ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕರ ಕಾಲಿನ ಧೂಳಿಗೂ ಕಾಂಗ್ರೆಸ್ ಸಮವಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ಮಾಡಿದರು. ಫೇಸ್ಬುಕ್ನಲ್ಲಿಯೂ ಪೋಸ್ಟ್ ಹಾಕಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಈಗಿನ ಕಾಂಗ್ರೆಸ್ ಆರ್ಎಸ್ಎಸ್ನವರ ಕಾಲಿನ ಧೂಳಿಗೂ ಸಮವಲ್ಲ. ರಾಷ್ಟ್ರ ಭಕ್ತಿ ಸಂಘಟನನೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್ನವರಿಗೆ ಇಲ್ಲಾ ಎಂದು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರಿಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಕಾಂಗ್ರೇಸ್ ಅಡ್ರೆಸ್ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದ್ದು, ಆರ್‌ಎಸ್‌ಎಸ್ ಬೈದರೆ ರಾಹುಲ್ ಗಾಂಧಿ ಅವರನ್ನು ಸಿಎಂ ಮಾಡುತ್ತಾರೆಂಬ ಭ್ರಮಾ ಲೋಕದಲ್ಲಿದ್ದಾರೆ ಎಂದು ಟಾಂಗ್ ನೀಡಿದರು.
ರಾಷ್ಟ್ರ ಭಕ್ತಿ ಸಂಘಟನೆ RSS ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್ ನವರಿಗೆ ಇಲ್ಲಾ.
ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದ್ದು, RSS ಬೈದರೆ ರಾಹುಲ್ ಗಾಂಧಿ ಅವರನ್ನು ಸಿಎಂ ಮಾಡುತ್ತಾರೆಂಬ ಬ್ರಮಾ ಲೋಕದಲ್ಲಿದ್ದಾರೆ.
— M P Renukacharya (@MPRBJP) May 30, 2022
ಇದನ್ನೂ ಓದಿ; ಕೃತಿ ಶೆಟ್ಟಿಗೆ ಪ್ರ್ಯಾಂಕ್ ಮಾಡಿದ ಆ್ಯಂಕರ್; ನಿಲ್ಲಲೇ ನಟಿಯ ಕಣ್ಣೀರು
ಸಂಘ ಪರಿವಾರದ ಬಗ್ಗೆ ಟೀಕೆ ಮಾಡಿದರೆ ಜನ ನಿಮನ್ನ ಧೂಳಿಪಟ ಮಾಡುತ್ತಾರೆ. 2023 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ರಾಜಕೀಯದಲ್ಲಿ ಬಚ್ಚಾ, ರಾಜಕೀಯ ಪ್ರಜ್ಞೆಯಿಲ್ಲಾ. ದೇಶದ ಬಗ್ಗೆ ಗೌರವವಿಲ್ಲಾ. ದೇಶಭಕ್ತಿ ಸಂಘಟನೆಗಳನ್ನು ಗೌರವಿಸಲ್ಲ. ವೋಟಿಗಾಗಿ ಅಲ್ಪಸಂಖ್ಯಾತರನ್ನ ಓಲೈಸುತ್ತಾರೆ. ಜನ ತಕ್ಕ ಪಾಠ ಕಲಿಸಿದ್ದಾರೆ. ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳು. ಆರ್‌ಎಸ್‌ಎಸ್ ರಾಷ್ಟ್ರಭಕ್ತಿ ಸಂಸ್ಥೆ. ರಾಷ್ಟ್ರದ್ರೋಹಿಗಳು ಭಯೋತ್ಪಾದಕರು ಉಗ್ರಗಾಮಿಗಳಿಗೆ ಬೆಂಬಲ ಕೊಡುವ ನೀವು ನಪುಸಂಕರು. ಕಾಂಗ್ರೇಸ್ನವರು ರಾಷ್ಟ್ರದ್ರೋಹಿಗಳು, ದೇಶದ್ರೋಹಿಗಳು ಟಿಪ್ಪುಜಯಂತಿಯನ್ನು ಮಾಡುವ ನೀವು ನಪುಸಂಕರು ಎಂದು ಕಿಡಿಕಾರಿದರು.
ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳು.
RSS ರಾಷ್ಟ್ರಭಕ್ತಿ ಸಂಸ್ಥೆ.
ರಾಷ್ಟ್ರದ್ರೋಹಿಗಳು ಬಹೋತ್ಪಾದಕರು ಉಗ್ರಗಾಮಿಗಳಿಗೆ ಬೆಂಬಲ ಕೊಡುವ ನೀವು ನಪುಸಂಕರು.
ಕಾಂಗ್ರೇಸ್ ನವರು ರಾಷ್ಟ್ರದ್ರೋಹಿಗಳು, ದೇಶದ್ರೋಹಿಗಳು ಟಿಪ್ಪುಜಯಂತಿಯನ್ನು ಮಾಡುವ ನೀವು ನಪುಸಂಕರು.
— M P Renukacharya (@MPRBJP) May 30, 2022
ಯತ್ನಾಳ್ ನನ್ನ ಆತ್ಮೀಯ ಸ್ನೇಹಿತರು. ನೀವು ಸರಕಾರ ಹಾಗೂ ಸಂಘಟನೆ ವಿರುದ್ದ ಮಾತನಾಡುವುದನ್ನು ಬಿಡಬೇಕು.
ಜನರಿಗೆ ನಿಮ್ಮ ಬಗ್ಗೆ ತಪ್ಪು ಸಂದೇಶ ಹೋಗಲಿದೆ. ಈ ರೀತಿ ಮಾತನಾಡಿದರೆ ಪಕ್ಷ ಸಹಿಸಲ್ಲ ಎಂದು ಯತ್ನಾಳ್ಗೂ ರೇಣುಕಾಚಾರ್ಯ ಕ್ಲಾಸ್ ತೆಗೆದುಕೊಂಡದರು. ವಿಜಯೇಂದ್ರ ರಾಜಕೀಯದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಿ.ಎಲ್ ಸಂತೋಷ್ ಅವರು ಟಿಕೇಟ್ ತಪ್ಪಿಸಿಲ್ಲಾ ಇದು ನೂರಕ್ಕೆ ನೂರು ಸುಳ್ಳು ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.
ಯತ್ನಾಳ್ ನನ್ನ ಆತ್ಮೀಯ ಸ್ನೇಹಿತರು.ನೀವು ಸರಕಾರ ಹಾಗೂ ಸಂಘಟನೆ ವಿರುದ್ದ ಮಾತನಾಡುವುದನ್ನು ಬಿಡ ಬೇಕು.
ಜನರಿಗೆ ನಿಮ್ಮ ಬಗ್ಗೆ ತಪ್ಪು ಸಂದೇಶ ಹೋಗಲಿದೆ, ಈ ರೀತಿ ಮಾತನಾಡಿದರೆ ಪಕ್ಷ ಸಹಿಸಲ್ಲ@BSYBJP ಹೇಳಿದ್ದಾರೆ ವಿಜಯೇಂದ್ರ ರಾಜಕೀಯದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದೇ, @blsanthosh ಟಿಕೇಟ್ ತಪ್ಪಿಸಿಲ್ಲಾ ಇದು ನೂರಕ್ಕೆ ನೂರು ಸುಳ್ಳು— M P Renukacharya (@MPRBJP) May 30, 2022
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.