ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದಿಂದ ಟ್ರಾಫಿಕ್​ ಸಮಸ್ಯೆ ಹೆಚ್ಚಳ: ತಜ್ಞರು

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ನಿರ್ಮಾಣಕ್ಕೆ ಮೂರು ವರ್ಷಗಳ ಗಡುವು ನೀಡಲಾಗಿದೆ. ಆದರೆ, ತಜ್ಞರು ಈ ಗಡುವಿನಲ್ಲಿ ಪೂರ್ಣಗೊಳಿಸುವುದು ಅಸಾಧ್ಯವೆಂದು ಹೇಳುತ್ತಿದ್ದಾರೆ. ಸುರಂಗ ನಿರ್ಮಾಣದಿಂದಾಗಿ ಜಲಮೂಲಗಳು, ಅಂತರ್ಜಲ ಹಾಗೂ ಮೆಟ್ರೋ ಸುರಂಗ ಮಾರ್ಗಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವುದು ಉತ್ತಮ ಪರಿಹಾರ ಎಂದು ತಜ್ಞರು ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದಿಂದ ಟ್ರಾಫಿಕ್​ ಸಮಸ್ಯೆ ಹೆಚ್ಚಳ: ತಜ್ಞರು
ಸಾಂದರ್ಭಿಕ ಚಿತ್ರ

Updated on: Jun 21, 2025 | 3:13 PM

ಬೆಂಗಳೂರು, ಜೂನ್​ 21: ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆಗೆ (Bengaluru) ಕಡಿವಾಣ ಹಾಕಲು ರಾಜ್ಯ ಸರ್ಕಾರವು ಸುರಂಗ ರಸ್ತೆ (Tunnel road) ನಿರ್ಮಾಣಕ್ಕೆ ಮುಂದಾಗಿದೆ.​ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ 16.75 ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮೂರು ವರ್ಷಗಳ ಗಡುವು ನೀಡಿದೆ. ಆದರೆ, ಸುರಂಗ ರಸ್ತೆ ಕಾಮಗಾರಿಗೆ ಮೂರು ವರ್ಷದ ಗಡುವು ಅಸಾಧ್ಯವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುರಂಗ ಕಾಮಗಾರಿ ಶುರುವಾದರೇ ಸಾಲು ಸಾಲು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸುರಂಗ ರಸ್ತೆ ನಿರ್ಮಾಣ ವೇಳೆ ಜಲಮೂಲಗಳಾದ ಕೆರೆಗಳು, ಅಂತರ್ಜಲ ವ್ಯವಸ್ಥೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಅಲ್ಲದೇ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಸುರಂಗ ರಸ್ತೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ. ಸುರಂಗ ರಸ್ತೆ ನಿರ್ಮಾಣ ಬಳಿಕ ಜನರಿಗೆ ಸಂಕಷ್ಟ ತಪ್ಪುವುದಿಲ್ಲ. ಟೋಲ್ ಹೊರೆ ಜೊತೆಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಸುರಂಗ ರಸ್ತೆ ಬದಲು ಸಾರ್ವಜನಿಕರ ಸಾರಿಗೆ ಉತ್ತಮಪಡಿಸಲು ತಜ್ಞರು ಸಲಹೆ ನೀಡಿದ್ದಾರೆ.

ಮೂರು ಪಥಗಳ ಟನಲ್ ರಸ್ತೆ

ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ 16.75 ಕಿ.ಮೀ. ಉದ್ದ ಮೂರು ಪಥಗಳ ಸರಂಗ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟಕ್ಚರ್ ಲಿಮಿಟೆಡ್​ ಪ್ಲಾನ್ ತಯಾರಿಸಿದೆ. 8 ಟಿಬಿಎಮ್ ಯಂತ್ರಗಳನ್ನ ಬಳಸಿ ಸುರಂಗ ರಸ್ತೆ ನಿರ್ಮಾಣಕ್ಕೆ ಸಂಸ್ಥೆ ತೀರ್ಮಾನಿಸಿದೆ. ಈ ಟಿಬಿಎಮ್​ಗಳು ಹೆಬ್ಬಾಳ, ಪ್ಯಾಲೇಸ್ ರಸ್ತೆ, ಲಾಲ್ ಬಾಗ್ ಹಾಗೂ ಸಿಲ್ಕ್ ಬೋರ್ಡ್​ನಲ್ಲಿ ಕಾರ್ಯನಿರ್ವಹಿಸಲಿವೆ. ಬಿಬಿಎಂಪಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಎರಡು ಪ್ಯಾಕೇಜ್​ಗಳಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ
ವಿಧಾನಸೌಧ-ವಿಕಾಸಸೌಧಕ್ಕೆ ಕನ್ನಡತನ ಪ್ರತಿಬಿಂಬಿಸುವ ಘೋಷವಾಕ್ಯ ಕೊಡಿ
ಪ್ರಯಾಣಿಕರ ಗಮನಕ್ಕೆ: ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರಿನಲ್ಲಿ ಬಾಡಿಗೆ ಮನೆ ಇಷ್ಟೊಂದು ದುಬಾರಿನಾ?
ಕಾರ್ಯಕ್ರಮಗಳಿಗೆ ಹೊಸ ಕಾನೂನು:ಸಮಾರಂಭಕ್ಕೆ ಅನುಮತಿ ಪಡೆಯುವುದ್ಹೇಗೆ?

ಇದನ್ನೂ ಓದಿ: ನಂದಿನಿ ಹಾಲಿಗೆ ಪರಿಸರಸ್ನೇಹಿ ಪ್ಯಾಕಿಂಗ್: ಇನ್ನು ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್!

ಮೊದಲ ಪ್ಯಾಕೇಜ್ ಕಾಮಗಾರಿ

  • ಹೆಬ್ಬಾಳದ ಎಸ್ಟೀಮ್ ಮಾಲ್​ನಿಂದ ಶೇಷಾದ್ರಿ ರೋಡ್ ತನಕ
  • ಬಿಬಿಎಂಪಿಯಿಂದ 3,508 ಕೋಟಿ ರೂ. ಫಂಡಿಂಗ್
  • ಖಾಸಗಿ ಸಹಭಾಗಿತ್ವದಲ್ಲಿ: 5,262 ಕೋಟಿ ರೂ. ಫಂಡಿಂಗ್

ಎರಡನೇ ಪ್ಯಾಕೇಜ್

  • ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ
  • ಬಿಬಿಎಂಪಿಯಿಂದ 3,571,37 ಕೋಟಿ ಫಂಡಿಂಗ್
  • ಖಾಸಗಿ ಸಹಭಾಗಿತ್ವದಲ್ಲಿ: 5,357 ಕೋಟಿ ಫಂಡಿಂಗ್

ಏನಿದು ಸುರಂಗ ಮಾರ್ಗ ಯೋಜನೆ?

ಸುರಂಗ ರಸ್ತೆ ನಿರ್ಮಾಣ ಯೋಜನೆಯಡಿ ಎರಡು ಸುರಂಗ ರಸ್ತೆಗಳನ್ನು ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ. ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಸುರಂಗಗಳು ಇದರಲ್ಲಿ ಸೇರಿವೆ. ಉತ್ತರ-ದಕ್ಷಿಣ ಸುರಂಗವು ಹೆಬ್ಬಾಳ ಮತ್ತು ಸೆಂಟ್ರಲ್​ ಸಿಲ್ಕ್​ ಬೋರ್ಡ್​ ನಡುವೆ 16.75 ಕಿಮೀ ದೂರವನ್ನು ಕ್ರಮಿಸಲಿದೆ. ಪೂರ್ವ-ಪಶ್ಚಿಮ ಸುರಂಗವು 28 ಕಿ.ಮೀ ಉದ್ದವಿರಲಿದ್ದು ಇದು ಕೆ.ಆರ್. ಪುರಂ ಅನ್ನು ನಾಯಂಡಳ್ಳಿ, ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸುತ್ತದೆ. ​

ವರದಿ: ಶಾಂತಮೂರ್ತಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Sat, 21 June 25