ವರ್ಷದ ಬಳಿಕ ವುಹಾನ್ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ; ಪ್ರತಿಯೊಬ್ಬರಿಗೂ ಎನ್ಎಟಿ ಮಾಡುವುದಾಗಿ ಹೇಳಿದ ಸ್ಥಳೀಯ ಆಡಳಿತ
ವುಹಾನ್ನಲ್ಲಿಯೇ ಮೊದಲು ಕೊರೊನಾ ವೈರಸ್ ಹುಟ್ಟಿದ್ದಾದರೂ, ನಂತರ ಅಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಸೋಂಕನ್ನು ತೊಡೆದುಹಾಕಲಾಗಿತ್ತು. ಇದೀಗ ಮತ್ತೆ ಏಳು ವಲಸೆ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿದೆ.
ಬೀಜಿಂಗ್: ಮಧ್ಯ ಚೀನಾದ ವುಹಾನ್(Wuhan)ನಲ್ಲಿ ಒಂದು ವರ್ಷದ ನಂತರ ಮತ್ತೆ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಅದರಲ್ಲೂ ಈಗ ಕೊರೊನಾ (Coronavirus) ಪತ್ತೆಯಾದವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಸ್ಥಳೀಯವಾಗಿಯೇ ಪತ್ತೆಯಾದ ಪ್ರಕರಣ ಎಂದು ಅಲ್ಲಿನ ಆಡಳಿತ ಹೇಳಿದೆ. ಹಾಗೇ, ಇದೀಗ ಕೊರೊನಾ ಪತ್ತೆಯಾದ ಬೆನ್ನಲ್ಲೇ, ಇಡೀ ವುಹಾನ್ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ತಪಾಸಣೆ ಮಾಡುವುದಾಗಿ ಸ್ಥಳೀಯ ಸರ್ಕಾರ ತಿಳಿಸಿದೆ.
ವುಹಾನ್ನಲ್ಲಿ ಸುಮಾರು 11 ಮಿಲಿಯನ್ ಜನರಿದ್ದಾರೆ. ಇಲ್ಲೀಗ 1 ವರ್ಷಕ್ಕಿಂತಲೂ ಹೆಚ್ಚು ಸಮಯವಾದ ಬಳಿಕ ಈಗ ಸ್ಥಳೀಯವಾಗಿಯೇ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಹಾಗಾಗಿ, ಕೂಡಲೇ ಸಮಗ್ರ ನ್ಯೂಕ್ಲಿಯರ್ ಆ್ಯಸಿಡ್ ಟೆಸ್ಟಿಂಗ್ (NAT)ನ್ನು ಪ್ರಾರಂಭಿಸುತ್ತೇವೆ. ಇಲ್ಲಿನ ಪ್ರತಿಯೊಬ್ಬರಿಗೂ ಈ ಟೆಸ್ಟ್ ಮಾಡಲಾಗುವುದು ಎಂದು ವುಹಾನ್ ಹಿರಿಯ ಅಧಿಕಾರಿ ಲಿ ತಾವೋ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವುಹಾನ್ನಲ್ಲಿಯೇ ಮೊದಲು ಕೊರೊನಾ ವೈರಸ್ ಹುಟ್ಟಿದ್ದಾದರೂ, ನಂತರ ಅಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಸೋಂಕನ್ನು ತೊಡೆದುಹಾಕಲಾಗಿತ್ತು. ಇದೀಗ ಮತ್ತೆ ಏಳು ವಲಸೆ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಚೀನಾಕ್ಕೆ ಡೆಲ್ಟಾ ರೂಪಾಂತರಿ ವೈರಾಣುವಿನ ಕಾಟವೂ ಅಧಿಕವಾಗಿದೆ. ಸುಮಾರು 300 ಡೆಲ್ಟಾ ರೂಪಾಂತರಿ ಪ್ರಕರಣಗಳು ಪತ್ತೆಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಅವಧಿ ವಿಸ್ತರಣೆ; ದಾವಣಗೆರೆಯಲ್ಲಿ ವಾರಾಂತ್ಯಕ್ಕೆ ದೇಗುಲಗಳಿಗೆ ಪ್ರವೇಶವಿಲ್ಲ