ಹಸಿರೀಕರಣ ಹೆಚ್ಚಿಸಲು ಬೆಂಗಳೂರಿನಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ
ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸಿಟಿಯಲ್ಲಿ ಹಸಿರೀಕರಣ ಹೆಚ್ಚಳ ಮಾಡಲು ಮಿಯಾವಾಕಿ ಫಾರೆಸ್ಟ್ ತಲೆ ಎತ್ತುತ್ತಿದೆ. ಅರ್ಧ ಎಕರೆ ಜಾಗದಲ್ಲಿ ಮಿನಿ ಫಾರೆಸ್ಟ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.

ಬೆಂಗಳೂರು, ಜೂನ್.24: ರಾಜ್ಯ ರಾಜಧಾನಿ ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗುತ್ತಿದ್ದು, ಎಲ್ಲಿ ನೋಡಿದ್ರು ಹಸಿರೀಕರಣಕ್ಕಿಂತ ಹೆಚ್ಚಾಗಿ ಬಿಲ್ಡಿಂಗ್ ಗಳೇ ಹೆಚ್ಚಾಗುತ್ತಿವೆ. ಇದರ ಎಫೆಕ್ಟ್ ನಿಂದಾಗಿ ನಗರದಲ್ಲಿ ಅಂತರ್ಜಲ ಮಟ್ಟವು ಕುಸಿದಿದ್ದು, ಎಲ್ಲಿ ನೋಡಿದ್ರು ವಾಯುಮಾಲಿನ್ಯವೇ ಹೆಚ್ಚಾಗಿ ಹೋಗಿದೆ. ಇದೀಗಾ ಇವುಗಳಿಗೆ ಬ್ರೇಕ್ ಹಾಕುವ ಸಲುವಾಗಿ ನಗರದಲ್ಲಿ ಮಿಯಾವಕಿ ಫಾರೆಸ್ಟ್ ಗಳು ತಲೆ ಎತ್ತುತ್ತಿದ್ದು, ಅರ್ಧ ಎಕರೆ ಜಾಗದಲ್ಲಿ ಮಿನಿ ಫಾರೆಸ್ಟ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.
ಈ ಮಿಯಾವಾಕಿ ಫಾರೆಸ್ಟ್ ಗಳು ಜಪಾನ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ. ಹಲವು ವಿದೇಶಗಳಲ್ಲಿ ಈ ಮಿಯಾವಾಕಿಯಿಂದಾಗಿ ನಗರಗಳಲ್ಲಿ ಹೆಚ್ಚು ಹಸಿರೀಕರಣ ಹೆಚ್ಚಾಗಿದೆ. ಅದರಂತೆ ನಮ್ಮ ಸಿಲಿಕಾನ್ ಸಿಟಿಯಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ ಮಾಡಿದ್ದು, ನೋಡುಗರ ಕಣ್ಮನ ಸೆಳೆಯತ್ತಿವೆ. ಜೆಪಿ ನಗರದ ರಾಯಲ್ ಪಾರ್ಕ್ ರೆಸಿಡೆನ್ಸಿಯಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ ಮಾಡಿದ್ದು, ಅರ್ಧ ಎಕರೆ ಜಾಗದಲ್ಲಿ 1200ಕ್ಕೂ ಹೆಚ್ಚು ಬಗೆ ಬಗೆಯ ಗಿಡಗಳನ್ನ ಬೆಳೆಸಲಾಗಿದೆ. ಅಂದಹಾಗೇ ಈ ಮಿಯಾವಾಕಿ ಅಂದ್ರೆ ಖಾಲಿ ಬಿದ್ದಿರುವ ಜಾಗದಲ್ಲಿ ವಿವಿಧ ಬಗೆಯ ಗಿಡಗಳನ್ನ ಬೆಳೆಸಿ ಪರಿಸರ ಜಾಗೃತ ಮೂಡಿಸುವುದಾಗಿದೆ. ಇನ್ನು ಮಿಯಾವಾಕಿ ಫಾರೆಸ್ಟ್ ನಿರ್ಮಾಣಕ್ಕೆ ಒಟ್ಟು 12 ಲಕ್ಷ ವೆಚ್ಚ ತಗುಲಿದ್ದು, ಔಟ್ ಆಫ್ ಕಂಟ್ರಿ ಸೇರಿದಂತೆ ನಮ್ಮ ರಾಜ್ಯದ ಸ್ಥಳೀಯ ಗಿಡಗಳನ್ನ ನೆಟ್ಟು ಏರಿಯಾದ ಸುತ್ತ ಫಾರೆಸ್ಟ್ ನಿರ್ಮಿಸಲಾಗುತ್ತಿದೆ. ಈ ಫಾರೆಸ್ಟ್ನಿಂದಾಗಿ ಹಸಿರೀಕರಣ ಜೊತೆಗೆ ಅಂತರ್ಜಲ ಮಟ್ಟವು ಹೆಚ್ಚಾಗಲಿದ್ದು ಬಿಬಿಎಂಪಿ ಈ ಪಾರ್ಕ್ ನಿರ್ಮಾಣ ಮನ್ನಣೆ ನೀಡುತ್ತಿದೆ.
ಇದನ್ನೂ ಓದಿ: ಕಳಪೆ, ಅರ್ಧ ಹೆಲ್ಮೆಟ್ ಹಾಕಿ ಬೈಕ್ ಚಲಾಯಿಸುತ್ತೀರಾ? ಕಾದಿದೆ ದಂಡ: ಕಾರ್ಯಾಚರಣೆಗೆ ಬೆಂಗಳೂರು ಪೊಲೀಸರು ಸಜ್ಜು
ಇನ್ಮು, ಈ ವರ್ಷದ ಬೇಸಿಗೆ ಕಾಲದಲ್ಲಿ ನೀರಿಲ್ಲದೇ, ಉತ್ತಮ ಗಾಳಿ ಇಲ್ಲದೇ ಪರದಾಡುವಂತಾಗಿತ್ತು. ಅಂತಹ ಪರಿಸ್ಥಿತಿ ಮತ್ತೆ ಬರುತ್ತೆ ಎನ್ನುವ ಕಾರಣಕ್ಕೆ ಮಿಯಾವಕಿ ಫಾರೆಸ್ಟ್ ನಾವು ಪ್ರೋತ್ಸಾಹಿಸುತ್ತಿದ್ದೇವೆ. ಸಧ್ಯ ನಮ್ಮ ಜೆಪಿನಗರದಲ್ಲಿ ಒಟ್ಟು ಮೂರು ಮಿಯಾವಾಕಿ ಫಾರೆಸ್ಟ್ ನಿರ್ಮಿಸಿದ್ದು, ನಮಗೆ ಉತ್ತಮ ಗಾಳಿ ಹಾಗೂ ಅಂತರ್ಜಲ ಮಟ್ಟವು ಹೆಚ್ಚಿದೆ. ಸಧ್ಯ ಇಂದು ಕೂಡ ಇನ್ನೊಂದು ಹೊಸ ಮಿಯಾವಾಕಿ ಫಾರೆಸ್ಟ್ ನಿರ್ಮಿಸಿದ್ದು ನಗರದೆಲ್ಲೆಡೆ ಇಂತಹ ಫಾರೆಸ್ಟ್ ಗಳು ನಿರ್ಮಾಣವಾಗಬೇಕು. ಇಲ್ಲದಿದ್ರೆ ಮಾಲಿನ್ಯದಿಂದಾಗಿ ಜರನು ಸಾವನ್ನಪ್ಪುತ್ತಾರೆ ಅಂತ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಲ್ಲಿ, ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಮರಗಳ ಮಾರಣ ಹೋಮ ಆಗುತ್ತಿದೆ. ಆದ್ರೆ ಗಿಡಗಳನ್ನ ನೆಡುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಮಿಯಾವಾಕಿ ಫಾರೆಸ್ಟ್ ಗಳು ನಗರದೆಲ್ಲೆಡೆ ಮಾಡಿದ್ದೇ ಆದಾಲ್ಲಿ ನಗರದಲ್ಲಿ ಹಸಿರೀಕರಣ ಜಾಸ್ತಿಯಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:46 am, Mon, 24 June 24