Bengaluru Night Curfew: ಆಗಸ್ಟ್​ 16ರವರೆಗೆ ಬೆಂಗಳೂರಿನಲ್ಲಿ ನೈಟ್​ ಕರ್ಫ್ಯೂ ಜಾರಿ; ವಿವರ ಇಲ್ಲಿದೆ

| Updated By: ganapathi bhat

Updated on: Aug 04, 2021 | 8:03 PM

Night Curfew in Bengaluru: ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಬೆಂಗಳೂರಲ್ಲಿ ನೈಟ್​ ಕರ್ಫ್ಯೂ ಇರಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.

Bengaluru Night Curfew: ಆಗಸ್ಟ್​ 16ರವರೆಗೆ ಬೆಂಗಳೂರಿನಲ್ಲಿ ನೈಟ್​ ಕರ್ಫ್ಯೂ ಜಾರಿ; ವಿವರ ಇಲ್ಲಿದೆ
ಕೊರೊನಾ ಕರ್ಫ್ಯೂ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಆಗಸ್ಟ್​ 16ರವರೆಗೆ ಬೆಂಗಳೂರಿನಲ್ಲಿ ನೈಟ್​ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ನೈಟ್​ ಕರ್ಫ್ಯೂ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ನೀಡಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಬೆಂಗಳೂರಲ್ಲಿ ನೈಟ್​ ಕರ್ಫ್ಯೂ ಇರಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ. ಕೊರೊನಾ ಮೂರನೇ ಅಲೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ, ಹಾಸನ ಜಿಲ್ಲೆಯಲ್ಲಿ ಕೂಡ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿ ಹಾಸನ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಆಗಸ್ಟ್ 16ರ ವರೆಗೆ ನಿಷೇದಾಜ್ಞೆ ಮುಂದುವರೆಸಿ ಆದೇಶ ಹೊರಡಿಸಲಾಗಿದೆ. ಬಸ್ ನಿಲ್ದಾಣ, ಮೆಟ್ರೋ, ರೈಲ್ವೆ ನಿಲ್ದಾಣ, ಏರ್‌ಪೋರ್ಟ್ ಹೊರತುಪಡಿಸಿ ಉಳಿದೆಡೆ ಜನರು ಗುಂಪು ಸೇರದಂತೆ ಸೂಚನೆ ನೀಡಲಾಗಿದೆ. ಕೊರೊನಾ ಸಂಖ್ಯೆ ಏರಿಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಆಗಸ್ಟ್​ 31ರವರೆಗೆ ಕಟ್ಟುನಿಟ್ಟಿನ ಕ್ರಮ ಹೇರಲಾಗಿದೆ. ಧಾರ್ಮಿಕ ಸೇವೆಗಳು, ಉತ್ಸವಗಳು, ಜಾತ್ರೆಗಳಿಗೆ ನಿಷೇಧ ಹೇರಲಾಗಿದೆ. ಹಾಸನ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ​ ಆದೇಶ ಮಾಡಿದ್ದಾರೆ. ವಾರಾಂತ್ಯ, ರಜಾದಿನದಲ್ಲಿ ದೇಗುಲಗಳಿಗೆ ಪ್ರವೇಶ ನಿರ್ಬಂಧ ಹಾಕಲಾಗಿದೆ. ಹಾಸನ ಜಿಲ್ಲೆಯಲ್ಲಿ ಸಭೆ, ಸಮಾರಂಭ, ಱಲಿ, ಪ್ರತಿಭಟನೆ, ಎಲ್ಲ ರೀತಿಯ ಮನರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

ಮದುವೆಗಳಿಗೆ 50, ಅಂತ್ಯಕ್ರಿಯೆಗೆ 20 ಜನರಿಗೆ ಅವಕಾಶ ನೀಡುವ ಬಗ್ಗೆ ನಿರ್ಬಂಧ ಹಾಕಲಾಗಿದೆ. ಹೋಮ್ ಸ್ಟೇ, ರೆಸಾರ್ಟ್​ಗೆ ತೆರಳಲು ಕೊವಿಡ್​ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ರೈಲು, ಬಸ್ ನಿಲ್ದಾಣದಲ್ಲಿ ಹೊರರಾಜ್ಯದವರಿಗೆ ಕೊವಿಡ್ ಟೆಸ್ಟ್ ಮಾಡಲಾಗುವ ಬಗ್ಗೆಯೂ ಜಿಲ್ಲಾಧಿಕಾರಿ ಗಿರೀಶ್ ಆದೇಶ ಹೊರಡಿಸಿದ್ದಾರೆ.

ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಹೊರರಾಜ್ಯದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಮಾಡಲಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಕೊರೊನ ಹೆಚ್ಚುತ್ತಿರೊ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ವಾರಾಂತ್ಯದಲ್ಲಿ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ನಿಷೇಧ; ಹೊಸ ಸಮಯ, ನಿಯಮಗಳ ಮಾಹಿತಿ ಇಲ್ಲಿದೆ

ವರ್ಷದ ಬಳಿಕ ವುಹಾನ್​ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ; ಪ್ರತಿಯೊಬ್ಬರಿಗೂ ಎನ್​​ಎಟಿ ಮಾಡುವುದಾಗಿ ಹೇಳಿದ ಸ್ಥಳೀಯ ಆಡಳಿತ

(Coronavirus Covid19 Night Curfew in Bengaluru till August 16 details here)

Published On - 7:49 pm, Wed, 4 August 21