ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ ಇದೆ, ಕೇಸರಿ ಶಾಲು ಹೊದೆಯುವ ಹಿಂದೆ ಆರೆಸ್ಸೆಸ್ ಕೈವಾಡವಿಲ್ಲ: ಆರ್ ಅಶೋಕ

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕಂದಾಯ ಸಚಿವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗಳು ಶಾಲು ಹೊದ್ದು ಬಂದಿದ್ದಾರೆ. ಅವರು ಹಿಜಾಬ್ ಬಿಟ್ಟು ಬಂದರೆ ಇವರೂ ಶಾಲು ಬಿಡುತ್ತಾರೆ ಎಂದು ಹೇಳಿದರು.

ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ ಇದೆ, ಕೇಸರಿ ಶಾಲು ಹೊದೆಯುವ ಹಿಂದೆ ಆರೆಸ್ಸೆಸ್ ಕೈವಾಡವಿಲ್ಲ: ಆರ್ ಅಶೋಕ
ಆರ್. ಆಶೋಕ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 05, 2022 | 6:20 PM

ಸಿದ್ದರಾಮಯ್ಯನವರಿಗೂ ಅಲ್ಪಸಂಖ್ಯಾತರ (minorities) ನಡುವೆ ಬಹಳ ದೊಡ್ಡ ನಂಟಿದೆ, ಅವರನ್ನು ವಿರೋಧ ಪಕ್ಷದ ನಾಯಕರು ಯಾವತ್ತೂ ಬಿಟ್ಟು ಕೊಡಲಾರರು. ಮುಸ್ಲಿಂ ಸಮುದಾಯದರು ಟಿಪ್ಪು ಜಯಂತಿ (Tipu Jayanti) ಆಚರಣೆಗೆ ಆಗ್ರಹಿಸದಿದ್ದರೂ ಸಿದ್ದರಾಮಯ್ಯ ಅದನ್ನು ಆಚರಿಸಿದರು. ಅವರ ಮನವೊಲಿಸಲು, ಶಾದಿ ಭ್ಯಾಗ್ಯ (Shadi Bhagya) ಯೋಜನೆ ಹುಟ್ಟು ಹಾಕಿದರು, ಹಿಂದೂ ಮತ್ತು ದಲಿತ ಸಮುದಾಯಗಳಲ್ಲೂ ಬಡವರಿರುತ್ತಾರೆ ಅನ್ನೋದು ಅವರಿಗೆ ಹೊಳೆಯಲಿಲ್ಲ. ಹಾಗಾಗಿ ಕಾಂಗ್ರೆಸ್ (Congress) ಪ್ರೇರಣೆಯಿಂದಲೇ ಹಿಜಾಬ್ ವಿವಾದ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ (R Ashoka) ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಹಿಜಾಬ್ ಪರವಾಗಿಯೇ ಮಾತಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಮಾಡಲು ಇದು ಪಾಕಿಸ್ತಾನ ಅಲ್ಲ, ಎಲ್ಲರೂ ಯೂನಿಫಾರ್ಮ್ ಧರಿಸಲೇಬೇಕು, ಮನೆಯಲ್ಲಿ ಹೇಗೆ ಬೇಕಾದರೂ ಇರಲಿ ಶಾಲೆಗೆ ಬರುವಾಗ ಮಾತ್ರ ಸರ್ಕಾರ ನೀಡುವ ಯೂನಿಫಾರಂ ಧರಿಸಿಯೇ ಬರಬೇಕು. ಸರ್ಕಾರಿ ಶಾಲೆ ಕಾನೂನಿನಲ್ಲಿ ಏನಿದೆ ಅದನ್ನು ಪಾಲನೆ ಮಾಡಬೇಕು. ಕೇರಳ ಹೈಕೋರ್ಟ್ ಹಿಜಾಬ್ ತಪ್ಪು ಅಂತ ಹೇಳಿದೆ ಎಂದು ಸಚಿವ ಅಶೋಕ ಹೇಳಿದರು.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕಂದಾಯ ಸಚಿವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗಳು ಶಾಲು ಹೊದ್ದು ಬಂದಿದ್ದಾರೆ. ಅವರು ಹಿಜಾಬ್ ಬಿಟ್ಟು ಬಂದರೆ ಇವರೂ ಶಾಲು ಬಿಡುತ್ತಾರೆ ಎಂದು ಹೇಳಿದರು.

ಹಿಜಾಬ್ ಧರಿಸಿ ಕಾಲೇಜಿಗೆ ಬಂದರೂ ತಪ್ಪು ಮತ್ತು ಶಾಲು ಹೊದ್ದು ಬಂದರೂ ತಪ್ಪೇ, ಕೇಸರಿ ಶಾಲಿಗೂ ನಮ್ಮ ವಿರೋಧ ಇರುವಂತೆ ಹಿಜಾಬ್​ಗೂ ವಿರೋಧವಿದೆ. ಈ ವಿವಾದದಲ್ಲಿ ಕಾಂಗ್ರೆಸ್ ಕೈವಾಡ ಇರುವುದರಲ್ಲಿ ಅನುಮಾನವೇ ಇಲ್ಲ, ಎಲ್ಲ ಕಾಂಗ್ರೆಸ್ ನ ಎಲ್ಲಾ ನಾಯಕರು ಅವರ ಪರವಾಗಿಯೇ ಮಾತಾಡುತ್ತಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವ ಹಿಂದೆ ಸಂಘ ಪರಿವಾರದ ಕೈವಾಡ ಇಲ್ಲ ಎಂದು ಅಶೋಕ ಹೇಳಿದರು.

ನಂತರ ಬಡವರ ವಸತಿ ಯೋಜನೆ ಬಗ್ಗೆ ಮಾತಾಡಿದ ಕಂದಾಯ ಸಚಿವರು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಬಡವರ್ಗದ ಕುಟುಂಬಗಳಿಗೆ ನಿವೇಶನ ನೀಡಿದ್ದೆವು. 94 ಸಿಅಡಿಯಲ್ಲಿ ಅವರು ಮನೆ ಕಟ್ಟಿಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರಿಗೆ ಹಕ್ಕುಪತ್ರ ಸಹ ನೀಡಲಾಗಿತ್ತು. ಮನೆಗಳನ್ನು ನೋಂದಣಿ ಮಾಡಿಕೊಳ್ಳಬೇಕು ಆಗುತ್ತಿಲ್ಲ ಅಂತ ದೂರು ಬಂದಿರುವ ಕಾರಣ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. 57 ಅರ್ಜಿ ಸಕ್ರಮ ಮಾಡಿಕೊಳ್ಳಲು ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ಮತ್ತೆ ಒಂದು ವರ್ಷ ಅವಕಾಶ ಮಾಡಿಕೊಡುತ್ತೇವೆ ಎಂದು ಅಶೋಕ ಹೇಳಿದರು.

ಸರ್ಕಾರಿ ಜಮೀನು ಬಡವರಿಗೆ ಸಿಗುವಂತೆ ಮಾಡಿ ಅವರಿಗೆ ನ್ಯಾಯ ಒದಗುವಂತಾಗಲು ಕಾಯ್ದೆ ತರಬೇಕಿದೆ. ಬಡವರಿಗೆ ನೆರವಾಗಲು ಕಾಯ್ದೆ ತಿದ್ದುಪಡಿಗೆ ತರುವ ನಿರ್ಧಾರ ಕ್ಯಾಬಿನೆಟ್ ನಲ್ಲಿ ತೆಗೆದುಕೊಳ್ಳಲಾಗಿದೆ. ರೈತರು ಸಾಗುವಳಿ ಮಾಡುತ್ತಿರುವ ಜಮೀನು ಯಾರೂ ಮುಟ್ಟುವಂತಿಲ್ಲ. ಮಠ-ಮಾನ್ಯ, ಸಂಘ-ಸಂಸ್ಥೆ, ಟ್ರಸ್ಟ್ ಮೊದಲಾದವುಗಳಿಗೆ ಭೂಮಿ ಕೊಡುವ ವಿಚಾರದಲ್ಲಿ ಅವು ಅಸ್ತಿತ್ವಕ್ಕೆ ಬಂದು ಎಷ್ಟು ವರ್ಷ ಆಗಿರಬೇಕು ಮುಂತಾದ ಸಂಗತಿಗಳನ್ನು ಪರಾಮರ್ಶಿಸಿ ಅದಕ್ಕಾಗಿ ಹೊಸ ಕಾಯ್ದೆ ತರಲಾಗುತ್ತಿದೆ.

ಆರೂವರೆ ಲಕ್ಷ ಹೆಕ್ಟೇರ್ ಜಮೀನು ಉಳುಮೆ ಮಾಡ್ತಿರುವ ರೈತರಿಗೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದ್ದು ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ ಎಂದ ಅಶೋಕ ಅವರು ಅದಕ್ಕೆ ನೀತಿ ನಿಯಮ ಮಾಡಲು ನಿರ್ಧರಿಸಿದ್ದು ಹಿಂದೆ ಇದ್ದ ನಿಯಮ ಬದಲಾವಣೆ ಮಾಡಿ, ಕಠಿಣ ನಿಯಮ ಜಾರಿಗೆ ತರಲಾಗುತ್ತದೆ ಎಂದರು.

ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆ ವಿಚಾರದ ಬಗ್ಗೆಯೂ ಮಾತಾಡಿದ ಕಂದಾಯ ಸಚಿವರು ‘ವಾರ್ಡ್​ಗಳ ಮರು ವಿಂಗಡಣೆ ನನ್ನ ಗಮನಕ್ಕೆ ಬಂದಿಲ್ಲ ಕಾಂಗ್ರೆಸ್ನವರು ಹೇಗೆ ಮಾಡಿದ್ದರೋ ನಾವು ಹಾಗೆಯೇ ಮಾಡುತ್ತೇವೆ. ಅವರು ಸಂವಿಧಾನದ ಪ್ರಕಾರ ಮಾಡಿದ್ದರೆ ನಾವು ಅದನ್ನೇ ಮಾಡುತ್ತೇವೆ. ವಾರ್ಡ್ ಮರು ವಿಂಗಡಣೆ ಮಾಡಿದ್ದಾಗಲೂ ನಾವು 100 ಸ್ಥಾನಗಳನ್ನು ಗೆದ್ದೆವು, ಅವರು 70 ಸ್ಥಾನಗಳನ್ನು ಗೆದ್ದರು. ಏನೇ ಮಾಡಿದರೂ ಸಂವಿಧಾನದ ಪ್ರಕಾರ ಮಾಡುತ್ತೇವೆ. ಉತ್ತರ ಪ್ರದೇಶದ ಗೆಲುವಿನ ಅಲೆ ರಾಜ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ,’ ಎಂದು ಹೇಳಿದರು.

ಇದನ್ನೂ ಓದಿ: ಶಿಕ್ಷಣದಲ್ಲಿ ಹಿಜಾಬ್​ ಅಷ್ಟೊಂದು ಮುಖ್ಯವಾಗಿದ್ದರೆ, ರಾಹುಲ್​ ಗಾಂಧಿಯೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ?!-ಬಿಜೆಪಿ ತಿರುಗೇಟು

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ