೂ ನಾಪತ್ತೆಯಾಗಿದ್ದ ಬಾಲಕಿಯರು ಪತ್ತೆಯಾಗಿದ್ದು, ಸದ್ಯ ಮಕ್ಕಳು ಪೊಷಕರ ಮಡಿಲು ಸೇರಿದ್ದಾರೆ.
ಇದೇ ತಿಂಗಳ 6 ರಂದು ಮೂವರು ಬಾಲಕಿಯರು ಪ್ರತಿಷ್ಠಿತ ಖಾಸಗಿ ಶಾಲೆಯಿಂದ ನಾಪತ್ತೆಯಾಗಿದ್ದರು.. ಇದರಲ್ಲಿ ಇಬ್ಬರು ಹಾಸ್ಟೆಲ್ ನಲ್ಲಿ ವಾಸವಿದ್ದರೆ, ಮತ್ತೋರ್ವಳು ಪೊಷಕರೊಂದಿಗೆ ವಾಸವಿದ್ದಳು.. ಆದರೇ ದಿಢೀರ್ ಕಾಣೆಯಾಗಿದ್ದರು. ಹುಡುಕಾಟ ನಡೆಸಿದ ಪೋಷಕರು ಮಕ್ಕಳು ಸಿಗದ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ಶಾಲೆ ಬಳಿ ಸಹ ತೆರಳಿ ಪ್ರತಿಭಟನೆ ನಡೆಸಿದ್ದರು.. ಆದ್ರೆ ಹಲವು ಆತಂಕದ ಏಳುಬೀಳುಗಳ ನಡುವೆ ಮೂವರು ಬಾಲಕಿಯರು ಪೋಷಕರಿಗೆ ಸಿಕ್ಕಿದ್ದು, ಪುಲಕೇಶಿನಗರ ಇನ್ಸ್ ಪೆಕ್ಟರ್ ಕಿರಣ್ ಅಂಡ್ ಟೀಂ ನ ಸತತ ಕಾರ್ಯಾಚರಣೆಯ ಇಂಟ್ರೆಸ್ಟಿಂಗ್ ಸಂಗತಿಗಳೇ ರೋಚಕವಾಗಿದೆ.
ಕೌಟುಂಬಿಕ ಸಮಸ್ಯೆ.. ಹಾಸ್ಟಲ್ ನಲ್ಲಿದ್ದ ಕೆಲ ಸಮಸ್ಯೆಗಳಿಂದ ಹೆಚ್ಚು ನೊಂದ ಇಬ್ಬರು ಬಾಲಕಿಯರು ಊರು ಬಿಡುವ ಯೋಚನೆಯಲ್ಲಿದ್ದರು.. ಇದೇ ವೇಳೆ ಜೊತೆಯಾದ ಮತ್ತೋರ್ವಳಿಗೆ ಗೆಳೆಯನ ಕಾರಣವಿತ್ತು.. ಹೀಗೆ ಮೂವರು ಒಂದಾಗಿ ಊರು ಬಿಡಲು ನಿರ್ಧರಿಸಿದವರಿಗೆ ಕಾಡಿದ್ದು ಹಣದ ಸಮಸ್ಯೆ.. ಹಾಗಂತ ಸಣ್ಣಪುಟ್ಟ ಕಾರಣ ಶುರು ಮಾಡಿದ ಮೂವರು ಇತ್ತೀಚೆಗೆ ಶಾಲೆಯ ಎಲ್ಲರ ಬಳಿ 50 ರಿಂದ 100 ರೂ ಹಣ ಕೇಳೊಕೆ ಶುರು ಮಾಡಿದ್ರು.. ಜೊತೆಗೆ ಹಾಸ್ಟೆಲ್ ನಲ್ಲಿದವರೆಲ್ಲರ ಬಳಿಯೂ ಸಹ ಹಣ ಪಡೆದಿದ್ದು, ಇವರು ಸಂಗ್ರಹಿಸಿದ ಹಣದ ಒಟ್ಟು ಮೊತ್ತ 30 ಸಾವಿರವಾಗಿತ್ತು.. ಹಾಗೆ ಕೂಡಿಸಿಕೊಂಡ ಹಣದ ಸಮೇತ ಇದೇ ತಿಂಗಳ 6ರ ಸಂಜೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬಂದ ಬಾಲಕಿಯರು ಚಿಂತಾಮಣಿಗೆ ತೆರಳಿದ್ದಾರೆ..
ಬಳಿಕ ಅಲ್ಲಿಂದ ಚೆನ್ನೈಗೆ ತೆರಳಿದ್ದಾರೆ.. ಮರುದಿನ ಬೆಳಿಗ್ಗೆ ಚೆನ್ನೈಗೆ ತಲುಪಿದ ಬಾಲಕಿಯರು ದಿನ ಪೂರ್ತಿ ಚೆನ್ನೈ ಸುತ್ತಾಡಿದ್ದಾರೆ.. ಈ ವೇಳೆ ಹೊಸ ಮೊಬೈಲ್ ಖರೀದಿಸಿದ ಬಾಲಕಿಯರಿಗೆ 18ರ ವಯಸ್ಸು ದಾಟದ ಕಾರಣ ಸಿಮ್ ಸಿಗುವುದಿಲ್ಲ.. ಬಳಿಕ ಅಲ್ಲಿಂದ ಹೊರಡಲು ಆ ಬಾಲಕಿಯರು ಚೆನ್ನೈ ರೈಲು ನಿಲ್ದಾಣಕ್ಕೆ ಬಂದಿದ್ದಾರೆ.. ಈ ವೇಳೆ ಅವರನ್ನು ಕಂಡ ಸ್ಥಳೀಯ ಪೊಲೀಸ್ ಸಿಬ್ಬಂದಿ ಕರೆದು ವಿಚಾರಿಸಿದಾಗ ಸಂಬಂಧಿಕರ ಮನೆಗೆ ಬಂದಿದ್ದು, ವಾಪಾಸ್ ಬೆಂಗಳೂರಿಗೆ ತೆರಳುತ್ತಿರೋದಾಗಿ ಹೇಳಿದ್ದಾರೆ.. ಈ ವೇಳೆ ಪೊಲೀಸ್ ಸಿಬ್ಬಂದಿಯೇ ಟಿಕೆಟ್ ವ್ಯವಸ್ಥೆ ಮಾಡಿ ಮೂವರನ್ನು ಬೆಂಗಳೂರು ಟ್ರೈನ್ ಗೆ ಕಳುಹಿಸಿದ್ದಾರೆ.. ಆದರೆ ಇತ್ತ, ಮರುದಿನ ಬೆಂಗಳೂರಿನ ಕಂಟೋನ್ಮೆಂಟ್ ಗೆ ಬಂದ ಆ ಬಾಲಕಿಯರಿಗೆ ಶಾಕ್ ಕಾದಿತ್ತು..
ಯಾಕಂದ್ರೆ ಅವರು ಮಿಸ್ ಆದ ಪೊಸ್ಟರ್ ಗಳು ಫೋಟೊ ಸಮೇತ ಕಂಡಿದ್ದವು.. ಬಳಿಕ ಆತಂಕದಲ್ಲಿ ಮತ್ತೆ ತಮಿಳುನಾಡು ರೈಲು ಹತ್ತುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದರು.. ಯಾಕಂದ್ರೆ ಚೆನ್ನೈಗೆ ಹೊರಡ ಬೇಕಾದವರು ದೆಹಲಿಗೆ ಹೊರಟಿದ್ದ ರೈಲು ಹತ್ತಿದ್ದರು.. ಈ ವೇಳೆ ಪಕ್ಕದ ಪ್ಯಾಸೆಂಜರ್ ವಿಚಾರಿಸಿಕೊಂಡು ಎಡವಟ್ಟಾದ ಸಂಗತಿ ತಿಳಿದು ಹೈದ್ರಾಬಾದ್ ಸಮೀಪ ಇಳಿದು ಕೊಂಡು ಅಲ್ಲಿಂದ ಬಸ್ ಮುಖಾಂತರ ಚೆನ್ನೈಗೆ ತೆರಳಿದ್ದಾರೆ..
ಆದ್ರೆ ಇದರ ನಡುವೆ ಆ ಬಾಲಕಿಯರಿಗೆ ಮತ್ತೊಂದು ಶಾಕ್ ಕಾದಿತ್ತು.. ಯಾಕಂದ್ರೆ ದೆಹಲಿ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಊಟ ತಿಂಡಿ ಅಂತ ಬ್ಯಾಗ್ ತೆಗೆಯುತ್ತಿದ್ದ ಬಾಲಕಿಯರ ಕಡೆ ಪುಂಡರ ಕಣ್ಣಿತ್ತು.. ಯಾವಾಗ ಮಕ್ಕಳು ಕೊಂಚ ನಿದ್ರೆಗೆ ಜಾರಿದ್ರೊ ಈ ವೇಳೆ ಪರ್ಸ್ ನಲ್ಲಿದ್ದ ಹಣವನ್ನು ಪುಂಡರು ಎಗರಿಸಿದ್ದಾರೆ.. ಕೊನೆಗೂ ಅದುಹೇಗೊ ಪಾಡುಬಿದ್ದು ಚೆನ್ನೈಗೆ ಬಂದ ಬಾಲಕಿಯರು ವೇಲಾಂಗಣಿಗೆ ತೆರಳಲು ಮುಂದಾಗಿದ್ರು.. ಆದ್ರೆ ಅದರ ಮಾರ್ಗ ತಿಳಿಯದ ಬಾಲಕಿಯರು ಆಟೋ ಚಾಲಕನೊಬ್ಬನ ಬಳಿ ವಿಚಾರಿಸಿದ್ದಾರೆ.
ಆಟೋ ಚಾಲಕನ ಬಳಿ ಮಾಹಿತಿ ಕೇಳುತಿದ್ದಂತೆ ಆತ ನೀವ್ಯಾರು.. ಎಲ್ಲಿಂದ ಬಂದಿದ್ದೀರಾ? ಎಂದೆಲ್ಲಾ ಪ್ರಶ್ನಿಸಿದಾಗ ಆಶ್ರಮದಿಂದ ಬಂದಿದ್ದಾಗಿ ಬಾಲಕಿಯರು ಹೇಳಿದ್ದಾರೆ. ಬಳಿಕ ವೇಲಂಗಣಿಗೆ ಹೊಗಿ ಕೆಲಸ ಹುಡುಕೋದಾಗಿ ಹೇಳಿದ್ದಾರೆ.. ಈ ವೇಳೆ ಮನಸು ಕರಗಿದ ಆಟೋ ಚಾಲಕ ತನ್ನ ಮನೆಯ ಬಳಿಯೇ ಒಂದು ರೂಂ ನೀಡಿದ್ದಾನೆ.. ಆದ್ರೆ ಈ ವೇಳೆ ಅಲ್ಲಿ ಒಬ್ಬಳು ಪುರುಷ ರೂಪಿಯಾಗಿ ಬದಲಾಗಿದ್ದಳು.. ಅಲ್ಲಿದ್ದವರೆಲ್ಲಾ ಇಬ್ಬರು ಹುಡುಗಿಯರು, ಓರ್ವ ಪುರುಷ ಎಂದುಕೊಂಡಿದ್ರು.. ಈ ನಡುವೆ ಓರ್ವಳು ಕೆಲಸಕ್ಕೆ ಕೂಡ ಸೇರಿದ್ದಳು.. ಇಬ್ಬರು ರೂಂನಲ್ಲೇ ಉಳಿದಿದ್ದರು.. ಹೀಗೆ 19 ದಿನ ಕಳೆದ ಬಳಿಕ ಅದ್ಯಾಕೋ ಓರ್ವಳಿಗೆ ಮನೆ ನೆನಪಾಗಿತ್ತು.. ತಂದೆಯ ನಂಬರ್ ಗೊಂದು ಕರೆ ಮಾಡಿದ್ದ ಆಕೆ ರಿಂಗ್ ಆಗುತ್ತಿದ್ದಂತೆ ಕಟ್ ಮಾಡಿ ಸುಮ್ಮನಾಗಿದ್ಲು.. ಆದ್ರೆ ಇತ್ತ ಯಾವುದೇ ಟೆಕ್ನಿಕಲ್ ಕ್ಲೂ ಸಹ ಇಲ್ಲದೇ ಹುಡುಕಾಡುತ್ತಿದ್ದ ಪುಲಕೇಶಿನಗರ ಪೊಲೀಸರಿಗೆ ಆ ಮಿಸ್ಡ್ ಕಾಲ್ ಮೇಜರ್ ಕ್ಲೂ ಆಗಿ ಪರಿಣಮಿಸಿತ್ತು..
ಸತತ 19 ದಿನಗಳ ಕಾಲ ಮೂವರ ಹುಡುಕಾಟ ನಡೆಸಿದ್ದ ಪೊಲೀಸರಿಗೆ ರೈಲ್ವೆ ನಿಲ್ದಾಣದ ಸಿಸಿಟಿವಿ ಕೈ ಕೊಟ್ರೆ, ಯಾವುದೇ ಮೊಬೈಲ್ ಸೇರಿದಂತೆ ಟೆಕ್ನಿಕಲ್ ಸಾಕ್ಷ್ಯ ಇಲ್ಲದೆ ಪೊಲೀಸರು ತಲೆಬಿಸಿ ಮಾಡಿಕೊಂಡಿದ್ದರು.. ಕೊನೆಗೆ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಮಿಸ್ಡ್ ಕಾಲ್ ಎಂಬುದು ಚೆನ್ನೈನ ಕಾಯಿನ್ ಬೂತ್ ಲ್ಯಾಡ್ ಲೈನ್ ನಿಂದ ಬಂದ ಮಾಹಿತಿ ಸಿಕ್ಕಿತ್ತು. ಇದರ ಆಧಾರದಲ್ಲಿ ತೆರಳಿ ಅದೇ ಏರಿಯಾದ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ವಿಚಾರ ಗೊತ್ತಾಗಿದ್ದು, ಮೂವರು ಬಾಲಕಿಯರ ಪೈಕಿ ಒಬ್ಬಳು ಪುರುಷನಂತೆ ಇದ್ದದ್ದು ಗಮನಕ್ಕೆ ಬಂದಿದೆ.. ಕೂಡಲೇ ಮೂವರನ್ನೂ ಕರೆತಂದು ಪುಲಕೇಶಿನಗರ ಪೊಲೀಸರು, ಕೊರ್ಟ್ ಮುಂದೆ ಹಾಜರು ಪಡಿಸಿ, ಕೊನೆಗೆ ಪೊಷಕರಿಗೆ ಒಪ್ಪಿಸಿದ್ದಾರೆ. (ವರದಿ-ಜಗದೀಶ್)