AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರಾಜ ಅರಸುಗೆ ಅಗೌರವ! ಕಾಂಗ್ರೆಸ್ ಕಿರುಚಿತ್ರದ ಬಗ್ಗೆ ಕೈ ನಾಯಕರಿಂದಲೇ ಅಸಮಾಧಾನ

ಕಾಂಗ್ರೆಸ್ ಕಾರ್ಯಕ್ರಮ ಮುಗಿದ ಬಳಿಕ ಪ್ರತ್ಯೇಕವಾಗಿ ಅನೌಪಚಾರಿಕ ಸಭೆ ಸೇರಿದ ಹಿರಿಯ ನಾಯಕರು ಕಿರುಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ದೇವರಾಜ ಅರಸುಗೆ ಅಗೌರವ! ಕಾಂಗ್ರೆಸ್ ಕಿರುಚಿತ್ರದ ಬಗ್ಗೆ ಕೈ ನಾಯಕರಿಂದಲೇ ಅಸಮಾಧಾನ
ದೇವರಾಜ ಅರಸು, ಕಾಂಗ್ರೆಸ್ ಪಕ್ಷದ ಚಿಹ್ನೆ
TV9 Web
| Updated By: sandhya thejappa|

Updated on: Aug 21, 2021 | 10:37 AM

Share

ಬೆಂಗಳೂರು: ದೇವರಾಜ ಅರಸು (Devaraj Arasu) ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿಯಿಂದಲೇ ಎಡವಟ್ಟಾಗಿದೆ. ಕಾಂಗ್ರೆಸ್ ಭವನದ ಆವರಣದಲ್ಲಿ ದೇವರಾಜ ಅರಸು ಕಿರುಚಿತ್ರವನ್ನು (Short Movie) ಪ್ರದರ್ಶನ ಮಾಡಿದ್ದು, ಕಿರುಚಿತ್ರಕ್ಕೆ ಬರೆದ ಸ್ಕ್ರೀಪ್ಟ್ ಬಗ್ಗೆ ಕಾಂಗ್ರೆಸ್ (Congress) ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವರಾಜ ಅರಸುಗೆ ಗೌರವ ಸಲ್ಲಿಸುವ ಬದಲು ಅಗೌರವ ಸಲ್ಲಿಸಿದಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಗೊಣಗಿದ್ದಾರೆ. ಈ ರೀತಿ ಕಿರುಚಿತ್ರ ನಿರ್ಮಿಸಿದ್ದು ಯಾರು? ಚಿತ್ರ ರಚನೆ ಮೊದಲು ಏಕೆ ಪರಿಶೀಲನೆ ಮಾಡಿಲ್ಲ ಅಂತ ಕೈ ನಾಯಕರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕ್ರಮ ಮುಗಿದ ಬಳಿಕ ಪ್ರತ್ಯೇಕವಾಗಿ ಅನೌಪಚಾರಿಕ ಸಭೆ ಸೇರಿದ ಹಿರಿಯ ನಾಯಕರು ಕಿರುಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಿರುಚಿತ್ರದಲ್ಲಿ ಇಂದಿರಾ ಗಾಂಧಿ ಹೊಗಳುವ ಭರದಲ್ಲಿ ಅರಸುಗೆ ಅಗೌರವ ಸಲ್ಲಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದಿರಾ ವಿರುದ್ಧ ರಾಜಕೀಯವಾಗಿ ಅರಸು ಗೆಲ್ಲಲಾಗಲೇ ಇಲ್ಲ ಎಂದು ಕಿರುಚಿತ್ರ ಹೇಳುತ್ತಿದೆ. ಅಲ್ಲದೇ ಅರಸುರನ್ನ ಕೆಳಗಿಳಿಸಿದ್ದು ದಿವಗಂತ ಆರ್.ಗುಂಡೂರಾವ್ ಎಂದು ಕಿರುಚಿತ್ರದಲ್ಲಿ ತೋರಿಸಲಾಗಿದೆ. ಅರಸು ಇಂದಿರಾ ಗಾಂಧಿ ವಿರುದ್ಧ ರಾಜಕೀಯವಾಗಿ ಸಫಲರಾಗಲಿಲ್ಲ. ಕೊನೆಗಾಲದಲ್ಲಿ ಸಮಯ ಸಾಧಕತನ ಅಂತ ಕಾಂಗ್ರೆಸ್ ಕಿರುಚಿತ್ರ ಬಿಂಬಿಸಿದೆ.

ಇದನ್ನೂ ಓದಿ

ಅತ್ಯಂತ ಕ್ರಾಂತಿಕಾರಿಯಾದ ಕಾನೂನನ್ನು ದಿಟ್ಟವಾಗಿ ತಂದವರು ದೇವರಾಜ ಅರಸು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಣ್ಣ ಸಮುದಾಯಗಳ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್​ ಪಕ್ಷವನ್ನು ಸೇರಿದ್ದೇನೆ: ಸಿ.ಎಸ್.ದ್ವಾರಕನಾಥ್

(Congress leaders are upset over the Congress Short Movie)