AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್​​ನಲ್ಲಿ ಪ್ರಯಾಣಿಕರಿಗಾಗಿ ಹೊಸ ಸೇವೆ: ಮಕ್ಕಳಿಗಾಗಿ ಟ್ರಾಲಿ ವ್ಯವಸ್ಥೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 01 ಮತ್ತು 02 ರಲ್ಲಿ ಪ್ರಯಾಣಿಕರಿಗೆ ನೂತನ ಟ್ರಾಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆ ಮೂಲಕ 2 ತಿಂಗಳಿನಿಂದ 4 ವರ್ಷದವರೆಗಿನ ಮಕ್ಕಳನ್ನ ಕೂರಿಸಿಕೊಂಡು ಹೋಗಲು ಈ ಸೇವೆ ಅನುಕೂಲಕರವಾಗಲಿದೆ.

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್​​ನಲ್ಲಿ ಪ್ರಯಾಣಿಕರಿಗಾಗಿ ಹೊಸ ಸೇವೆ: ಮಕ್ಕಳಿಗಾಗಿ ಟ್ರಾಲಿ ವ್ಯವಸ್ಥೆ
ಟ್ರಾಲಿ ವ್ಯವಸ್ಥೆ
ನವೀನ್ ಕುಮಾರ್ ಟಿ
| Edited By: |

Updated on:Jun 18, 2025 | 10:57 AM

Share

ದೇವನಹಳ್ಳಿ, ಜೂನ್​ 18: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  (Kempegowda International Airport Bengaluru) ಸಾಕಷ್ಟು ಪ್ರಯಾಣಿಕರ ನೆಚ್ಚಿನ ಏರ್‌ಪೋರ್ಟ್​. ಪ್ರಯಾಣಿಕರಿಗಾಗಿ ಒಂದಿಲ್ಲೊಂದು ಸೇವೆಗಳನ್ನ ನೀಡುತ್ತಿದೆ. ಇದೀಗ ಮತ್ತೊಂದು ಸೇವೆ ನೀಡಲು ಕೆಂಪೇಗೌಡ ಏರ್‌ಪೋರ್ಟ್ ಮುಂದಾಗಿದೆ. ಅದೇನೆಂದರೆ,​ ಮಕ್ಕಳ‌ ಜೊತೆ ಬರುವ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕೆ ನೂತನ ಟ್ರಾಲಿ ವ್ಯವಸ್ಥೆ (trolley system) ಮಾಡಲಾಗಿದೆ.

ನೂತನ ಟ್ರಾಲಿ ವ್ಯವಸ್ಥೆ

ಕೆಂಪೇಗೌಡ ಏರ್‌ಪೋರ್ಟ್​ಗೆ ನಿತ್ಯ ಲಕ್ಷಾಂತರ ಜನರು ಬರುತ್ತಾರೆ. ಪ್ರಯಾಣಿಕರು ತಮ್ಮ ಲಗೇಜ್ ಜೊತೆಗೆ ಮಕ್ಕಳನ್ನು ಕಡೆದುಕೊಂಡು ಹೊಗುವಲ್ಲಿ ಹೆಣಗಾಡುತ್ತಿದ್ದರು. ಈ ನಿಟ್ಟಿನಲ್ಲಿ  ಏರ್‌ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಲಗೇಜ್ ಜೊತೆಗೆ ಮಕ್ಕಳನ್ನ‌ ಕೂರಿಸಿಕೊಂಡು  ಹೋಗಲು ನೂತನ ಟ್ರಾಲಿ ವ್ಯವಸ್ಥೆಯನ್ನು ಆರಂಭಿಸಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ಗೆ ಮತ್ತೊಂದು ಗರಿ: ಸತತ 3ನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ

ಇದನ್ನೂ ಓದಿ
Image
ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24/7 ಸಿಗಲಿದೆ ವೈದ್ಯಕೀಯ ಸೇವೆ
Image
ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ 2 ಕೋಟಿ ರೂ ವಿದೇಶಿ ಹಣ ಜಪ್ತಿ: ಮೂವರ ಬಂಧನ
Image
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!
Image
ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ: ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಏರ್‌ಪೋರ್ಟ್​ನ ಟರ್ಮಿನಲ್ 01 ಮತ್ತು 02 ರಲ್ಲಿ ಕೆಐಎಬಿ ಬೇಬಿ ಕ್ಯಾರಿಯರ್ ಮತ್ತು ಹ್ಯಾಂಡ್ ಬ್ಯಾಗ್ ಟ್ರಾಲಿ ಸೇವೆಯನ್ನು ಆರಂಭಿಸಿದೆ. ನೂತನ ಟ್ರಾಲಿಯಲ್ಲಿ 2 ತಿಂಗಳಿನಿಂದ 4 ವರ್ಷದವರೆಗಿನ ಮಕ್ಕಳನ್ನ ಕೂರಿಸಿಕೊಂಡು ಹೋಗಬಹುದಾಗಿದೆ. ಇದು ಪುಟ್ಟ ಮಕ್ಕಳೊಂದಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕೆಂಪೇಗೌಡ ಏರ್‌ಪೋರ್ಟ್ ಆಡಳಿತ ಮಂಡಳಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

2024ರಲ್ಲಿ ಕೆಂಪೇಗೌಡ ಏರ್‌ಪೋರ್ಟ್ ಮೂಲಕ 40.73 ಮಿಲಿಯನ್ ಪ್ರಯಾಣಿಕರ ಸಂಚಾರ

ಅಂದಹಾಗೆ ಕೆಂಪೇಗೌಡ ಏರ್‌ಪೋರ್ಟ್​​ ವಿಮಾನ ನಿಲ್ಥಾಣಕ್ಕೆ ದೇಶ ವಿದೇಶಗಳಿಂದ ಪ್ರಯಾಣಿಕರು ಆಗಮಿಸುತ್ತಾರೆ. ಕಳೆದ ವರ್ಷ 20224ರಲ್ಲಿ 40 ಮಿಲಿಯನ್​ಗೂ ಅಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿತ್ತು. ಕಳೆದ ವರ್ಷ ಜನವರಿ 01 ರಿಂದ ಡಿಸೆಂಬರ್ 31 ರ ಮಧ್ಯರಾತ್ರಿವರೆಗೂ ಒಟ್ಟು 4 ಕೋಟಿ 73 ಲಕ್ಷ ಪ್ರಯಾಣಿಕರು ಕೆಂಪೇಗೌಡ ಏರ್‌ಪೋರ್ಟ್​ನಿಂದ ದೇಶ ಹಾಗೂ ವಿದೇಶಗಳಿಗೆ ಪ್ರಯಾಣಿಸಿದ್ದರು.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್​ನ್ಯೂಸ್​: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24/7 ಸಿಗಲಿದೆ ವೈದ್ಯಕೀಯ ಸೇವೆ

ಇದು 2022ಕ್ಕೆ ಹೋಲಿಕೆ ಮಾಡಿದರೆ 21.1 % ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಅಲ್ಲದೆ ಅಕ್ಟೋಬರ್ 20 ರಂದು ಒಂದೇ ದಿನ ಕೆಐಎಬಿಯಿಂದ 1 ಲಕ್ಷ 26 ಸಾವಿರದ 532 ಜನ ಪ್ರಯಾಣ ಮಾಡುವ ಮೂಲಕ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ ದಿನ ಅನ್ನೂ ಖ್ಯಾತಿ ಕೂಡ ಪಡೆದುಕೊಂಡಿತ್ತು. ಪ್ರತಿದಿನ ಕೆಐಎಬಿಯಿಂದ ವಿವಿಧೆಡೆಗೆ ಸರಾಸರಿ 723 ಟ್ರಿಪ್ಗಳು ಮಾಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:56 am, Wed, 18 June 25

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್