AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಜೂನ್ 22ರ ಭಾನುವಾರದಂದು ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಬಿಎಂಆರ್​ಸಿಎಲ್​ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಹಸಿರು ಮಾರ್ಗದ ಸಂಚಾರಕ್ಕೆ ಯಾವುದೇ ವ್ಯತ್ಯಯವಿಲ್ಲ. ಕೇವಲ ನೇರಳೆ ಮಾರ್ಗದಲ್ಲಿ ಮಾತ್ರ ಸಂಚಾರ ವ್ಯತ್ಯಯವಾಗಲಿದೆ ಎಂದು ಬಿಎಂಆರ್​​​ಸಿಎಲ್​ ತಿಳಿಸಿದೆ. ಹಾಗಿದ್ದರೆ ಯಾವ ಸಮಯದಲ್ಲಿ ಸಂಚಾರ ವ್ಯತ್ಯಯವಾಗಲಿದೆ? ಇಲ್ಲಿದೆ ವಿವರ

ಪ್ರಯಾಣಿಕರ ಗಮನಕ್ಕೆ: ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ನಮ್ಮ ಮೆಟ್ರೋ
Kiran Surya
| Updated By: ವಿವೇಕ ಬಿರಾದಾರ|

Updated on:Jun 20, 2025 | 2:57 PM

Share

ಬೆಂಗಳೂರು, ಜೂನ್​ 20: ನಮ್ಮ ಮೆಟ್ರೋ (Namma Metro) ಬೆಂಗಳೂರು (Bengaluru) ಜನರ ಜೀವನಾಡಿಯಾಗಿದೆ. ವೇಗದ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಅನುಕೂಲಕಾರಿಯಾಗಿದ್ದು, ನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purpel Line) ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಭಾನುವಾರ (ಜೂ. 22) ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಜೂನ್​ 22 ರಂದು ಟ್ರಿನಿಟಿ ಸರ್ಕಲ್ ಹಾಗೂ ಹಲಸೂರು ನಡುವೆ ನಿಗದಿತ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ ಸಂಚಾರ ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸಂಚಾರ ಇರಲ್ಲ. ಬೈಯಪ್ಪನಹಳ್ಳಿಯಿಂದ ಕಾಡುಗೋಡಿವರೆಗೂ ಸಂಚಾರ ಇರುತ್ತದೆ. ಚಲಘಟ್ಟದಿಂದ ಎಂಜಿ ರಸ್ತೆವರೆಗೂ ಮೆಟ್ರೋ ಸಂಚಾರ ಇರುತ್ತದೆ. ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ ಸಂಚಾರ ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಹಸಿರು ಮಾರ್ಗದಲ್ಲಿ ಸಂಚಾರ ಎಂದಿನಂತೆ ಮೆಟ್ರೋ ಇರಲಿದೆ.

ಬಿಎಂಆರ್​ಸಿಎಲ್​ಗೆ ಪ್ರಶಸ್ತಿ

ಬಿಎಂಆರ್​ಸಿಎಲ್​ ಅನ್ನು ರಾಷ್ಟ್ರೀಯ ಮಟ್ಟದ ಇಟಿಇನ್​ಫ್ರಾ ರೈಲ್​ ಶೋ ಮತ್ತು ಅವಾರ್ಡ್​​ಗಳಲ್ಲಿ ಎಂಆರ್​ಟಿಎಸ್​/ಆರ್​​ಆರ್​ಟಿಎಸ್​ ಯೋಜನೆಗಳ ಕ್ಯಾಪೆನ್ಸ್​ ಅಥವಾ ಓಪೆಕ್ಸ್​ಗೆ ಅತ್ಯಾಧುನಿಕ ಹಣಕಾಸು ವಿಧಾನ ಎಂಬ ಪ್ರಶಸ್ತಿಯಿಂದ ಗೌರವಿಸಲಾಗಿದೆ. ದೇಶದ ಇನ್​ಫ್ರಾ ಕ್ಷೇತ್ರದಲ್ಲಿ ಪರಿಣಿತಿ ಮತ್ತು ಮುಂದಾಲೋಚನೆಯ ಚಟುವಟಿಕೆಗಳನ್ನು ಗುರುತಿಸುವ ಈ ಪ್ರಶಸ್ತಿಗೆ ಬಿಎಂಆರ್​ಸಿಎಲ್​ ಆಯ್ಕೆಯಾಗಿದೆ.

ಇದನ್ನೂ ಓದಿ
Image
ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆ: ಡಿಕೆಶಿ ಹೇಳಿದ್ದಿಷ್ಟು
Image
ವಿಧಾನಸೌಧ ಆವರಣಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಿ: ಮೋಹನ್​ದಾಸ್ ಪೈ
Image
ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್​​ನಲ್ಲಿ ಪ್ರಯಾಣಿಕರಿಗಾಗಿ ಹೊಸ ಸೇವೆ
Image
ಆಂಧ್ರದ ವೈಎಸ್​ಆರ್​ಪಿ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಬೆಂಗಳೂರಿನ

ಬಿಎಂಆರ್​ಸಿಎಲ್​ ಟಿಕೆಟ್​ ಹೊರಗಿನ ಆದಾಯದ ಮೂಲಗಳನ್ನು ಪ್ರಯೋಜನಪಡಿಸಿಕೊಂಡು ಮೆಟ್ರೋ ವಿಸ್ತರಣೆ ಮತ್ತು ನಿರ್ವಹಣೆಗೆ ಅನುದಾನ ಒದಗಿಸಿದ ಉತ್ಸಾಹಪೂರ್ವ ಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ. ಇವುಗಳಲ್ಲಿ ದೀರ್ಘಕಾಲ ವಾಣಿಜ್ಯ ಬಾಡಿಗೆ, ನಿಲ್ದಾಣಗಳ ಹೆಸರಿಡುವ ಹಕ್ಕು, ಹೊಸದಾದದ ಜಾಹೀರಾತು ಪಾಲುದಾರಿಕೆಗಳು ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಎಐಎಲ್​) ಜೊತೆಗಿನ ಸಾರ್ವಜನಿಕ-ಖಾಸಗಿ ಭಾಗಿದಾರಿ ಯೋಜನೆಗಳು ಸೇರಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್​ ಮಳಿಗೆಗಳು: ಗೊಂದಲಗಳಿಗೆ BMRCL ಸ್ಪಷ್ಟನೆ

ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಾರ, ಎಂದಿಗಿಂತ  ಜೂನ್​ 4 ರಂದು ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿತ್ತು. ನೇರಳೆ ಮಾರ್ಗದಲ್ಲಿ 4,78,334 ಜನರು ಪ್ರಯಾಣ ಮಾಡಿದರೆ, ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್​ (ಹಸಿರು ಮಾರ್ಗದಲ್ಲಿ) 2,84,674 ಜನರು ಪ್ರಯಾಣಿಸಿದ್ದರು. ಮೆಜೆಸ್ಟಿಕ್​ ನಿಲ್ದಾಣದಿಂದಲೇ 2,03,724 ಜನರು ಪ್ರಯಾಣ ಮಾಡಿದ್ದರು. ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಪ್ರಯಾಣ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Fri, 20 June 25