AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಿರ್ವಹಣೆ, ನೆರೆ ಪರಿಹಾರಕ್ಕೆ ನೂತನ ಸಚಿವರಿಗೆ ಜಿಲ್ಲೆ ಹಂಚಿಕೆ; ಯಾವ ಜಿಲ್ಲೆಗೆ ಯಾರು ಉಸ್ತುವಾರಿ? ಇಲ್ಲಿದೆ ವಿವರ

ಕೊರೊನಾ ನಿರ್ವಹಣೆ, ನೆರೆ ಕಾರ್ಯಗಳಿಗೆ ಉಸ್ತುವಾರಿಯಾಗಿ ನೂತನ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ನಿರ್ವಹಣೆ, ನೆರೆ ಪರಿಹಾರಕ್ಕೆ ನೂತನ ಸಚಿವರಿಗೆ ಜಿಲ್ಲೆ ಹಂಚಿಕೆ; ಯಾವ ಜಿಲ್ಲೆಗೆ ಯಾರು ಉಸ್ತುವಾರಿ? ಇಲ್ಲಿದೆ ವಿವರ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on:Aug 04, 2021 | 9:00 PM

Share

ಬೆಂಗಳೂರು: ಕರ್ನಾಟಕ ಸಂಪುಟದ ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ಸಚಿವರು ನಾಳೆಯೇ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 4) ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಕೊರೊನಾ 3ನೇ ಅಲೆ, ನೆರೆ ವೀಕ್ಷಣೆ ಜತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಜೆಯಷ್ಟೇ ಸಿಎಂ ಬೊಮ್ಮಾಯಿ ತಿಳಿಸಿದ್ದರು. ಇದೀಗ ಜಿಲ್ಲಾವಾರು ಉಸ್ತುವಾರಿಯಾಗಿ ನೂತನ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

29 ನೂತನ ಸಚಿವರಿಗೆ ಜಿಲ್ಲೆಗಳ ಹಂಚಿಕೆ ಮಾಡಿ ಆದೇಶ; ಯಾವ ಜಿಲ್ಲೆಗೆ ಯಾವ ಸಚಿವರು? ಕೊರೊನಾ ನಿರ್ವಹಣೆ, ನೆರೆ ಕಾರ್ಯಗಳಿಗೆ ಉಸ್ತುವಾರಿಯಾಗಿ ನೂತನ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ನೆರೆ ಪರಿಹಾರ ಹಾಗೂ ಕೊರೊನಾ ನಿರ್ವಹಣೆ ಉಸ್ತುವಾರಿ ಸಚಿವರು ಎಂಬ ಪಟ್ಟಿ ಇಲ್ಲಿ ನೀಡಲಾಗಿದೆ.

  • ಗೋವಿಂದ ಕಾರಜೋಳ- ಬೆಳಗಾವಿ
  • ಕೆ.ಎಸ್ ಈಶ್ವರಪ್ಪ- ಶಿವಮೊಗ್ಗ
  • ಆರ್. ಅಶೋಕ್‌- ಬೆಂಗಳೂರು ನಗರ
  • ಬಿ. ಶ್ರೀರಾಮುಲು- ಚಿತ್ರದುರ್ಗ
  • ಉಮೇಶ್ ಕತ್ತಿ- ಬಾಗಲಕೋಟೆ
  • ಎಸ್. ಅಂಗಾರ- ದಕ್ಷಿಣ ಕನ್ನಡ
  • ಮಾಧುಸ್ವಾಮಿ- ತುಮಕೂರು,
  • ಆರಗ ಜ್ಞಾನೇಂದ್ರ- ಚಿಕ್ಕಮಗಳೂರು
  • ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ- ರಾಮನಗರ
  • ಸಿ.ಸಿ. ಪಾಟೀಲ್‌- ಗದಗ
  • ಆನಂದ್‌ಸಿಂಗ್‌- ಬಳ್ಳಾರಿ, ವಿಜಯನಗರ
  • ಕೋಟ ಶ್ರೀನಿವಾಸ ಪೂಜಾರಿ- ಕೊಡಗು
  • ಪ್ರಭು ಚೌಹಾಣ್‌- ಬೀದರ್‌
  • ಮುರುಗೇಶ್ ನಿರಾಣಿ- ಕಲಬುರಗಿ
  • ಶಿವರಾಮ್ ಹೆಬ್ಬಾರ್‌- ಉತ್ತರ ಕನ್ನಡ
  • ಎಸ್‌.ಟಿ. ಸೋಮಶೇಖರ್- ಮೈಸೂರು, ಚಾಮರಾಜನಗರ
  • ಬಿ.ಸಿ. ಪಾಟೀಲ್‌- ಹಾವೇರಿ
  • ಭೈರತಿ ಬಸವರಾಜ್‌- ದಾವಣಗೆರೆ
  • ಡಾ.ಕೆ. ಸುಧಾಕರ್‌- ಚಿಕ್ಕಬಳ್ಳಾಪುರ
  • ಕೆ. ಗೋಪಾಲಯ್ಯ- ಹಾಸನ
  • ಶಶಿಕಲಾ ಜೊಲ್ಲೆ- ವಿಜಯಪುರ
  • ಎಂಟಿಬಿ ನಾಗರಾಜ್- ಬೆಂಗಳೂರು ಗ್ರಾಮಾಂತರ
  • ಕೆ.ಸಿ. ನಾರಾಯಣಗೌಡ- ಮಂಡ್ಯ
  • ಬಿ.ಸಿ. ನಾಗೇಶ್‌- ಯಾದಗಿರಿ
  • ವಿ. ಸುನಿಲ್ ಕುಮಾರ್‌- ಉಡುಪಿ
  • ಹಾಲಪ್ಪ ಆಚಾರ್‌- ಕೊಪ್ಪಳ
  • ಶಂಕರ್ ಪಾಟೀಲ್‌- ಧಾರವಾಡ
  • ಮುನಿರತ್ನ- ಕೋಲಾರ

ಎಸ್​ಟಿಪಿಎಸ್​​ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್​ಟಿ ಸೆಕ್ರೆಟರಿಯೇಟ್​ ರಚನೆ ತೀರ್ಮಾನ ಮಾಡುತ್ತೇವೆ. ಎಸ್​ಟಿ ಸಮುದಾಯದ ಬೇಡಿಕೆಯಂತೆ ಸೆಕ್ರೆಟರಿಯೇಟ್​ ರಚನೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಅಭಿಯಾನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದೂ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು

Karnataka Cabinet: ಬಸವರಾಜ ಬೊಮ್ಮಾಯಿ ಟೀಂನ ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ

(District In charge for Covid19 Coronavirus and Flood Relief works in Karnaraka details here)

Published On - 8:56 pm, Wed, 4 August 21