Karnataka High Court: ಸಾರ್ವಜನಿಕರ ಹಣದಲ್ಲಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಅವಕಾಶ ನೀಡುವಂತಿಲ್ಲ: ಹೈಕೋರ್ಟ್

|

Updated on: Jun 08, 2023 | 10:50 AM

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಪಿಎಚ್‌ಐಡಿಸಿ) ಸಂಸ್ಥೆಯು ಪೊಲೀಸ್ ಕ್ವಾರ್ಟರ್ಸ್‌ಗಳನ್ನು ಕಳಪೆಯಾಗಿ ನಿರ್ಮಿಸಿದ ಆರೋಪದ ಮೇಲೆ ಎನ್‌ಕ್ಯಾಶ್ (ನಗದೀಕರಿಸಲಾದ) ಮಾಡಿದ ಬ್ಯಾಂಕ್ ಗ್ಯಾರಂಟಿಯನ್ನು ಹಿಂದಿರುಗಿಸುವಂತೆ ಕೋರಿ ನಿರ್ಮಾಣ ಕಂಪನಿಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

Karnataka High Court: ಸಾರ್ವಜನಿಕರ ಹಣದಲ್ಲಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಅವಕಾಶ ನೀಡುವಂತಿಲ್ಲ: ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ರಾಜ್ಯ ಹೈಕೋರ್ಟ್​​ ಒಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಪಿಎಚ್‌ಐಡಿಸಿ) ಸಂಸ್ಥೆಯು ಪೊಲೀಸ್ ಕ್ವಾರ್ಟರ್ಸ್‌ಗಳನ್ನು ಕಳಪೆಯಾಗಿ ನಿರ್ಮಿಸಿದ ಆರೋಪದ ಮೇಲೆ ಎನ್‌ಕ್ಯಾಶ್ (ನಗದೀಕರಿಸಲಾದ) ಮಾಡಿದ ಬ್ಯಾಂಕ್ ಗ್ಯಾರಂಟಿಯನ್ನು ಹಿಂದಿರುಗಿಸುವಂತೆ ಕೋರಿ ನಿರ್ಮಾಣ ಕಂಪನಿಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಸಾರ್ವಜನಿಕರ ಹಣ ಬಳಸಿ ಕಳಪೆ ಕಾಮಗಾರಿ ನಡೆಸುತ್ತಿರುವ ಎಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆಯೂ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಬ್ಯಾಂಕ್ ಗ್ಯಾರಂಟಿಗಳು ಪ್ರದರ್ಶನಕ್ಕಾಗಿ ಅಲ್ಲ ಮತ್ತು ನಿಗಮವು ಸರಿಯಾದ ಕೆಲಸವನ್ನು ಮಾಡಿದೆ ಎಂದು ಹೈಕೋರ್ಟ್ ಹೇಳಿದೆ. ಇಲ್ಲಿ ಹೈಕೋರ್ಟ್​​ ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸಿದೆ ಫೋಟೋ-ಫ್ರೇಮ್ ಮಾಡಲು ಮತ್ತು ಗೋಡೆಯ ಮೇಲೆ ನೇತುಹಾಕಲು ಬ್ಯಾಂಕ್ ಗ್ಯಾರಂಟಿಯನ್ನು ಒದಗಿಸಲಾಗಿಲ್ಲ, ಅದು ಒಂದು ಉದ್ದೇಶವನ್ನು ಹೊಂದಿದೆ. ಆದರೆ ಇದನ್ನೂ ಕಾರ್ಪೊರೇಷನ್ ಪುನಃ ಪಡೆದುಕೊಳ್ಳಬಹುದು ಇದರಲ್ಲಿ ಯಾವುದೇ ದೋಷ ಇಲ್ಲ ಎಂದು ಹೇಳಿದೆ.

ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 144 ಪೊಲೀಸ್ ಕ್ವಾರ್ಟರ್ಸ್ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕೆಎಸ್‌ಪಿಎಚ್‌ಐಡಿಸಿ 1,15,13,500 ರೂ. ಬ್ಯಾಂಕ್ ಗ್ಯಾರಂಟಿ ಎನ್‌ಕ್ಯಾಶ್ ಮಾಡಿದ ನಂತರ ಪಿಜಿ ಸೆಟ್ಟಿ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕಂಪನಿಯ ಪರ ವಕೀಲರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠದ ಮುಂದೆ ವಾದ ಮಂಡಿಸಿ, ನಿರ್ಮಾಣ ಕಾಮಗಾರಿ ಮುಗಿದಿದ್ದು, ಗುಣಮಟ್ಟ ಪರಿಶೀಲಿಸಿದ ಬಳಿಕ ಬಿಲ್ ಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka High Court: ಅರ್ಚಕರ ಉತ್ತರಾಧಿಕಾರಕ್ಕಾಗಿ ಸಹೋದರರ ಕಿತ್ತಾಟ, ಇದು ತಂದೆಯ ಕಡೆಯಾಗಿರಬೇಕು: ಹೈಕೋರ್ಟ್​

ಕೆಎಸ್‌ಪಿಎಚ್‌ಐಡಿಸಿ (Karnataka State Small Industries Development Corporation Ltd) ಪರ ವಕೀಲರು ವಾದ ಮಂಡಿಸಿ, ನಿರ್ಮಾಣವು ಕಳಪೆ ಗುಣಮಟ್ಟದ್ದಾಗಿದ್ದು, ನಿರ್ಮಾಣ ಪೂರ್ಣಗೊಂಡ ನಂತರ ಕಟ್ಟಡ ಬಿರುಕು ಬಿಟ್ಟಿದೆ. ನೀಡಿದ ಅವಧಿ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲಾಗಿದೆ ಕಳಪೆ ನಿರ್ಮಾಣ ಎಂದು ಅರ್ಜಿದಾರರು ಹೇಳಿದ್ದಾರೆ.

ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಪೂರ್ಣಗೊಂಡ ಪ್ರಮಾಣಪತ್ರ ನೀಡಿದ ನಂತರ ದೂರುಗಳು ಬಂದಿರುವುದರಿಂದ ಪಾಲಿಕೆಯ ಎಂಜಿನಿಯರ್‌ಗಳು ಅಥವಾ ಸಂಬಂಧಪಟ್ಟ ಎಂಜಿನಿಯರ್‌ಗಳು ನಿರ್ಮಾಣದ ಗುಣಮಟ್ಟವನ್ನು ಪರಿಶೀಲಿಸದೆ ಬಿಲ್‌ಗಳನ್ನು ಹೇಗೆ ಪಾವತಿ ಮಾಡಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದು ಸರ್ಕಾರದಿಂದ ಅನುದಾನಿತ ಯೋಜನೆಯಾಗಿದೆ. ಇದು ಸಾರ್ವಜನಿಕ ಹಣ, ಆದ್ದರಿಂದ ಸಾರ್ವಜನಿಕ ಹಣವನ್ನು ಬಳಸಿಕೊಂಡು ನಿರ್ಮಾಣ ಮಾಡುವ ಗುತ್ತಿಗೆದಾರರ ಬಗ್ಗೆ ಗಮನ ಇರಬೇಕು. ಅತ್ಯಂತ ಕಳಪೆ ಕಟ್ಟಡಗಳು ಅಲ್ಲಿ ಜೀವನ ನಡೆಸುವ ಜನರ ಜೀವಕ್ಕೆ ಏನಾದರೂ ಅಪಾಯ ಬಂದರೆ ಯಾರು ಹೊಣೆ, ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಹೈಕೋರ್ಟ್ ತಪ್ಪಿತಸ್ಥ ಎಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ